ಅನ್ಯಭಾಷಿಕರಿಂದ ಅನ್ಯಭಾಷಿಕರಿಗೆ "ಕನ್ನಡ ಕ್ಲಾಸ್" - ಇದು "ಮಾಸ್" ಅಂದ್ರು ಕನ್ನಡಿಗರು!
ಕರ್ನಾಟಕದಲ್ಲಿ ಇತ್ತೀಚಿನಗಳಲ್ಲಿ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಬಂದ ಅನ್ಯಭಾಷಿಕರು ಇಲ್ಲಿನ ಭಾಷೆಯನ್ನು ಕಲಿಯದೆ, ಕನ್ನಡಿಗರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಇರುವುದೇ ಹೆಚ್ಚು. ಅನ್ಯಭಾಷಿಕರು ಬೆಂಗಳೂರಿನ ಆಟೋಕಾರರು ಹಾಗು ಇಲ್ಲಿನ ವ್ಯಾಪಾರಿಗಳು, ಜನರೊಂದಿಗೆ ಕಿರಿಕಿಕ್ ಮಾಡಿಕೊಳ್ಳುವುದು, ವಿನಾಯಕಾರಣ ಜಗಳಕ್ಕೆ ಇಳಿಯುವುದು ಅದು ವೈರಲ್ ಆಗುವುದು ನೋಡಿಯೇ ಇರ್ತೀರಿ.
ಇದೀಗ ಕೇರಳದಿಂದ ಬಂದಿರುವ ಮಲಯಾಳಿಗರೇ ಒಂದು ಟೀಮ್ ಮಾಡಿಕೊಂಡು ಕನ್ನಡ ಕಲಿಸಲು ಮುಂದಾಗಿದ್ದಾರೆ. ಇದರಲ್ಲಿ ಮಲಯಾಳಿಗರು ಅನ್ಯಭಾಷಿಕರಿಗೆ ಹಾಗೂ ಮಲಯಾಳಿಗರಿಗೆ ಕನ್ನಡವನ್ನು ಕಲಿಸುತ್ತಿದ್ದಾರೆ. ಇಲ್ಲಿನ ಭಾಷೆ ಹಾಗೂ ಜನರ ಬಗ್ಗೆ ಅವರಿಗೆ ಇರುವ ಗೌರವ ಹಾಗೂ ಕನ್ನಡ ಕಲಿಯಬೇಕು, ಕಲಿಸಬೇಕು ಎನ್ನುವ ಇಚ್ಛೆಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಅನ್ಯಭಾಷಿಕರಿಂದ ಬರೀ ನೆಗೆಟಿವ್ ಕಮೆಂಟ್‌ಗಳನ್ನೇ ಕೇಳಿದ್ದ ಕನ್ನಡಿಗರು ಮಲಯಾಳಿಗರ ಈ ವಿನೂತ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಬೆಂಗಳೂರಲ್ಲಿ ಎಲ್ಲಾ ಭಾಷಿಕರೂ ಇದ್ದಾರೆ. ಅದರಲ್ಲೂ ಮಲಯಾಳಿಗರ ಸಂಖ್ಯೆ ಜಾಸ್ತಿಯೇ ಇದೆ. ಆದರೆ, ನಾರ್ಥಿಗಳಂತೆ ದಕ್ಷಿಣ ಭಾರತದವರು ವರ್ತಿಸುವುದಿಲ್ಲ. ಕನ್ನಡಿಗರೊಂದಿಗೆ ಅನ್ಯೂನ್ಯವಾಗಿ ಬದುಕು ಕಟ್ಟಿಕೊಂಡ ಉದಾಹರಣೆ ಇದೆ. ಅಲ್ಲೊಂದು ಇಲ್ಲೊಂದು ಘಟನೆಗಳು ನಡೆಯುತ್ತಿರುವುದು ಸಹ ಇದೆ. ಇದೀಗ ಮಲಯಾಳಿಗರು ಕನ್ನಡಿಗರೊಂದಿಗೆ ಕೂಡಿ ಬಾಳುತ್ತಿದ್ದಾರೆ.
