ಕಲ್ಯಾಣನಗರ: ತಡೆಗೊಡೆ ಇಲ್ಲದ ರಾಜಕಾಲುವೆಗೆ ಕಾವಲು ಯಾರು?: ಆತಂಕದಲ್ಲಿ ಜನ ಸಂಚಾರ

ರಾಜಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ನಿತ್ಯ ವಾಹನ ಸವಾರರು ಪ್ರಾಣ ಪಕ್ಷಿ ಕೈಯಲ್ಲಿಡಿದುಕೊಂಡು ಓಡಾಡುವಂತ ಪರಿಸ್ಥಿತಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಿರ್ಮಾಣವಾಗಿದೆ. ಕಲ್ಯಾಣನಗರ ಮುಖ್ಯರಸ್ತೆಯ ಇಕ್ಕೆಲುಗಳಲ್ಲಿ ರಾಜಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ನಿತ್ಯ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಬಾಯಿ ತೆರೆದುಕೊಂಡಿರುವ ರಾಜಕಾಲುವೆಗೆ ಪಾಲಾಗುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಹಿಡಿ ಶಾಪ ಹಾಕಿದ್ದಾರೆ. ರಸ್ತೆಯ ಬದಿಯಲ್ಲಿರುವ ರಾಜಕಾಲುವೆಗೆ ಈವರೆಗೆ ತಡೆಗೋಡೆ ನಿರ್ಮಿಸಿಲ್ಲ. ಈಸ್ವ್‌ವೆಸ್ಟ್‌ ಶಾಲೆ, ಟ್ರಿಬೈ ಪ್ರಾವಿಡೆಂಟ್ ಅಪಾರ್ಟ್‌ಮೆಂಟ್, ಲಿಂಗಧೀರನಹಳ್ಳಿ ಹಾಗೂ ಕಲ್ಯಾಣನಗರದ ನಿವಾಸಿಗಳು ಸೇರಿ ನೂರಾರು ನಾಗರಿಕರು, ಮಕ್ಕಳು ಹಾಗೂ ಹಿರಿಯರು ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ಸಾಹಸವಾಗಿದೆ. ರಾತ್ರಿ ವೇಳೆ ರಸ್ತೆ ಬದಿಯ ರಾಜಕಾಲುವೆ ಗೋಚರಿಸುವುದೇ ಇಲ್ಲ. ಇದರಿಂದ ವಾಹನ ಸವಾರರು ನೇರವಾಗಿ ಚರಂಡಿ ಪಾಲಾಗುತ್ತಿದ್ದಾರೆ ಎಮದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಎ.ಎಂ.ಹನುಮಂತೇಗೌಡ, 'ರಸ್ತೆ ಅಭಿವೃದ್ಧಿ ಮಾಡಿದರೆ ಸಾಲದು ರಸ್ತೆಗೆ ಹೊಂದಿಕೊಂಡಂತಿರುವ ರಾಜಕಾಲುವೆ, ಹಳ್ಳ ಹಾಗೂ ಕೆರೆ ಏರಿಗಳಿಗೆ ತಡೆಗೋಡೆ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಅನಾಹುತಗಳು ತಪ್ಪಿದ್ದಲ್ಲ' ಎಂದು ಎಚ್ಚರಿಸಿದ್ದಾರೆ.

Kalyannagar: There is no barricade for Rajkaluve - Peoples vehicular traffic is in danger

ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಹೇರೋಹಳ್ಳಿ ಭಾಗದಿಂದ ಪ್ರತಿನಿತ್ಯ ಶಾಲಾ ವಾಹನಗಳು, ಮಕ್ಕಳನ್ನು ಶಾಲೆಗೆ ಬಿಡಲು ನೂರಾರು ಪೋಷಕರು ಅದರಲ್ಲೂ ಶಾಲಾ ನಿರ್ಮಾಣ ಮಾಡಬೇಕೆಮದು ಡಿ ಗ್ರೂಪ್ ನಿವಾಸಿ ಆರ್.ಚಂದ್ರಶೇಖರ್ ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+