ಪತ್ರಿಕೋದ್ಯಮದ ಏಳಿಗೆಗೆ ಇಂಟರ್ನೆಟ್ ಏಣಿ : ಗೋಯೆಂಕಾ

ಬೆಂಗಳೂರು, ಮೇ 3 : "ಇಂಟರ್ನೆಟ್ ಅಂದ್ರೆ ಪತ್ರಿಕೋದ್ಯಮದ ಅಂತ್ಯ ಎಂದು ಪತ್ರಿಕೋದ್ಯಮದ ಹಳೆ ತಲೆಗಳು ಹೇಳಲು ಅವಕಾಶ ನೀಡಬೇಡಿ. ಬದಲಾಗಿ, ಇಂಟರ್ನೆಟ್ ನಿಂದ ಪತ್ರಿಕೋದ್ಯಮ ಹಿಂದೆಂಗಿಂತಲೂ ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ" ಎಂದು ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್‌ನ ನ್ಯೂ ಮೀಡಿಯಾದ ನಿರ್ದೇಶಕ ಅನಂತ್ ಗೋಯೆಂಕಾ ಹೇಳಿದ್ದಾರೆ.

ಅವರು ಮೇ 3ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದಂದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಅಂಡ್ ನ್ಯೂ ಮೀಡಿಯಾದಲ್ಲಿ ಪದವಿ ಗಳಿಸಿದ ಯುವ ಪತ್ರಕರ್ತರನ್ನು ಉದ್ದೇಶಿಸಿ ಬೆಂಗಳೂರಿನಲ್ಲಿ ಮಾತನಾಡುತ್ತಿದ್ದರು. ಅನಂತ್ ಅವರು, 1932ರಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ಸ್ಥಾಪಿಸಿದ ಅವರ ಅಜ್ಜ ರಾಮನಾಥ್ ಗೋಯೆಂಕಾ ಅವರೇ ಸ್ಫೂರ್ತಿ ಎಂದು ಪತ್ರಿಕೋದ್ಯಮಕ್ಕೆ ಕಾಲಿಡಲು ತವಕಿಸುತ್ತಿರುವ ವಿದ್ಯಾರ್ಥಿಗಳಿಗೆ ತಿಳಿಸಿದರು.


ಭಾರತದಲ್ಲಿ ಇಂದಿನ ಪತ್ರಕರ್ತರನ್ನು 'ಕಳಂಕಿತ' ಪೊಲೀಸರು ಮತ್ತು ರಾಜಕಾರಣಿಗಳ ಸಾಲಿನಲ್ಲಿ ನಿಲ್ಲಿಸಲಾಗುತ್ತಿದ್ದು, ಪತ್ರಕರ್ತರ ಬಗ್ಗೆ ಅಪನಂಬಿಕೆ ಹುಟ್ಟಿಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಉದ್ಯಮದಲ್ಲಿರುವ ಇಂಥ ಅಪನಂಬಿಕೆಯ ವಿರುದ್ಧ ಸೆಟೆದು ನಿಲ್ಲಲು ಇಂದಿನ ಡಿಜಿಟಲ್ ಮೀಡಿಯಾ ಮತ್ತು ಇಂಟರ್ನೆಟ್ ಹಲವಾರು ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಿದೆ ಎಂದು ನುಡಿದರು.

ಸಾಮಾಜಿಕ ತಾಣಗಳ ಮಹತ್ವಗಳ ಬಗ್ಗೆ ವಿವರಣೆ ನೀಡಿದ ಅನಂತ್ ಗೋಯೆಂಕಾ ಅವರು, ಲಿಂಕ್ಡ್ ಇನ್, ಟ್ವಿಟ್ಟರ್, ಫೇಸ್ ಬುಕ್ ನಂಥ ವೆಬ್ ತಾಣಗಳು ಇಂದು, ಉದ್ಯೋಗದಾತರಿಗೆ ಹೊರೆಯಾಗದಂತೆ ತಾಜಾ ಮಾಹಿತಿ ದೊರಕಿಸುವ ಮೂಲಗಳಾಗಿದ್ದು, ಯುಟ್ಯೂಬ್ ನಂಥ ವೆಬ್ ಸೈಟ್ ಗಳು ನಮ್ಮ ಸೃಜನಶೀಲ ಮಾಹಿತಿ ಹಂಚಿಕೊಳ್ಳಲು ಮತ್ತು ಲೇಖನಗಳ ಮೌಲ್ಯ ಹೆಚ್ಚಿಸಲು ಸಹಾಯಕವಾಗಿವೆ ಎಂದು ಹೇಳಿದರು.

