Pooja Gandhi: ಕನ್ನಡ ಕಲಿಸಿದ ಗುರುವಿಗೆ ಮನಸೋತ ಮಳೆ ಬೆಡಗಿ, ಬುಧವಾರವೇ ಕಲ್ಯಾಣ!
ಬೆಂಗಳೂರು, ನವೆಂಬರ್ 28: ಕನ್ನಡ ಚಿತ್ರರಂಗದ ಮಳೆ ಹುಡುಗಿ ಪೂಜಾ ಗಾಂಧಿ ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂಗಾರು ಮಳೆ ಚಿತ್ರದ ಮೂಲಕ ಜನಪ್ರಿಯರಾದ ಪೂಜಾ ಗಾಂಧಿ, ದಂಡುಪಾಳ್ಯ ಸೇರಿದಂತೆ ವಿವಧ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಕನ್ನಡ ಸಿನಿಮಾ ಪ್ರಿಯಯರ ಮೆಚ್ಚುಗೆ ಗಳಿಸಿದ್ದರು.
ಉತ್ತರ ಪ್ರದೇಶ ಮೂಲದ ನಟಿ ಪೂಜಾ ಗಾಂಧಿ ಕನ್ನಡ ಪ್ರೀತಿಗೆ ಮನಸೋಲದವರಿಲ್ಲ. ಮೊದಮೊದಲು ಕನ್ನಡ ಮಾತನಾಡಲು ತಡವರಿಸುತ್ತಿದ್ದ ಅವರು, ಇದೀಗ ಸ್ವಚ್ಛವಾಗಿ ಕನ್ನಡ ಮಾತನಾಡುತ್ತಾರೆ. ಅಲ್ಲದೇ ಕನ್ನಡವನ್ನು ಬರೆಯಲು ಕೂಡ ಕಲಿತಿದ್ದಾರೆ. ವಿಶೇಷ ಎಂಬಂತೆ ಪೂಜಾ ಗಾಂಧಿ ಇದೀಗ ಕನ್ನಡಿಗನನ್ನೇ ವರಿಸುತ್ತಿದ್ದಾರೆ.

ಬೆಂಗಳೂರಿನ ಉದ್ಯಮಿ ವಿಜಯ್ ಘೋರ್ಪಡೆ ಎಂಬುವವರ ಜೊತೆಗೆ ಪೂಜಾ ಗಾಂಧಿ ಅವರು ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾರೆ. ನಾಳೆ ಅಂದರೆ ನವೆಂಬರ್ 29ರಂದು ಬೆಂಗಳೂರಿನ ಯಲಹಂಕದಲ್ಲಿ ಪೂಜಾ ಗಾಂಧಿ ಮತ್ತು ವಿಜಯ್ ಘೋರ್ಪಡೆ ಅವರ ಮದುವೆ ಸಮಾರಂಭವು ನಡೆಯಲಿದೆ. ಇನ್ನು ಪೂಜಾ ಗಾಂಧಿ ವಿಶೇಷವಾಗಿ ಸರಳವಾಗಿ ವಿವಾಹವಾಗಲು ಇಚ್ಚಿಸಿದ್ದು, ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯವಾಗಲು ನಿರ್ಧರಿಸಿದ್ದಾರೆ.
ಪೂಜಾ ಗಾಂಧಿ ಮದುವೆಯ ಕರೆಯೋಲೆ
'ಪ್ರೀತಿಯ ಮಾಧ್ಯಮ ಮಿತ್ರರೇ, ಆತ್ಮೀಯರೇ, ನಿಮ್ಮೆಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ಚಿತ್ರ ಜೀವನದ ಎಲ್ಲಾ ಬೆಳವಣಿಗೆಗಳಲ್ಲಿ ನೀವು ನನ್ನ ಜೊತೆಯಾಗಿದ್ದೀರಿ. ನವೆಂಬರ್ 29ರಂದು ಸಂಜೆ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ಮೂಲಕ ವಿಜಯ್ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹರಸಿ, ಆಶೀರ್ವದಿಸಿ. ಈ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಮನದಾಳದ ಧನ್ಯವಾದಗಳು ಎಂದು ಪೂಜಾ ಗಾಂಧಿ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಪೂಜಾಗಾಂಧಿ ಮಾಧ್ಯಮಗಳಿಗೆ ವಿಶೇಷ ಮನವಿಯನ್ನು ಸಹ ಮಾಡಿದ್ದಾರೆ. ಮದುವೆಯಲ್ಲಿ ಯಾವುದೇ ಕ್ಯಾಮರಾಗಳಿಗೆ ಅವಕಾಶ ಇಲ್ಲ. ಅನ್ಯಥಾ ಭಾವಿಸಬೇಡಿ. ನಾವೇ ನಿಮಗೆ ಸಾಧ್ಯವಾದಷ್ಟು ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ತಲುಪಿಸುತ್ತೇವೆ ಎಂದು ವಿನಂತಿಸಿಕೊಂಡಿದ್ದಾರೆ.
ಕನ್ನಡ ಕಲಿಸಿದ ಗುರುವನ್ನೇ ವರಿಸಲಿರುವ ಮಳೆ ಹುಡುಗಿ
ಪೂಜಾ ಗಾಂಧಿ ಅವರನ್ನು ಮದುವೆ ಆಗುತ್ತಿರುವ ವಿಜಯ್ ಘೋರ್ಪಡೆ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಹಲವು ಸಮಯದಿಂದ ಇಬ್ಬರ ಮಧ್ಯೆ ಸ್ನೇಹವಿತ್ತು ಎನ್ನಲಾಗಿದೆ. ಅಭಿಮಾನಿಗಳು ಮನಸಾರೆ ಮೆಚ್ಚಿದ ಪೂಜಾ ಗಾಂಧಿ ಅವರ ಕನ್ನಡ ಕಲಿಕೆಯ ಹಿಂದಿರುವುದು ವಿಜಯ್ ಘೋರ್ಪಡೆ ಅವರಂತೆ ಪೂಜಾ ಅವರ ಕನ್ನಡ ಕಲಿಕೆಗೆ ವಿಜಯ್ ಅವರೇ ಕಾರಣವಂತೆ. ಪೂಜಾಗೆ ಕನ್ನಡ ಕಲಿಸಿದವರು ಕೂಡ ವಿಜಯ್ ಎನ್ನುವ ಮಾಹಿತಿ ಸದ್ಯ ಲಭ್ಯವಾಗಿದೆ.












Click it and Unblock the Notifications