JDS Manifesto 2023 Bengaluru: ನಗರಾಭಿವೃದ್ಧಿಗೆ ಜೆಡಿಎಸ್ ಪ್ರತ್ಯೇಕ ಪ್ರಣಾಳಿಕೆ: ಸಾರಿಗೆ, ಆರೋಗ್ಯ, ಆಡಳಿತ ಸುಧಾರಣೆಗೆ ಭರವಸೆ
ಬೆಂಗಳೂರು, ಮೇ 06: ಕರ್ನಾಟಕ ವಿಧಾನಸಭಾ ಚುನಾವಣೆ ಅಂಗವಾಗಿ ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾದಳ (JDS) ಪಕ್ಷವು ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕವಾಗಿ 'ಜನತಾ ಪ್ರಣಾಳಿಕೆ 2023' ಬಿಡುಗಡೆ ಮಾಡಿದೆ. ಈ ಮೂಲಕ ನಗರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿರುವುದಾಗಿ ಪಕ್ಷ ಹೇಳಿಕೊಂಡಿದೆ.
ಶನಿವಾರ ಮೇ 6 ರಂದು ಜೆಡಿಎಸ್ ಜನತಾ ಪ್ರಣಾಳಿಕೆಯನ್ನು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಪಕ್ಷ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಬಿಡುಗಡೆ ಮಾಡಿದರು.

ಬೆಂಗಳೂರಿನ ಪ್ರತ್ಯೇಕ ಜೆಡಿಎಸ್ ಜನತಾ ಪ್ರಣಾಳಿಕೆಯಲ್ಲಿ ಮಹತ್ವದ ಅಂಶಗಳನ್ನು ಪಕ್ಷ ನೀಡಿದೆ. ಅದರ ಪ್ರಕಾರ, 'ಬೆಂಗಳೂರು ಜನರಿಗೆ ಸಾಮಾಜಿ ಭದ್ರತೆ ಹಾಗೂ ಆರೋಗ್ಯ ಭದ್ರತೆ ಒದಗಿಸುವುದು, ಆಧುನಿಕ ಶಿಕ್ಷಣ ಪದ್ಧತಿಗೆ ಒತ್ತು, ಜರನ ಆರೋಗ್ಯ ಸಂಪತ್ತನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವುದು. ಮಹಾನಗರ ಪಾಲಿಕೆ ಆಡಳಿತದಲ್ಲಿ ಸುಧಾರಣೆ ತರುವ ಜೊತೆಗೆ ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ, ಅಲ್ಲದೇ ಬೆಂಗಳೂರು ಮಹಾನಗರ ಹಸರೀಕರಣ ಮಾಡುವ ಜೊತೆಗೆ ಅರಣ್ಯೀಕರಣಕ್ಕೆ ಪ್ರೋತ್ಸಾಹ ನೀಡುವ ಯೋಜನೆ ಜಾರಿ.
ಬೆಂಗಳೂರು ನಗರದಲ್ಲಿರುವ ಕೆರೆ, ಕಣಿವೆ ಸಂರಕ್ಷಣೆ ಜೊತೆ ಜೊತೆಗೆ ರಾಜಕಾಲುವೆಯ ಪುನಶ್ಚೇತನಕ್ಕೆ ಕ್ರಮ ಕೈಗೊಂಡು ನೆರೆ ನಿಯಂತ್ರಣದಲ್ಲಿಡಲು ಚಿಂತನೆ ಹಾಗೂ ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ ಏತ ನೀರಾವರಿ ಯೋಜನೆಯನ್ನು ಆಧುನೀಕರಣ ಗೊಳಿಸುವುದರ ಬಗ್ಗೆ ಗಮನಹರಿಸುವುದರ ಮೂಲಕ ನಗರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ಎಂದು ಜೆಡಿಎಸ್ ಭವರಸೆ ನೀಡಿದೆ.

JDS ಭರವಸೆ- ಬೆಂಗಳೂರಿನ ಜನತೆಗಾಗಿ ಜೆಡಿಎಸ್ ತರಲಿರುವ ಯೋಜನೆಗಳು
* 'ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಶ್ರೀರಕ್ಷೆಯಡಿ' ಬಡವರಿಗೆ-ಕಾರ್ಮಿಕರಿಗೆ ಮನೆ ಕಲ್ಪಿಸಿಕೊಡಲಾಗುವುದು.
* ವಿವಿಧ ಯೋಜನೆಗಳಡಿ ಮಕ್ಕಳು ಸೇರಿದಂತೆ ಎಲ್ಲರಿಗೆ ನಿಯತಕಾಲಿಕವಾಗಿ ಉಚಿತ ಲಸಿಕೆ.
