• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಂಗಸೌರಭ ನಾಟಕಗಳಿಗೆ ರಕ್ಷಿತ್ ಶೆಟ್ಟಿ ಬಳಗದಿಂದ ಆಹ್ವಾನ

By Mahesh
|

ಬೆಂಗಳೂರು, ಅ.31: ನಗರದ ಹವ್ಯಾಸಿ ತಂಡ ರಂಗ ಸೌರಭಕ್ಕೆ 15 ವರ್ಷ ತುಂಬಿದ ಸಂಭ್ರಮ. ಈ ಸಂದರ್ಭದಲ್ಲಿ ನವೆಂಬರ್ ತಿಂಗಳ ವಾರಾಂತ್ಯಗಳಲ್ಲಿ ವೈವಿಧ್ಯಮಯ ನಾಟಕಗಳ ಪ್ರದರ್ಶನವಿರುತ್ತದೆ ತಪ್ಪದೇ ವೀಕ್ಷಿಸಿ ಎಂದು ನಟ, ರಂಗಭೂಮಿ ಕಲಾವಿದ ರಕ್ಷಿತ್ ಶೆಟ್ಟಿ ಕೋರಿದ್ದಾರೆ.

ರಕ್ಷಿತ್ ಶೆಟ್ಟಿ ಜೊತೆಗೆ ರಂಗ ಸೌರಭ ತಂಡ ಪ್ರತಿಭೆಯಾದ ಪ್ರಮೋದ್ ಶೆಟ್ಟಿ(ಉಳಿದವರು ಕಂಡಂತೆ ಚಿತ್ರದ ದಿನೇಶನ ಪಾತ್ರಧಾರಿ), ನಿರೂಪಕಿ, ನಟಿ ಶೀತಲ್ ಶೆಟ್ಟಿ, ನಟ ರಿಷಬ್ ಶೆಟ್ಟಿ ಮುಂತಾದವರು ತಂಡಕ್ಕೆ ಶುಭ ಹಾರೈಸಿ ನಾಟಕ ನೋಡುವಂತೆ ಕೋರಿದ್ದಾರೆ. ಇನ್ನೂ ಅನೇಕ ಕಿರುತೆರೆ ಕಲಾವಿದರು ರಂಗ ಸೌರಭಕ್ಕೆ ಶುಭ ಹಾರೈಸಿದ್ದಾರೆ.

ಕರ್ನಾಟಕ ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ತೂಗು ತೊಟ್ಟಿಲು. ದೈನಂದಿನ ಜಂಜಾಟದ ಹಾಗೂ ಯಾಂತ್ರಿಕ ಹೋರಾಟದ ಬದುಕಿನ ಶೈಲಿ ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ ರಂಗಭೂಮಿ ತನ್ನದೇ ಆದ ರೀತಿಯಲ್ಲಿ ಯಾಂತ್ರಿಕ ಬದುಕಿಗೆ ಬಣ್ಣ ತುಂಬುತ್ತಾ, ಏಕತಾನತೆಯನ್ನು ಹೋಗಲಾಡಿಸುತ್ತಾ ಬದುಕಿಗೆ ಹೊಸ ಹುಮ್ಮಸ್ಸನ್ನು ತುಂಬುವ ಪ್ರಯತ್ನದಲ್ಲಿ ಸದಾ ತೊಡಗಿಸಿಕೊಂಡಿದೆ. ಹಲವಾರು ರಂಗ ತಂಡಗಳು ಸಕ್ರಿಯವಾಗಿ ಕ್ರಿಯಾತ್ಮಕ ಮಾಡುತ್ತಾ ಬಂದಿವೆ. [ಮೈಸೂರು ಮಲ್ಲಿಗೆ, ಗಂಗಾವಾತರಣ ನಾಟಕ ಯಾವತ್ತಿದೆ?]

ಅಂಥ ಒಂದು ಕರ್ನಾಟಕದ ಹೆಮ್ಮೆಯ ತಂಡ ' ರಂಗಸೌರಭ'. 1999ರಲ್ಲಿ ಜನ್ಮ ತಾಳಿದ ರಂಗಸೌರಭ ತಂಡ ರಂಗಾಸಕ್ತರ ಹಾಗೂ ರಂಗ ಆಕಾಂಕ್ಷಿಗಳ ಕ್ರಿಯಾಶೀಲತೆಯನ್ನು , ನಮ್ಮ ಕಲೆ ಮತ್ತು ಸಂಸ್ಕೃತಿಗಳ ಮೌಲ್ಯವನ್ನು ತಮ್ಮ ಪ್ರಯೋಗಗಳ ಮೂಲಕ ಹೆಚ್ಚಿಸುತ್ತಾ ಬಂದಿದ್ದು, ಈ ವರ್ಷ ತನ್ನ 15 ವರ್ಷಗಳ ಸಾರ್ಥಕ ರಂಗ ಪಯಣವನ್ನು ಪೂರೈಸಿದೆ. ರಂಗಭೂಮಿಯ ಮೇಲೆ ವಿಶೇಷ ಒಲವಿದ್ದ ವಿಜಯಾ ಕಾಲೇಜಿನ (ಬಿ.ಎಚ್.ಎಸ್ ಪ್ರಥಮ ಕಾಲೇಜು) ವಿದ್ಯಾರ್ಥಿ ವೃಂದದ ಕನಸಿನ ಕೂಸು "ರಂಗಸೌರಭ".

