ಜೆಡಿಎಸ್ ಕಾರ್ಯಕರ್ತರ ಮೇಲೆ ಯಲಹಂಕ ಬಿಜೆಪಿ ಶಾಸಕರ ಬೆಂಬಲಿಗರು ಹಲ್ಲೆ ಮಾಡಿದ್ರಾ? ; ವಿಡಿಯೋ
ಬೆಂಗಳೂರು, ಏಪ್ರಿಲ್. 26: ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳು ಸಹಜ. ಆದರೆ ಅದು ಹೊಡೆದಾಟದವರೆಗೂ ಹೋಗಬಾರದು. ಆದರೂ, ಹಲವು ಭಾಗಗಳಲ್ಲಿ ಚುಣಾವಣೆಗೂ ಮುಂಚಿತವಾಗಿಯೇ ಹಿಂಸಾಚಾರ ಆರಂಭವಾಗಿದೆ. ನಮ್ಮ ಪಕ್ಷದ ಬೆಂಬಲಿಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರಾದೇಶಿಕ ಪಕ್ಷ ಸ್ಥಳೀಯ ಶಾಸಕರ ಮೇಲೆ ಆರೋಪಿಸಿದೆ.
ಯಲಹಂಕದ ನಮ್ಮ ಅಭ್ಯರ್ಥಿ @MunegowdaM10ರ ಪರ ಪ್ರಚಾರ ಮಾಡಿದ ನಮ್ಮ ಕಾರ್ಯಕರ್ತರ ವಿರುದ್ಧ @BJP4Karnatakaಯ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. @SRVishwanathBJP ಛೂ ಬಿಟ್ಟಿರುವ ಈ ಗೂಂಡಾಗಳು ನಿನ್ನೆ ಬೆಳಿಗ್ಗೆಯಿಂದ ತಡರಾತ್ರಿಯ ವರೆಗೂ ದೌರ್ಜನ್ಯ ನಡೆಸಿದ್ದಾರೆ. @BSBommai ಇದೇನು ಉತ್ತರ ಪ್ರದೇಶವೆ?. 1/3 pic.twitter.com/MJAL7DzucQ
— Janata Dal Secular (@JanataDal_S) April 26, 2023
ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಎಸ್ ಆರ್ ವಿಶ್ವನಾಥ್ ವಿರುದ್ಧ ಜಾತ್ಯಾತೀತ ಜನತಾದಳ ಗಂಭೀರ ಆರೋಪ ಮಾಡಿದೆ. ತಮ್ಮ ಅಭ್ಯರ್ಥಿ ಮುನೇಗೌಡ ಪರ ಪ್ರಚಾರ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಬಿಜೆಪಿಯ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ. ಈ ಬಗ್ಗೆ ವಿಡಿಯೊ ಹಂಚಿಕೊಂಡಿರುವ ಜಾತ್ಯಾತೀತ ಜನತಾದಳ, ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ.

"ಯಲಹಂಕದ ನಮ್ಮ ಅಭ್ಯರ್ಥಿ ಮುನೇಗೌಡ ಅವರ ಪರ ಪ್ರಚಾರ ಮಾಡಿದ ನಮ್ಮ ಕಾರ್ಯಕರ್ತರ ವಿರುದ್ಧ ಕರ್ನಾಟಕ ಬಿಜೆಪಿಯ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಯಲಹಂ ಶಾಸಕ ಎಸ್ ಆರ್ ವಿಶ್ವನಾಥ್ ಛೂ ಬಿಟ್ಟಿರುವ ಈ ಗೂಂಡಾಗಳು ನಿನ್ನೆ ಬೆಳಗ್ಗೆಯಿಂದ ತಡರಾತ್ರಿಯ ವರೆಗೂ ದೌರ್ಜನ್ಯ ನಡೆಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಇದೇನು ಉತ್ತರ ಪ್ರದೇಶವೆ..?" ಎಂದು ಆಕ್ರೋಶ ಹೊರಹಾಕಿದೆ.
"ಸೋಲುವ ಭೀತಿಯಿಂದ ಕರ್ನಾಟಕ ಬಿಜೆಪಿ ಇಂತಹ ಕೃತ್ಯಕ್ಕೆ ಇಳಿದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಇದಲ್ಲವೆ ಬಿಜೆಪಿಯ ಗೂಂಡಾಗಿರಿ ಸಂಸ್ಕೃತಿ. ನಮ್ಮದು ಶಾಂತಿ ಮತ್ತು ಸಮತೆಯ ದಾರಿಯಾಗಿದ್ದು, ನೀವೆಷ್ಟೆ ಪ್ರಚೋದಿಸಿದರೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ನಿಮ್ಮ ಎಲ್ಲಾ ಗೂಂಡಾಗಿರಿಗೆ ಚುನಾವಣೆಯ ದಿನ ಮತದಾರರು ಉತ್ತರ ನೀಡಲಿದ್ದಾರೆ" ಎಂದು ನಳಿನ್ ಕುಮಾರ್ ಕಟೀಲ್ ವಿರುದ್ಧವು ಟೀಕೆ ಮಾಡಿದೆ.
"ದೌರ್ಜನ್ಯಕ್ಕೆ ಒಳಗಾದ ನಮ್ಮ ಕಾರ್ಯಕರ್ತರ ಪರವಾಗಿ ನಾವು ಗಟ್ಟಿಯಾಗಿ ನಿಲ್ಲಲಿದ್ದೇವೆ. ಅವರ ಗೂಂಡಾಗಿರಿಗೆ ನಾವು ಬೆದರುವುದಿಲ್ಲ, ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಬಾರಿ ಯಲಹಂಕಕ್ಕೆ ಮುನೇಗೌಡರೇ ಶಾಸಕ ಎಂದು ಜನರು ತೀರ್ಮಾನಿಸಿದ್ದಾರೆ. ಕರ್ನಾಟಕ ಡಿಜಿಪಿಯವರು ದೌರ್ಜನ್ಯ ಎಸಗಿದ ಬಿಜೆಪಿಯ ಎಲ್ಲಾ ಗೂಂಡಾಗಳನ್ನೂ ಕಾನೂನಿನ ಕುಣಿಕೆಗೆ ತನ್ನಿ" ಎಂದು ಆಗ್ರಹಿಸಿದ್ದಾರೆ.












Click it and Unblock the Notifications