Job Fair 2025: ಫೆಬ್ರವರಿ 28ರಂದು 'ಉದ್ಯೋಗ ಮೇಳ 2025'
ಬೆಂಗಳೂರು, ಫೆಬ್ರವರಿ 25: ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಇಲ್ಲೊಂದು ಸುವರ್ಣ ಅವಕಾಶ ಇದೆ. ಬೆಂಗಳೂರಿಗೆ ವಲಸೆ ಬಂದು ಉತ್ತಮ ಅವಕಾಶಕ್ಕಾಗಿ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಬೆಂಗಳೂರಿನಲ್ಲಿ ಫೆಬ್ರವರಿ 28ರಂದ 'ಉದ್ಯೋಗ ಮೇಳ 2025' ಹಮ್ಮಿಕೊಳ್ಳಲಾಗಿದೆ. ಆಸಕ್ತರು ಉಚಿತವಾಗಿ ಭಾಗವಹಿಸಬಹುದು. ಅದಕ್ಕಾಗಿ ನೀವು ಇಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ.
ಕರ್ನಾಟಕ ಸರ್ಕಾರಿ ಇಲಾಖೆ ಸಹಕಾರದಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ಒಂದು ದಿನ ಈ ಉದ್ಯೋಗ ಮೇಳೆ ನಡೆಯುತ್ತಿದೆ. ವೀಮನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಅವರ ಸಹಕಾರದಲ್ಲಿ ಬೆಂಗಳೂರು ನಗರ ಜಿಲ್ಲೆಯ 'ಜಿಲ್ಲಾ ಕೌಶಲ್ಯ ಮಿಷನ್' ಅವರ ಸಂಯುಕ್ತ ಆಶ್ರಯದಲ್ಲಿ ಅಂದು ಬೆಳಗ್ಗೆ 09 ಗಂಟೆಯಿಂದ ಸಂಜೆ 4 ಗಂಟೆವರೆಗೆ ಜರುಗಲಿದೆ. ವಿಫುಲ ಉದ್ಯೋಗ ಅವಕಾಶಗಳು ಇಲ್ಲಿರಲಿವೆ. ವಿದ್ಯಾರ್ಹತೆ, ವಯೋಮಿತಿ, ಸ್ಥಳ ವಿವರ, ನೋಂದಣಿ ಮಾಹಿತಿಗೆ ಮುಂದೆ ಓದಿ.

ಕರ್ನಾಟಕ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (ಕೆಎಸ್‌ಡಿಸಿ) ವತಿಯಿಂದ ನಡೆಯಲಿದೆ. ಅಂದು ಶುಕ್ರವಾರ '#1 ಮಹಾಯೋಗಿ ವೇಮನ ರಸ್ತೆ, 3ನೇ ಬ್ಲಾಕ್, ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಕೋರಮಂಗಲ, ಬೆಂಗಳೂರು-34 ರಲ್ಲಿರುವ ವೇಮನ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಿಜಿಯಲ್ಲಿ 'ಬೆಂಗಳೂರು ಉದ್ಯೋಗ ಮೇಳ 2025' ನಡೆಯಲಿದೆ ಎಂದು ಕಾಲೇಜು ತಿಳಿಸಿದೆ.
ವಿದ್ಯಾರ್ಹತೆ ಏನಿರಬೇಕು?
ಈ ಕೋರಮಂಗಲ ಉದ್ಯೋಗ ಮೇಳಕ್ಕೆ ಹಾಜರಾಗುವವ ಅಭ್ಯರ್ಥಿಗಳು ಕಡ್ಡಾಯವಾಗಿ ಹತ್ತನೇ ತರಗತಿ, ಪದವಿ, ಇಂಜಿನಿಯರಿಂಗ್ ಕಾಲೇಜು, ಐಐಟಿ, ಡಿಪ್ಲೋಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾಗಿರಬೇಕು. ಅಗತ್ಯ ದಾಖಲೆಗಳ ಸಮೇತವಾಗಿ ಉದ್ಯೋಗ ಮೇಳಕ್ಕೆ ಬರಬಹುದಾಗಿದೆ.

ವಯೋಮಿತಿ ವಿವರ
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಆಸಕ್ತ ಉದ್ಯೋಗಾಕಾಂಕ್ಷಿಗಳಿಗೆ ಕಾಲೇಜು ಆಡಳಿತ ಮಂಡಳಿ ತಿಳಿಸಿರುವ ಪ್ರಕಾರ, ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷದೊಳಗಿರಬೇಕು. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇಲ್ಲಿ ಪಾಲ್ಗೊಂಡು, ನಿಮ್ಮ ಉದ್ಯೋಗ ಕನಸು ನನಸು ಮಾಡಿಕೊಳ್ಳಬೇಕು. ಅನೇಕ ಉದ್ಯೋಗದಾತ ಕಂಪನಿಗಳು, ಸಂಸ್ಥೆಗಳು ಮೇಳದಲ್ಲಿರಲಿವೆ.
ಬೇಕಾದ ದಾಖಲೆಗಳು ಏನು?
ಉದ್ಯೋಗ ನಿರೀಕ್ಷೆ ಹೊತ್ತು ಮೇಳಕ್ಕೆ ಬರುವವರು ಕಡ್ಡಾಯವಾಗಿ 10 ರೆಸ್ಯೂಮ್ ಪ್ರತಿಗಳನ್ನು ತರಬೇಕು. ನೀವು ಕಲಿತ, ಹೊಂದಿದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆಗಳ 10 ಜೆರಾಕ್ಸ್ ಪ್ರತಿ ತರಬೇಕು. ಇದರೊಂದಿಗೆ ಭಾವಚಿತ್ರ ಇತರ ದಾಖಲಾತಿಗಳ ಜೊತೆಗೆ ಮೇಳದಲ್ಲಿ ಉಚಿತವಾಗಿ ಭಾಗವಹಿಸಬಹುದಾಗಿದೆ.
ನೋಂದಣಿಗೆ, ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ನೀವು ಉಚಿತವಾಗಿ ಭಾಗವಹಿಸಲು ಇಲ್ಲಿನ ಫೋಟೋ/ಬ್ಯಾನರ್‌ನಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಹೆಚ್ಚಿನ ಮಾಹಿತಿಗೆ 91083 47465/ 81050 20115 ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.












Click it and Unblock the Notifications