15 ವರ್ಷಗಳಲ್ಲಿ 13 ನಾಟಕ ನೀಡಿರುವ ರಂಗ ಸೌರಭ

15 ವರ್ಷಗಳಲ್ಲಿ 13 ನಾಟಕ ನೀಡಿರುವ ರಂಗ ಸೌರಭ

ರಂಗಸೌರಭ ತಂಡ ತನ್ನ ರಂಗ ಪಯಣವನ್ನು ಅಂಬೆಗಾಲಿಕ್ಕುತ್ತಾ ಪ್ರಾರಂಭಿಸಿದ್ದು "ಅಧೊರಕ್ತಿ" ಎಂಬ ನಾಟಕದ ಮೂಲಕ. 15 ವರ್ಷಗಳಲ್ಲಿ 13 ಯಶಸ್ವಿ ನಾಟಕಗಳನ್ನು ರಂಗಲೋಕಕ್ಕೆ ನಮ್ಮ ತಂಡ ಅನಾವರಣಗೊಳಿಸಿದೆ.

ರಂಗಸೌರಭದ ಎಲ್ಲಾ ನಾಟಕಗಳೂ ತಮ್ಮದೇ ಆದ ಸೂಕ್ಷ್ಮತೆ, ವಿಭಿನ್ನತೆ ಹಾಗೂ ಕ್ರಿಯಾತ್ಮಕತೆಯಿಂದ ರಂಗಾಸಕ್ತರ ಗಮನ ಸೆಳೆದರೂ, ರಂಗಾವತರಣ ಹಾಗೂ ಮೈಸೂರು ಮಲ್ಲಿಗೆ ನಾಟಕಗಳು ನಮ್ಮ ತಂಡದ ಕೀರ್ತಿಯ ಕೀರಿಟದ ಹೆಮ್ಮೆಯ ಗರಿಗಳು. ಈ ರಂಗಾಭಿವ್ಯಕ್ತಿ ಹೆಚ್ಚಿನ ನಿರ್ದೇಶಕರ, ಕಲಾವಿದರ, ತಾಂತ್ರಿಕರ, ವಿಮರ್ಶಕರ ಹಾಗೂ ಎಲ್ಲಾ ರಂಗಾಸಕ್ತರ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ.

ರಂಗ ಕಲಾವಿದ ರಕ್ಷಿತ್ ಶೆಟ್ಟಿ ಆಹ್ವಾನ

ನಟ, ನಿರ್ದೇಶಕ, ರಂಗ ಕಲಾವಿದ ರಕ್ಷಿತ್ ಶೆಟ್ಟಿ ಆಹ್ವಾನ

ಮೈಸೂರು ಮಲ್ಲಿಗೆ ಹಾಗೂ ಗಂಗಾವತರಣ

ಮೈಸೂರು ಮಲ್ಲಿಗೆ ಹಾಗೂ ಗಂಗಾವತರಣ

* ಕರ್ನಾಟಕ ಸರ್ಕಾರ ಏರ್ಪಡಿಸಿದ್ದ ಜಾನಪದ ಜಾತ್ರೆಯಲ್ಲಿ ಜಾನಪದ ಪ್ರಕಾರ- ಕಂಗೀಲು ಕುಣಿತವನ್ನು ಮೊದಲ ಬಾರಿಗೆ ಪ್ರಸ್ತುತ ಪಡಿಸಿದ ಹೆಗ್ಗಳಿಕೆ ರಂಗಸೌರಭದ್ದು.

* ರಂಗಸೌರಭದ ನಾಟಕಗಳೆಂದೇ ಪ್ರಖ್ಯಾತಿ ಪಡೆದಿರುವ ಮೈಸೂರು ಮಲ್ಲಿಗೆ ಹಾಗೂ ಗಂಗಾವತರಣ ದೇಶದಾದ್ಯಂತ 40ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.

