K.N.Jagadesh Kumar: ಕೆ.ಎನ್.ಜಗದೀಶ್ ಅವರ 12ನೇ ತರಗತಿ ಮಾರ್ಕ್ಸ್ ಕಾರ್ಡ್ ನಕಲಿ; ವಕೀಲ ವೃತ್ತಿ ಪಡೆದಿದ್ದೇಗೆ?
K.N.Jagadesh Kumar: ಲಾಯರ್ ಕೆ.ಎನ್.ಜಗದೀಶ್ ಕುಮಾರ್ ಅವರ ನಕಲಿ ಶಿಕ್ಷಣದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ದೂರುದಾರರೊಬ್ಬರ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಜಗದೀಶ್ ಅವರು 12ನೇ ತರಗತಿಯ ಮಾರ್ಕ್ಸ್ ಕಾರ್ಡ್ ನಕಲಿ ಎನ್ನುವ ಅಸಲಿ ಸತ್ಯ ಬಟಾ ಬಯಲಾಗಿದೆ. ಹಾಗಾದರೆ ಇವರು ಡಿಗ್ರಿ & ಹಾಗೂ ಎಲ್‌ಎಲ್‌ಬಿ ಪದವಿ ಪಡೆದಿದ್ದೇಗೆ ಎನ್ನುವ ರೋಚಕ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕೆ.ಎನ್.ಜಗದೀಶ್ ಕುಮಾರ್ ಅವರು ಮೊದಲಿನಿಂದಲೂ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಿದ್ದರು. ಈಗಾಗಲೇ ತಾವು ಎಲ್ಲಾ ಕಡೆಗಳಲ್ಲಿ ವಕೀಲ ಎಂದು ಬಿಲ್ಡಪ್ ಕೊಟ್ಕೊಂಡು ಅಡ್ಡಾಡುತ್ತಿದ್ದು, ಈ ದರ್ಪ ಮೆರೆದಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ನಡುವೆಯೇ ಅವರ 12ನೇ ತರಗತಿಯ ನಕಲಿ ಮಾರ್ಕ್ಸ್ ಕಾರ್ಡ್‌ನ ಅಸಲಿ ಸತ್ಯವೊಂದು ಹೊರಬಿದ್ದಿದೆ.

ಲಾಯರ್ ಕೆ.ಎನ್ ಜಗದೀಶ್ ಕುಮಾರ್ ಅವರು ಇದೀಗ ಬಿಗ್ ಬಾಸ್ ಮನೆಯಲಿದ್ದು, ಇದೇ ವೇಳೆ ಅವರ 12ನೇ ತರಗತಿಯ ಮಾರ್ಕ್ಸ್ ಕಾರ್ಡ್ ನಕಲಿ ಎನ್ನುವುದು ದೃಢಪಟ್ಟಿದೆ. ಈ ಹಿನ್ನೆಲೆ ಅವರ ಡಿಗ್ರೀ ಹಾಗೂ ಎಲ್‌ಎಲ್‌ಬಿ ಪ್ರಮಾಣಪತ್ರವನ್ನು ಅಮಾನ್ಯ ಮಾಡಲಾಗಿದೆ. ಹಿಮಾಂಶು ಭಾಟಿ ಎಂಬುವವರು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಈ ಸ್ಫೋಟಕ ಮಾಹಿತಿ ಬಟಾ ಬಯಲಾಗಿದೆ.
ಆದರೆ, ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮೇ 7ರಂದು ಜಗದೀಶ್ ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿದೆ. ಇದಕ್ಕೆ ಅವರು ಮಾಡಿದ ವಂಚನೆಯೇ ಕಾರಣವಾಗಿದೆ. ದೆಹಲಿ ಬಾರ್ ಕೌನ್ಸಿಲ್ ಆದೇಶದ ಪ್ರಕಾರ, ಜಗದೀಶ್ ಕುಮಾರ್ ಅವರು ಯಾವುದೇ ಕೋರ್ಟ್‌ನಲ್ಲಿ ವಾದ ಮಂಡನೆ ಮಾಡುವಂತಿಲ್ಲ, ಅವರು ವಕೀಲರೇ ಅಲ್ಲ.
ಅವರು ಹೆಸರಿಗಷ್ಟೇ ತಾನು ವಕೀಲ ಎಂದು ಪುಂಗಿಕೊಂಡು ಅಡ್ಡಾಡುತ್ತಿದ್ದು, ಇದೀಗ ಈ ವಿಚಾರ ಗೊತ್ತಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ನೆಟ್ಟಿಗರು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಅಲ್ಲದೆ, ಸದ್ಯ ಅವರು ಬಿಗ್ ಬಾಸ್ ಮನೆಯಲ್ಲಿದ್ದು, ಅಲ್ಲೂ ಕೂಡ ದೌಲತ್ತಿನ ಮಾತಗಳನ್ನು ಆಡುತ್ತಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಡಾಮಿನೇಟ್ ಮಾಡಲು ಪ್ರಯತ್ನಿಸುತ್ತಿದ್ದು, ಈ ಅವರಿಗೆ ಎಲ್ಲಾರೂ ಛೀಮಾರಿ ಹಾಕುತ್ತಿದ್ದಾರೆ. ಬಳಿಕ ಅವರು ಒಮ್ಮೆ ಹೊರಗಡೆ ಹೋಗುವ ನಿರ್ಧಾರಕ್ಕೂ ಬಂದಿದ್ದರು. ನಂತರ ಮನಸ್ಥಿತಿ ಬದಲಿಸಿಕೊಂಡಿದ್ದಾರೆ. ಇನ್ನು ಈ ವಾರಾಂತ್ಯದ ಎಪಿಸೋಡ್‌ಗಾಗಿ ಜನರು ಕಾತರದಲ್ಲಿದ್ದಾರೆ. ಮೊದಲ ವಾರ ಸಾಮಾನ್ಯವಾಗಿ ಸುದೀಪ್ ಕೂಲ್ ಆಗಿಯೇ ಇರುತ್ತಾರೆ. ಎಲ್ಲರಿಗೂ ಮನೆ ಹೊಸದು ಎನ್ನುವ ಕಾರಣಕ್ಕೆ ಸುದೀಪ್ ಶಾಂತ ರೀತಿಯಲ್ಲಿದ್ದರು. ಆದರೆ, ಈ ವಾರ ಜಗದೀಶ್ ವಿರುದ್ಧ ಕೆಂಡಾಕಾರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.












Click it and Unblock the Notifications