ಕರು ವೆಬ್‌ಸೈಟ್: ಮಲಯಾಳಿಗರು ಕರ್ನಾಟಕಕ್ಕೆ ಬರುವ ಮಲಯಾಳಿಗರು ಹಾಗೂ ಅನ್ಯಭಾಷಿಕರಿಗೆ ಕನ್ನಡ ಕಲಿಸಲು ಮುಂದಾಗಿದ್ದಾರೆ. ಇದರ ಭಾಗವಾಗಿ ಕರುಮಿತ್ರ (ಕರುಫ್ರೆಂಡ್ಸ್ https://karumitra.com/about) ಎನ್ನುವ ವೆಬ್‌ಸೈಟ್ ಪ್ರಾರಂಭಿಸಿದ್ದಾರೆ.ಈ ವೆಬ್‌ಸೈಟ್‌ನ ಮೂಲಕ ಅನ್ಯ ಭಾಷಿಕರಿಗೆ ಕನ್ನಡ ಕಲಿಸುತ್ತಿದ್ದಾರೆ.
ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರುವವರಿಗೆ ಕನ್ನಡ ಕಲಿಸಲಾಗುತ್ತಿದೆ. ಇಲ್ಲಿ ಓದಲು ಹಾಗೂ ಬ್ಯುಸಿನೆಸ್ ಮಾಡಲು ಹಾಗೂ ಕೆಲಸಕ್ಕೆ ಬರುವವರಿಗೆ ಕನ್ನಡವನ್ನು ಹೇಳಿಕೊಡಲಾಗ್ತಿದೆ.
ಕರ್ನಾಟಕ ರಕ್ಷಣಾ ವೇದಿಕೆ ಸಹಕಾರ: ಇನ್ನು ಕರುಮಿತ್ರಗೆ ಕರ್ನಾಟಕ ರಕ್ಷಣಾ ವೇದಿಕೆ ನೆರವು ನೀಡಿದೆ. ಕರವೇ ಸಹಕಾರದೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಿರುವುದಾಗಿ ಈ ಅಭಿಯಾನ ಪ್ರಾರಂಭಿಸಿದವರು ಹೇಳಿದ್ದಾರೆ. ಕರುಮಿತ್ರ ಎನ್ನುವುದು ಕರುನಾಡ ಮಿತ್ರ ಎಂಬರ್ಥದಲ್ಲಿ ಇದೆ. ಇದರ ಸಂಸ್ಥಾಪಕರು ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಒಂದು ರಾಜ್ಯಕ್ಕೆ ಬಂದರೆ ಆ ರಾಜ್ಯದ ಭಾಷೆ ಹಾಗೂ ಸಂಪ್ರದಾಯಕ್ಕೆ ಗೌರವ ಕೊಡಬೇಕು.
ಕರ್ನಾಟಕ ನಮಗೆ ಅನ್ನ ಕೊಡ್ತಿದೆ. ಹೀಗಾಗಿ, ಇಲ್ಲಿನ ಭಾಷೆಯನ್ನು ಕಲಿಯುವ ಬದ್ಧತೆ ನಮಗೆಲ್ಲ ಇರಬೇಕು ಎಂದಿದ್ದಾರೆ. ಕನ್ನಡ ಭಾಷೆಯನ್ನು ಮನಸ್ಸಿನಿಂದ ಗೌರವಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
>they come
— Balabatti (ಬೀಫ್ ಪರಿವಾರ) (@_kalburgi__) November 4, 2024
>they learn
>they replace https://t.co/J86XGIvy6h pic.twitter.com/HHGgVYqPDp
ಉಚಿತ ಕ್ಲಾಸ್: ಮಲಯಾಳಿಗರಿಗೆ ಕರುಮಿತ್ರದಿಂದ ಉಚಿತ ಕನ್ನಡ ಕಲಿಸಲಾಗುತ್ತಿದೆ. ಈಗಾಗಲೇ ಕನ್ನಡ ಕಲಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎನ್ನಲಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ನೋಡಿ ರಾಜ್ಯೋತ್ಸವಕ್ಕೆ...
ಅಭಿಷೇಕ್ ಎನ್ನುವವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದು, ಕನ್ನಡ ರಾಜ್ಯೋತ್ಸವ ಆಚರಣೆ ಅಂತ ಕೇರಳದಿಂದ ಚೆಂಡೆ ಹೊಡೆಯೋರನ್ನ ಕರೆಸ್ತೀರಲ್ಲ ನಿಮಗೆ ಯಾವುದರಲ್ಲಿ ಹೊಡೀಬೇಕು ಅಂತ ಕೇಳಿದ್ದಾರೆ.












Click it and Unblock the Notifications