ನ್ಯಾ.ಶೆಟ್ಟಿ ಕೊಲೆಗೆ ಯತ್ನಿಸಿದ ಆರೋಪಿ 5 ದಿನ ಪೊಲೀಸರ ವಶಕ್ಕೆ
ಬೆಂಗಳೂರು, ಮಾರ್ಚ್ 08: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಕೊಲೆಗೆ ಯತ್ನಿಸಿದ ಆರೋಪಿ ತೇಜರಾಜ್ ಶರ್ಮಾನನ್ನು 5 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.
ನಿನ್ನೆ ಸಂಜೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ಹೆಚ್ಚಿನ ತನಿಖೆಗಾಗಿ 5 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.
ಆರೋಪಿ ತೇಜ್‌ರಾಜ್ ಈಗಾಗಲೇ ತಪ್ಪೊಪ್ಪಿಕೊಂಡಿದ್ದು, ದೂರು ಸಲ್ಲಿಸಿ ಹತಾಶನಾಗಿದ್ದು, ನ್ಯಾಯಯುತವಾಗಿ ತನಿಖೆ ನಡೆಸಿಲ್ಲ ಎಂಬ ಕೋಪದಲ್ಲಿ ಚಾಕು ಹಾಕಿದ್ದಾಗಿ ಆತ ಹೇಳಿದ್ದಾನೆ.

ಆತನ ಮೇಲೆ ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ), 353 ಸರ್ಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿ ಆರೋಪಗಳಡಿ ಕೇಸು ದಾಖಲಿಸಲಾಗಿದೆ. ಘಟನೆಗೆ ಭದ್ರತಾ ಲೋಪವೇ ಕಾರಣವೆಂದು ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಲಾಗಿದ್ದು. ಆಯುಕ್ತರು ಇಂದು ಕ್ರಮ ಜರುಗಿಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಆರೋಪಿ ತೇಜ್‌ರಾಜ್ ತುಮಕುರಿನ ಹಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದ ಆದರೆ ಸಾಕ್ಷ್ಯಾಧಾರಗಳ ಕೊರತೆ ಇಮದಾಗಿ ದೂರುಗಳು ವಜಾಗೊಂಡಿದ್ದವು. ಇದರಿಂದ ಹತಾಶನಾಗಿದ್ದ ಆತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಇರಿದಿದ್ದ.












Click it and Unblock the Notifications