ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್‌ ಕೊಡುಗೆ ಬಗ್ಗೆ ಸಾರಲು ಜುಲೈ 1 ರಿಂದ ಜನತಾ ಯಾತ್ರೆ!

|
Google Oneindia Kannada News

ಬೆಂಗಳೂರು ಜೂನ್‌ 27: ಬೆಂಗಳೂರು ನಿರ್ಮಾತೃರಾದ ಕೆಂಪೇಗೌಡ ಜಯಂತಿ ದಿನದಂದು ಜಾತ್ಯಾತೀತ ಜನತಾದಳ(ಜೆಡಿಎಸ್) ಹೊಸ ಯಾತ್ರೆ ಬಗ್ಗೆ ಘೋಷಣೆ ಮಾಡಿದೆ. ''ಜುಲೈ‌ 1 ರಿಂದ ಬೆಂಗಳೂರು ನಗರದಲ್ಲಿ ಜನತಾ ಯಾತ್ರೆಯನ್ನು ಪ್ರಾರಂಭಿಸಲಿದ್ದೇವೆ. 15 ವಾಹನಗಳ ಮೂಲಕ ಪ್ರತಿಯೊಂದು ವಾರ್ಡ್‌ ಮತ್ತು ರಸ್ತೆಗಳಿಗೂ ತಲುಪಲಿದ್ದೇವೆ. ಬೆಂಗಳೂರು ನಗರಕ್ಕೆ ಜೆಡಿಎಸ್‌ ಪಕ್ಷ ನೀಡಿರುವ ಕೊಡುಗೆಯನ್ನು ಸಾರಲಿದ್ದೇವೆ. ಹಾಗೆಯೇ, ಉತ್ತದಾಯಿತ್ವ ಇಲ್ಲದೇ ಜನರ ತೆರಿಗೆ ಹಣವನ್ನು ಲೂಟಿ ಮಾಡಿರುವ ಜನರ ನಡೆಸಿರುವ ಅನ್ಯಾಯ ಅಕ್ರಮಗಳ ಬಗ್ಗೆಯೂ ಜನರಿಗೆ ತಿಳುವಳಿಕೆ ನೀಡಲಿದ್ದೇವೆ'' ಎಂದು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿದರು.

''ಒಂದು ಬಾರಿ ಸ್ವತಂತ್ರವಾಗಿ ಆಡಳಿತ ನಡೆಸಲು ನಮ್ಮ ಪಕ್ಷಕ್ಕೆ ಅನುವು ಮಾಡಿಕೊಡಿ. ಇದರಿಂದ ಸ್ವತಂತ್ರವಾಗಿ ಅಭಿವೃದ್ದಿಯ ಹಲವಾರು ನಿರ್ಧಾರಗಳನ್ನು ತಗೆದುಕೊಳ್ಳಲು ಹಾಗೂ ಅದನ್ನು ಅನುಷ್ಠಾನಗಳಿಸಲು ಸಾಧ್ಯ'' ಎಂದರು.

ಗುಜರಾತ್: ಬಿಜೆಪಿ ಸೇರುವಂತೆ ಪ್ರಾಂಶುಪಾಲರ ಸೂಚನೆ: ವಿದ್ಯಾರ್ಥಿಗಳ ಆಕ್ರೋಶಗುಜರಾತ್: ಬಿಜೆಪಿ ಸೇರುವಂತೆ ಪ್ರಾಂಶುಪಾಲರ ಸೂಚನೆ: ವಿದ್ಯಾರ್ಥಿಗಳ ಆಕ್ರೋಶ

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಾತನಾಡಿ, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಡಾ. ಸಯ್ಯದ್‌ ಮೋಹಿದ್‌ ಅಲ್ತಾಪ್‌ ಅವರನ್ನ ಘೋಷಣೆ ಮಾಡಿದರು. ಒಬ್ಬ ಉತ್ತಮ ವಿದ್ಯಾವಂತ ಅಭ್ಯರ್ಥಿಗೆ ಮತ ನೀಡುವಂತೆ ಜನರಲ್ಲಿ ಕೋರಿದರು.

 ಸಾಧನೆ ಸಲ್ಲಿಸಿರುವವರಿಗೆ ಕೆಂಪೇಗೌಡ ಪ್ರಶಸ್ತಿ

ಸಾಧನೆ ಸಲ್ಲಿಸಿರುವವರಿಗೆ ಕೆಂಪೇಗೌಡ ಪ್ರಶಸ್ತಿ

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಬೆಂಗಳೂರು ನಗರ ಜೆಡಿಎಸ್‌ ಅಧ್ಯಕ್ಷ ಪ್ರಕಾಶ್‌ ಹೆಬ್ಬಾಳದ ಅಧ್ಯಕ್ಷರಾದ ಎಸ್‌ ರುದ್ರಪ್ಪ‌, ಬಿಬಿಎಂಪಿ ಅಭ್ಯರ್ಥಿಗಳಾದ ಹಕೀಂ ಬಾಬು, ವಾರ್ಡ್‌ ನಂ 22 ರ ಮಾಜಿ ಬಿಬಿಎಂಪಿ ಸದಸ್ಯರಾದ ರಾಜಶೇಖರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿರುವವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 ಕೆಂಪೇಗೌಡ ಜಯಂತಿ ಆಚರಣೆ:

