ಶಿವಮೊಗ್ಗದ ರಂಗತಂಡದಿಂದ ಬೆಂಗಳೂರಿನಲ್ಲಿ ನಾಟಕೋತ್ಸವ
ಶಿವಮೊಗ್ಗದ ಹೆಸರಾಂತ ರಂಗತಂಡವಾದ ಹೊಂಗಿರಣ ಈಗ ಬೆಂಗಳೂರಿನಲ್ಲಿ ಒಂದು ನಾಟಕೋತ್ಸವನ್ನು ಆಯೋಜನೆ ಮಾಡಿದೆ. ಹೊಂಗಿರಣೋತ್ಸವ ಹೆಸರಿನಲ್ಲಿ 7ನೇ ಬಾರಿ ಈ ಕಾರ್ಯಕ್ರಮ ನಡೆಯುತ್ತಿದೆ.
ಮೂರು ದಿನಗಳ ನಾಟಕೋತ್ಸವ ಇದಾಗಿದ್ದು, ಅಕ್ಟೋಬರ್ 12, 13, ಹಾಗೂ 14 ರಂದು ನಾಟಕಗಳ ಪ್ರದರ್ಶನ ಆಗುತ್ತಿದೆ. ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ನಾಟಕಗಳು ಶುರು ಆಗಲಿವೆ.

ಮೊದಲ ದಿನ : ನನ್ನ ಪ್ರೀತಿಯ ನರಕ..!?
ರಚನೆ : ಎಸ್ ಆರ್ ಗಿರೀಶ್ (ಚಂದ್ರಗಿರಿ)
ನಿರ್ದೇಶನ : ಡಾ. ಸಾಸ್ವೆಹಳ್ಳಿ ಸತೀಶ್
ಅಭಿನಯ : ಹೊಂಗಿರಣ
ಎರಡನೇ ದಿನ : ಬಯಲು ಸೀಮೆ ಕಟ್ಟೆಪುರಾಣ
ರಚನೆ : ಬಿ ಚಂದ್ರೇಗೌಡ
ನಿರ್ದೇಶನ : ಎಸ್ ಆರ್ ಗಿರೀಶ್ (ಚಂದ್ರಗಿರಿ)
ಅಭಿನಯ : ನಮ್ ಟೀಮ್, ಶಿವಮೊಗ್ಗ

ಮೂರನೇ ದಿನ : ವೀರ ಉತ್ತರಕುಮಾರ
ರಚನೆ, ವಿನ್ಯಾಸ, ನಿರ್ದೇಶನ : ಡಾ. ಸಾಸ್ವೆಹಳ್ಳಿ ಸತೀಶ್
ಅಭಿನಯ : ಹೊಂಗಿರಣ
ಈ ಮೂರು ನಾಟಕಗಳು ಹಾಸ್ಯಮಯವಾಗಿವೆ. ರಂಗಭೂಮಿಯಲ್ಲಿ ಒಳ್ಳೆಯ ಹೆಸರು ಮಾಡಿರುವ ಡಾ. ಸಾಸ್ವೆಹಳ್ಳಿ ಸತೀಶ್ ಅವರ ಸಾರಥ್ಯದಲ್ಲಿ ಈ ನಾಟಕಗಳು ರೂಪುಗೊಂಡಿವೆ. ಮುಂದಿನ ತಿಂಗಳು ಬಿಡುವು ಮಾಡಿಕೊಂಡು ನೀವು ಈ ನಾಟಕಗಳನ್ನು ನೋಡಿ.












Click it and Unblock the Notifications