ಭಾರತದ ಪತ್ರಿಕೋದ್ಯಮದ ಚಿತ್ರಣ ಇತರ ದೇಶಗಳಿಗಿಂತ ತೀರ ಭಿನ್ನವಾಗಿದ್ದು, ಇಲ್ಲಿ ಪ್ರಿಂಟ್, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳು ಬೆಳೆಯಲು ಸಮಾನ ಅವಕಾಶಗಳಿವೆ. ಡಿಜಿಟಲ್ ಮೀಡಿಯಾ ವೈವಿಧ್ಯಮಯ ವಿಭಾಗಗಳನ್ನು ಹೊಂದಿದ್ದರೂ, ಹೊಸ ಅವಕಾಶಗಳನ್ನು ಹುಟ್ಟುಹಾಕಿವೆ. ಅದರಲ್ಲೂ ಇಂಟರ್ನೆಟ್ ಪ್ರಭಾವದಿಂದಾಗಿ ಸುದ್ದಿ ಹೊಸ ಸ್ವರೂಪ ಮತ್ತು ನಾವೀನ್ಯತೆ ಪಡೆಯುತ್ತ ಸಾಗಲಿದೆ ಎಂದು ಅವರು ವಿವರಿಸಿದರು.

Journalism will thrive in internet age: Anant Goenka

ಇಂದಿನ ಕಾಲದಲ್ಲಿ ಯಾರು ಬೇಕಾದರೂ ಪ್ರಕಾಶಕರಾಗಬಹುದು. ಆದರೆ, ನಿಖರತೆಯಿಂದ ಕೂಡಿದ ಪ್ರಬುದ್ಧ ಬರವಣಿಗೆ ಪತ್ರಕರ್ತರನ್ನು ಪ್ರತ್ಯೇಕವಾಗಿರಿಸುತ್ತದೆ. ಡಿಜಿಟಲ್ ಯುಗದ ಪತ್ರಿಕೋದ್ಯಮದಲ್ಲಿ ಮೇಲೆ ಬರಬೇಕೆಂದರೆ ನಂಬಿಕಾರ್ಹತೆಯುಳ್ಳ ಗುಣಮಟ್ಟದ ಕಥೆಗಳ ಬಗ್ಗೆ ಒಲವು ಬೆಳೆಸಿಕೊಳ್ಳುವುದು ಒಂದೇ ಮಾರ್ಗ ಎಂದು ಯುವ ಪತ್ರಿಕೋದ್ಯಮಿಗಳಿಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಡೀನ್ ಆಗಿರುವ ಅಬ್ರಹಾಂ ಜಾರ್ಜ್ ಅವರು, ಮುಕ್ತ ಪತ್ರಿಕೋದ್ಯಮ ಜನರ ದನಿಯಾಗಬೇಕು, ಬಲಿಷ್ಠ ಪ್ರಜಾಪ್ರಭುತ್ವದ ಸ್ತಂಭವಾಗಬೇಕು. ಎಲ್ಲ ರೀತಿಯ ಅನ್ಯಾಯಗಳನ್ನು ಬಯಲಿಗೆಳೆದು ಸಮಾಜದಲ್ಲಿ ಧನಾತ್ಮಕ ಬದಲಾವಣೆಯ ಹರಿಹಾರರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಉಪದೇಶ ನೀಡಿದರು. ಘಟಿಕೋತ್ಸವದಲ್ಲಿ, ವಿಭಿನ್ನ ವಿಭಾಗಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+