* ಭಾರತ ಯಾತ್ರಾ ಕೇಂದ್ರದ ರಾಜ್ಯ ಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಗಳಲ್ಲಿ ರಂಗಸೌರಭ ಅನೇಕ ಪ್ರಶಸ್ತಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡು ಸಾಧನೆಯ ಹೂರಣಕ್ಕೆ ಮತ್ತಷ್ಟು ಸಿಹಿಯನ್ನು ಹೆಚ್ಚಿಸಿಕೊಂಡಿದೆ.

ರಂಗಸೌರಭ ತಂಡ 250ಕ್ಕೂ ಮೀರಿದ ಸದಸ್ಯರು

ರಂಗಸೌರಭ ತಂಡ 250ಕ್ಕೂ ಮೀರಿದ ಸದಸ್ಯರು

ರಂಗಸೌರಭ ತಂಡ 250ಕ್ಕೂ ಮೀರಿದ ತನ್ನ ಸದಸ್ಯರಿಗೆ ಹಲವಾರು ಕಾರ್ಯಗಾರಗಳನ್ನು ಏರ್ಪಡಿಸಿ ರಂಗಸೂಕ್ಷ್ಮತೆಗಳ ಬಗ್ಗೆ, ನಟನೆಯ ಬಗ್ಗೆ, ತಲಸ್ಪರ್ಶಿಯಾದ ಮಾರ್ಗದರ್ಶನ ನೀಡಿದ್ದರ ಫಲವಾಗಿ ಇಂದು ಹಿರಿತೆರೆ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ರಂಗಸೌರಭದ ನಟರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮೂಕಾಭಿನಯದ ಮೂಲಕ ವಿನೂತನ ನೃತ್ಯ ರಾಪಕವನ್ನು ಪ್ರದರ್ಶಿಸಿದ್ದಾರೆ.

2010ರಲ್ಲಿ ಹರಿಯಾಣದ ರೋಹ್ಟಕ್ ನಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ನಮ್ಮ ತಂಡ ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದು ನಮ್ಮ ತಂಡದ " ಶಸ್ತ್ರ ಪರ್ವ" ನಾಟಕ ಪ್ರಥಮ ಬಹುಮಾನವನ್ನು ಬಾಚಿಕೊಂಡಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಹೊಸ ದಾಖಲೆ.

ರಂಕುಲಾಟ- ಉತ್ಸವದ ಬಗ್ಗೆ

ರಂಕುಲಾಟ- ಉತ್ಸವದ ಬಗ್ಗೆ

ರಂಗಸೌರಭ ತಂಡಕ್ಕೆ 15 ವರ್ಷ ತುಂಬಿದ ಸಂಭ್ರಮವನ್ನು ವಿಶಿಷ್ಟವಾಗಿ, ಅರ್ಥಗರ್ಭಿತವಾಗಿ, ರಚನಾತ್ಮಕವಾಗಿ ಎಲ್ಲಾ ರಂಗಾಸಕ್ತರ ಸಮ್ಮುಖದಲ್ಲಿ ಆಚರಿಸುವ ಕನಸು ಹೊತ್ತಿದೆ. ಒಂದು ಇಡೀ ತಿಂಗಳ 4 ವಾರಾಂತ್ಯಗಳಲ್ಲಿ ಇಡೀ ಕರ್ನಾಟಕದ ಪ್ರತಿಭೆಗಳನ್ನು ಈ ರಂಗೋತ್ಸವದಲ್ಲಿ ಪ್ರಸ್ತುತ ಪಡಿಸುವ ಅಭಿಲಾಷೆ ಹೊಂದಿದೆ. [ನಾಟಕಗಳ ಪಟ್ಟಿ ಇಲ್ಲಿದೆ]

ನಿರೂಪಕಿ ಶೀತಲ್ ಶೆಟ್ಟಿ ಅವರಿಂದ ಆಹ್ವಾನ

ನಟಿ, ನಿರೂಪಕಿ ಶೀತಲ್ ಶೆಟ್ಟಿ ಅವರಿಂದ ಆಹ್ವಾನ

ರಿಷಬ್ ಶೆಟ್ಟಿ ಅವರಿಂದ ರಂಕುಲಾಟಕ್ಕೆ ಆಹ್ವಾನ

ನಟ, ರಂಗಕರ್ಮಿ ರಿಷಬ್ ಶೆಟ್ಟಿ ಅವರಿಂದ ರಂಕುಲಾಟಕ್ಕೆ ಆಹ್ವಾನ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Amateur Theatre club Ranga Sourabha turns 15.Ranga Sourabha is a result of endless dreams of many such student aspirants of a well known college in south Bangalore – VIJAYA COLLEGE (Erstwhile BHS First Grade College). Theatre club which started in the year 1999,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more