ಕೆಂಪೇಗೌಡ ಜಯಂತಿ ಆಚರಣೆ:

ಬೆಂಗಳೂರು ನಿರ್ಮಾತೃರಾದ ಕೆಂಪೇಗೌಡರು ನಗರದ ಉತ್ತಮ ಭವಿಷ್ಯಕ್ಕಾಗಿ ಕಟ್ಟಿದಂತಹ ಕೆರೆಗಳು ಹಾಗೂ ರಾಜಕಾಲುವೆಗಳನ್ನು ನುಂಗಿ ನೀರು ನಾಲ್ಕೈದು ಕೆಜಿ ಅಕ್ಕಿ ನೀಡಿ ಪೋಸು ಕೊಡುತ್ತಿದ್ದಾರೆ. ಜೂಲೈ ‌ 1 ರಿಂದ ಪ್ರಾರಂಭವಾಗುವ ಜನತಾ ಯಾತ್ರೆಯಲ್ಲಿ ಬೆಂಗಳೂರು ನಗರಕ್ಕೆ ನಮ್ಮ ಕೊಡುಗೆಗಳು ಹಾಗೂ ನಗರದ ಜನರ ತೆರಿಗೆ ಹಣದ ಲೂಟಿ ಹೊಡೆದು ಎಸಗಿರುವ ಅಕ್ರಮಗಳನ್ನು ಜನರ ಮುಂದೆ ಇಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್‌.ಟಿ ನಗರದ ಮೈದಾನದಲ್ಲಿ ಜಾತ್ಯಾತೀತ ಜನತಾದಳ ಬೆಂಗಳೂರು ನಗರ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಡಾ. ಸಯ್ಯದ್‌ ಮೋಹಿದ್‌ ಅಲ್ತಾಫ್‌ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತೋತ್ಸವಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಬಡವರ ಮನೆಗಳಿಗೆ ನೀರು ನುಗ್ಗುತ್ತದೆ

ಬಡವರ ಮನೆಗಳಿಗೆ ನೀರು ನುಗ್ಗುತ್ತದೆ

ನಾಡಪ್ರಭುಗಳು ಬಹಳ ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು ಕಟ್ಟಿದ್ದರು. ಕೆರೆಕಟ್ಟೆಗಳನ್ನು ಕಟ್ಟಿ ಇಡೀ ನಗರವನ್ನು ಜಲಶ್ಯಾಮಲಗೊಳಿಸಿದ್ದರು. ಆದರೆ, ಇಂದು ಭೂಗಳ್ಳರು ಸಾವಿರಾರು ಕೆರೆಗಳನ್ನು ತಮ್ಮ ಸ್ವಾರ್ಥಕ್ಕೋಸ್ಕರ ನುಂಗಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಸಿಕೊಂಡು ಮೆರೆಯುತ್ತಿದ್ದಾರೆ. ಮಳೆ ಬಂದಂತಹ ಸಂದರ್ಭದಲ್ಲಿ ಕೆರೆಗಳಲ್ಲಿ ನೀರು ತುಂಬದೆ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರ ಮನೆಗಳಿಗೆ ನೀರು ನುಗ್ಗುತ್ತದೆ.

 ಭೂ ದಾಹಕ್ಕೆ ಬೆಂಬಲ ಕೊಟ್ಟ ರಾಜಕಾರಣಿ

ಭೂ ದಾಹಕ್ಕೆ ಬೆಂಬಲ ಕೊಟ್ಟ ರಾಜಕಾರಣಿ

ಭೂ ದಾಹಕ್ಕೆ ಬೆಂಬಲ ಕೊಟ್ಟಿರುವುದು ಸರಕಾರವನ್ನು ಆಳಿರುವ ರಾಜಕಾರಣಿಗಳು ಎನ್ನುವುದನ್ನು ನೋವಿನಿಂದ ಹೇಳುತ್ತೇನೆ. ಬೆಂಗಳೂರು ನಗರ ಅಭಿವೃದ್ದಿ ಹೆಸರಿನಲ್ಲಿ ರಾಜಕಾರಣಿಗಳು ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿ ಚುನಾವಣೆ ಸಂದರ್ಭದಲ್ಲಿ ಓಲೈಸಲು ಮುಂದಾಗುತ್ತಾರೆ. ಇಂತಹ ರಾಜಕಾರಣಿಗಳಿಗೆ ಪ್ರೊತ್ಸಾಹ ನೀಡುವುದನ್ನು ನಿಲ್ಲಿಸದಿದ್ದಲ್ಲಿ ಸ್ವಾತಂತ್ರ್ಯ ಬಂದು ನೂರು ವರ್ಷಗಳಾದರೂ ಜೀವನ ಹೀಗೇ ಇರುತ್ತದೆ ಎಂದರು.

Recommended Video

ಸಹ ಆಟಗಾರನನ್ನು‌ ನಿಂದಿಸಿದ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟು ಬೆವರಳಿಸಿದ ವಿರಾಟ್ ಕೊಹ್ಲಿ | Oneindia Kannada

English summary
JDS to conduct Janata Yatra campaign acoss all wards of Bengaluru City said Former CM HD Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X