Get Updates
Get notified of breaking news, exclusive insights, and must-see stories!

ಪತ್ನಿ ಕಿರುಕುಳಕ್ಕೆ ಬೇಸತ್ತು ಬೆಂಗಳೂರು ಟೆಕ್ಕಿ ಆತ್ಮಹತ್ಯೆ; ಗಂಡಸರ ಕಷ್ಟ ಕೇಳೋದ್ಯಾರು ಎಂದ ನೆಟ್ಟಿಗರು

ಉತ್ತರ ಪ್ರದೇಶ ಮೂಲದ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು ಪತ್ನಿ ನೀಡಿದ ಕಿರುಕುಳದಿಂದ ಬೇಸತ್ತು ಜೀವ ಕಳೆದುಕೊಂಡಿದ್ದಾರೆ. ನೇಣಿಗೆ ಶರಣಾಗುವ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು ಪತ್ನಿ ಕೊಟ್ಟಿರುವ ಕಿರುಕುಳದ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ಈ ದೇಶದಲ್ಲಿ ಗಂಡಸರನ್ನು ಕಾಪಾಡಲೂ ಕಾನೂನೇ ಇಲ್ಲ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಟೆಕ್ ಉದ್ಯಮಿ 34 ವರ್ಷದ ಅತುಲ್ ಸುಭಾಷ್ ಬೆಂಗಳೂರಿನ ಮಾರತ್ತಹಳ್ಳಿಯ ತಮ್ಮ ಮನೆಯಲ್ಲಿ ನೇಣಿಗೆ ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ನೇಣಿಗೆ ಶರಣಾಗುವ ಮುನ್ನ ಎಕ್ಸ್‌ನಲ್ಲಿ "ಭಾರತದಲ್ಲಿ ಪುರುಷರ ಮೇಲೆ ಕಾನೂನುಬದ್ಧ ನರಮೇಧ ನಡೆಯುತ್ತಿದೆ" ಎಂದು ಬರೆದಿದ್ದಾರೆ. ಬಳಿಕ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

Justice for atul subhash case bengaluru tech

24 ಪುಟಗಳ ಡೆತ್‌ನೋಟ್

ಖಾಸಗಿ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ಅತುಲ್ ಸುಭಾಷ್, ಪತ್ನಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತಿದ್ದರು. ತನ್ನ ಪತ್ನಿ ಮತ್ತು ಆಕೆಯ ಕುಟುಂಬ ನೀಡಿದ ಕಿರುಕುಳದ ಬಗ್ಗೆ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯಿಂದ ದೂರವಾಗಿ ಒಂಟಿಯಾಗಿದ್ದ ಅತುಲ್ ಸುಭಾಷ್, ವೈವಾಹಿಕ ಜೀವನದಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು. ಇತ್ತೀಚೆಗೆ ಆತನ ಪತ್ನಿ ಉತ್ತರ ಪ್ರದೇಶದಲ್ಲಿ ಸುಭಾಷ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಇದರಿಂದ ಸುಭಾಷ್ ತುಂಬಾ ನೊಂದಿದ್ದರು ಎಂದು 'ದಿ ಹಿಂದೂ' ವರದಿ ಮಾಡಿದೆ.

ನ್ಯಾಯ ಸಿಗಬೇಕು ಎಂದ ಅತುಲ್

ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ತನಗಾದ ಅನ್ಯಾಯದ ಬಗ್ಗೆ ಜಗತ್ತಿಗೆ ತಿಳಿಸಲು ಅವರು ಎಲ್ಲಾ ರೀತಿ ಪ್ರಯತ್ನ ಮಾಡಿದ್ದಾರೆ. ತಾವು ಬರೆದಿದ್ದ ಡೆತ್ ನೋಟ್ ಅನ್ನು ಹಲವು ವ್ಯಕ್ತಿಗಳಿಗೆ ಇಮೇಲ್ ಮಾಡಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ತಮಗೆ ಪರಿಚಯವಿದ್ದ ಎನ್‌ಜಿಒನ ವಾಟ್ಸಾಪ್ ಗ್ರೂಪ್‌ನಲ್ಲಿ ಕೂಡ ಅದನ್ನು ಹಂಚಿಕೊಂಡಿದ್ದು, ತಮ್ಮ ಮನೆಯಲ್ಲಿ ನ್ಯಾಯ ಸಿಗಬೇಕು ಎನ್ನುವ ಫಲಕ ನೇತುಹಾಕಿದ್ದಾರೆ.

ಆತ್ಮಹತ್ಯೆಗೆ ಮುನ್ನ ತಮ್ಮ ಡೆತ್ ನೋಟ್, ವಾಹನದ ಕೀಗಳು ಮತ್ತು ತಾವು ಪೂರ್ತಿ ಮಾಡಿರುವ ಮತ್ತು ಬಾಕಿ ಉಳಿಸಿರುವ ಕೆಲಸಗಳನ್ನು ಪಟ್ಟಿ ಮಾಡಿದ್ದು, ಅದರ ವಿವರವನ್ನು ಬೀರು ಮೇಲೆ ಅಂಟಿಸಿದ್ದಾರೆ.

ಪ್ರಕರಣ ದಾಖಲು

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಅಕ್ಕ ಪಕ್ಕದ ಮನೆಯವರ ದೂರಿನ ಆಧಾರದ ಮೇಲೆ ಸುಭಾಷ್ ಪತ್ನಿ ಮತ್ತು ಆಕೆಯ ಸಂಬಂಧಿಕರ ವಿರುದ್ಧ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ ಎಂದು ಖಚಿತಪಡಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್

ಅತುಲ್ ಸುಭಾಷ್ ಪ್ರಕರಣದ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಈ ದೇಶದಲ್ಲಿ ಗಂಡಸರನ್ನು ಕಾಪಾಡಲು ಕಾನೂನುಗಳೇ ಇಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಇಡೀ ಸಮಾಜ ಅದನ್ನು ಖಂಡಿಸುತ್ತದೆ, ಪೊಲೀಸರು ಕೂಡಲೇ ಸಂಬಂಧಪಟ್ಟವರನ್ನು ಬಂಧಿಸುತ್ತಾರೆ. ಆದರೆ ಗಂಡಸರು ಶೋಷಣೆಗೆ ಒಳಗಾಗಿ ಜೀವ ಕಳೆದುಕೊಂಡರೆ ಅದರ ಬಗ್ಗೆ ಸಮಾಜ ಕೂಡ ಹೆಚ್ಚಾಗಿ ಗಮನ ಹರಿಸುವುದಿಲ್ಲ ಎಂದು ಬೇಸರ ವ್ಯಕ್ತವಾಗಿದೆ.

Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+