ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ್ಯೂ. ಆರ್ಟಿಸ್ಟ್ ಪದ್ಮಾವತಿ ಸಾವು, ಮ್ಯಾನೇಜರ್ ಬಂಧನ

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ 'ವಿಐಪಿ' ಚಿತ್ರದ ಚಿತ್ರೀಕರಣದ ವೇಳೆ ನೆಡೆದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 12: ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ 'ವಿಐಪಿ' ಚಿತ್ರದ ಚಿತ್ರೀಕರಣದ ವೇಳೆ ನೆಡೆದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಪ್ರೊಡೆಕ್ಷನ್ ಯೂನಿಟ್ ಮ್ಯಾನೇಜರ್ ನರಸಿಂಹ ಎಂಬುವರ ಬಂಧನವಾಗಿದೆ.

ಜ್ಯೂನಿಯರ್ ಆರ್ಟಿಸ್ಟ್ ಪದ್ಮಾವತಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಂದ ಕಿಶೋರ್ ಸೇರಿದಂತೆ ಚಿತ್ರತಂಡ ಏಳು ಜನರ ವಿರುದ್ಧ ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಫ್ ಐಆರ್ ಹಾಕಿದ್ದಾರೆ.

ಚಿತ್ರೀಕರಣದ ವೇಳೆ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಈ ಘಟನೆಗೂ ಚಿತ್ರತಂಡಕ್ಕೂ ಯಾವುದೇ ರೀತಿ ಸಂಬಂಧವಿಲ್ಲ, ನಿರ್ಲಕ್ಷ್ಯದಿಂದ ಸಾವು ಸಂಭವಿಸಿಲ್ಲ ಎಂದು ನಿರ್ದೇಶಕ ನಂದಕಿಶೋರ್ ಅವರು ಟೈಮ್ ಆಫ್ ಇಂಡಿಯಾಕ್ಕೆ ಪ್ರತಿಕ್ರಿಯಿಸಿದ್ದರು.

Junior Artist Padmavathi death case, FIR files against Seven, One arrested

ತಮಿಳಿನ ಯಶಸ್ವಿಯಾದ ಧನುಷ್ ಅಭಿನಯದ 'ವೇಲೈ ಇಲ್ಲಾದ ಪಟ್ಟಧಾರಿ' (ವಿಐಪಿ) ಚಿತ್ರ ಕನ್ನಡ ರಿಮೇಕ್ ನಲ್ಲಿ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಹೀರೋ ಆಗಿದ್ದಾರೆ. ನಂದಕಿಶೋರ್ ನಿರ್ದೇಶಿಸುತ್ತಿರುವ 'ವಿಐಪಿ' ಚಿತ್ರದ ಶೂಟಿಂಗ್, ಬೆಂಗಳೂರಿನ ಹೊರವಲಯದಲ್ಲಿರುವ ರಾಜಾನುಕುಂಟೆ ಬಳಿ ನಡೆಯುವಾಗ ಈ ದುರಂತ ಸಂಭವಿಸಿದೆ.

ಘಟನೆ ವಿವರ: ಸಿವಿಲ್ ಇಂಜಿನಿಯರ್ ಆಗಿರುವ ಹೀರೋ ಎಂಟ್ರಿ ಸೀನ್ ಚಿತ್ರೀಕರಣವನ್ನು ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ನಡೆಸಲಾಗುತ್ತಿತ್ತು. ಹೊಡೆದಾಟ ಸೀನ್ ಶೂಟಿಂಗ್ ಮುಗಿಸಿದ ಚಿತ್ರತಂಡ ಪ್ಯಾಕಪ್ ಮಾಡಿ ತೆರಳಿದೆ.

ಆ ನಂತರ ಕಟ್ಟಡ ಕಾಮಗಾರಿ ಕೂಲಿಗಳ ಪಾತ್ರ ನಿರ್ವಹಿಸುತ್ತಿದ್ದ ಜ್ಯೂನಿಯರ್ ಆರ್ಟಿಸ್ಟ್ ಗಳ ಲೆಕ್ಕ ಹಾಕುವಾಗ ಒಬ್ಬರು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಬಂದಿದೆ. ಅದೇ ಕಟ್ಟದಿಂದ ಬಿದ್ದು ಪದ್ಮಾವತಿ ಎನ್ನುವ ಸಹನಟಿ ಪ್ರಾಣಬಿಟ್ಟಿರುವುದಾಗಿ ತಿಳಿದುಬಂದಿದೆ. ಈಕೆ ಚಿತ್ರೀಕರಣದ ಸಮಯದಲ್ಲೇ ಬಿದ್ದು ಸತ್ತಿದ್ದಾರಾ? ಅಥವಾ ಚಿತ್ರತಂಡ ಶೂಟಿಂಗ್ ಮುಗಿಸಿ ಹೊರಟಮೇಲೆ ಈ ಅವಘಡ ನಡೆದಿದೆಯಾ? ಎಂಬ ಯಾವ ಮಾಹಿತಿಯೂ ಇನ್ನೂ ಹೊರಬಂದಿಲ್ಲ. ಸದ್ಯಕ್ಕೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Two days after the mysterious death of a Kannada film junior artiste in Yelahanka and following an FIR against seven persons including the director of the film, the police made the first arrest in the case on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X