* ಮಾಸಿಕ 10ಕೆ.ಜಿ. ಅಕ್ಕಿ ಉಚಿತ ವಿತರಣೆ.
* ರಾಜ್ಯದಲ್ಲಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗುವುದು.
* ಖಾಸಗಿ ಶಾಲಾ ಶಿಕ್ಷಕರಿಗೆ, ಆಟೋ ಚಾಲಕರಿಗೆ, ಬೀದಿ ದೀಪಗಳಿಗೆ ಮತ್ತು ವ್ಯಾಪಾರಿಗಳಿಗೆ ಭದ್ರತೆ
* ಬೆಂಗಳೂರು ನಗರದಲ್ಲಿ ಶೌಚಾಲಯ ವ್ಯವಸ್ಥೆ
* ಶೌಚ ಗುಂಡಿ ಕರ ಸ್ವಚ್ಛತೆ ನಿರ್ಮೂಲನೆ
JDS ಭರವಸೆ- ಮಹಾನಗರ ಪಾಲಿಕೆ ಆಡಳಿತ ಸುಧಾರಣೆ
* ಹದಗೆಟ್ಟ ಪಾಲಿಕೆ ಆಡಳಿತ ಸುಧಾರಣೆಗೆ ಸರಳ ವ್ಯವಸ್ಥೆ ಜಾರಿ.
* ತೆರಿಗೆ ವಂಚಿತರ ವಿರುದ್ಧ ವಸೂಲಾತಿಗೆ ಕ್ರಮ
* ಎಲ್ಲ ಕಾಮಗಾರಿಗಳ ಆರಂಭಕ್ಕೆ ಅಗತ್ಯ ಕ್ರಮ ಮತ್ತು ಟೆಂಡರ್ ಆಹ್ವಾನಕ್ಕೆ ಕ್ರಮ.
* 110 ಹಳ್ಳಿಗಳಿಗೆ ಪೈಪ್‌ಲೈನ್ ವಿಸ್ತರಿಸಿ ಕಾವೇರಿ ನೀರು ಪೂರೈಕೆಗೆ ಕ್ರಮ
* ತ್ಯಾಜ್ಯ ನಿರ್ವಹಣೆ-ವಿಲೇವಾರಿಗೆ ಕ್ರಮ, ಮರುವಿನ್ಯಾಸಗೊಳಿಸುವುದು.
JDS ಭರವಸೆ- ಶಿಕ್ಷಣವೇ ಆಧುನಿಕ ಶಕ್ತಿ
* ಪಂಚರತ್ನ ಯೋಜನೆ ಅಡಿಯಲ್ಲಿ ಶಾಲಾ ಆಡಳಿತ ಸುಧಾರಣೆ.
* ಜಿಲ್ಲಾ ಶಾಲಾ ಶಿಕ್ಷಣ ಪರಿಷತ್ ಸ್ಥಾಪನೆ
* ಹೊಸ ಶಿಕ್ಷಣ ನೀತಿಯನ್ನು ಮದರಸಾ, ಅಲ್ಪಸಂಖ್ಯಾತ ಸಮುದಾಯ ನಿರ್ವಹಣೆಯ ಶಾಲೆ ಒಳಗೊಂಡಂತೆ ಎಲ್ಲ ಶಾಲೆಗಳಲ್ಲಿ ಕಡ್ಡಾಯ ಜಾರಿಗೆ ಕ್ರಮ
* ಸರ್ಕಾರಿ ವಲಯದ ಶಾಲೆಗಳ ಅಭಿವೃದ್ಧಿಗೆ ಕ್ರಮ
JDS ಭರವಸೆ- ಆರೋಗ್ಯ ಶ್ರೀರಕ್ಷೆಗೆ ಜೆಡಿಎಸ್ ಭರವಸೆ
* ಸಾರ್ವಜನಿಕ ಆರೋಗ್ಯ ದೃಷ್ಟಿಕೋನ ಮತ್ತು ರೋಗ ನಿವಾರಕ ದೃಷ್ಟಿಕೋನದಲ್ಲಿ ನಗರದ ನಾಗರಿಕರ ಆರೋಗ್ಯ ಕಾಪಾಡಲಾಗುವುದು.
* ತ್ಯಾಜದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುವುದು.
* ಪ್ರತಿ ವಾರ್ಡ್‌ನಲ್ಲಿ 30ಹಾಸಿಗೆ ವುಳ್ಳ ಸುಸಜ್ಜಿತ ಆಸ್ಪತ್ರೆ ಸ್ಥಾಪನೆ
* ಈ ಆಸ್ಪತ್ರೆಗಳಲ್ಲಿ 24x7 ನಿರಂತರ ಆರೋಗ್ಯ ಸೇವೆ ಲಭ್ಯವಾಗುಂತೆ ಮಾಡುವುದು.
* ನಗರದ ಸ್ವಚ್ಛವಾಗಿಡಲು ಲಭ್ಯವಿರುವ ತಂತ್ರಜ್ಞಾನ ಕುರಿತು ಪ್ರತಿ ವರ್ಷ ನಗರಾದ್ಯಂತ ವಸ್ತು ಪ್ರದರ್ಶನ ಆಯೋಜಿಸಲಾಗುವುದು.
* ಬೆಂಗಳೂರು ಸಾರ್ವಜನಿಕರ ಆರೋಗ್ಯ ಮಂಡಳಿ ರಚನೆ.
JDS ಭರವಸೆ-ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ
* ಮುಂಬೈ, ಹೈದರಾಬಾದ್, ಚೆನ್ನೈ ನಗರಗಳಂತೆ ಬೆಂಗಳೂರಿನಲ್ಲಿ ಕೇಂದ್ರ ರೈಲ್ವೆ ಇಲಾಖೆ ಸಹಕಾರದಲ್ಲಿ ವಿವಿಧ ಭಾಗದಲ್ಲಿ ರೈಲ್ವೆ ಅಭಿವೃದ್ಧಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶ.
* ನಮ್ಮ ಮೆಟ್ರೋ ಎಡ-ಬಲ ಪಾರ್ಶ್ವದ ಪ್ರದೇಶಗಳ ವಿಸ್ತರಣೆ.
* ಉದ್ದೇಶಿತ ಮೆಟ್ರೋ ನಿಲ್ದಾಣಗಳಿಗೆ ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಪ್ರಯಾಣಿಕರಿಗೆ ಎಲೆಕ್ಟ್ರಿಕ್ ಬಸ್ ಸೇವೆ ಲಭ್ಯವಾಗುವಂತೆ ಮಾಡಲಾಗುವುದು.
* ಮೆಟ್ರೋ ರೈಲ್ವೆ ಜಾಲ ಬಲಪಡಿಸಲಾಗುವುದು.
* ನಗರದ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ಧಿ ಮತ್ತು ಸುಗಮ ಸಂಚಾರ ವ್ಯವಸ್ಥೆಗೆ ಕ್ರಮ
* ನಗರದಲ್ಲಿನ ವಾಹನ ದಟ್ಟಣೆಗೆ ಕಡಿಮೆಗೊಳಿಸಲು ವಿನೂತನ ಕ್ರಮ ಕೈಗೊಳ್ಳಲಾಗುವುದು.
* ದಶಕಗಳಿಂದ ನೆನೆಗುದಿಗೆ ಬಿದ್ದ ಬೆಂಗಳೂರು ಹೊರ ವರ್ತುಲ ರಸ್ತೆ (PRR) ಕಾಮಗಾರಿ ತ್ವರಿತ ಪೂರ್ಣಕ್ಕೆ ಆದ್ಯತೆ.
* 163 ಜಂಕ್ಷನ್‌ಗಳಲ್ಲಿ ಆಟೋ ಮ್ಯಾಟಿಕ್ ಸಿಗ್ನಲ್ ಸ್ಥಾಪನೆ ಮತ್ತು ಅಪಘಾತದ ಬ್ಲಾಕ್ ಸ್ಟಾಟ್‌ಗಳ ಅಭಿವೃದ್ಧಿ.
* ರಸ್ತೆಗುಂಡಿಗಳ ಮುಚ್ಚುವ ದುರಸ್ಥಿ ಕಾರ್ಯವನ್ನು ಒಂದರಿಂದ ಎರಡು ದಿನದಲ್ಲಿ ಮುಗಿಸಲು ವ್ಯವಸ್ಥೆ.
* ಸಾರ್ವಜನಿಕರಿಗಾಗಿ ಸ್ನೇಹಮಯಿ ಪಾದಾಚಾರಿ ರಸ್ತೆಗಳ ನಿರ್ಮಾಣ.

JDS ಭರವಸೆ- ಬೆಂಗಳೂರು ಹಸರೀಕರಣ-ಅರಣ್ಯೀಕರಣ
* ನಗರದಲ್ಲಿ ಗಿಡ ನೆಡುವ ಕಾರ್ಯಕ್ರಮ ಆರಂಭಿಸಲಾಗುವುದು
* 110 ಹಳ್ಳಿಗಳಲ್ಲಿ 300 ಸಾರ್ವಜನಿಕ ಉದ್ಯಾನ ಸ್ಥಾಪನೆ
* ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಕ್ರಮ
* ಸೋಲಾರ್ ಬೀದಿ ದೀಪ ಬಳಕೆಗೆ ಉತ್ತೇಜನ.
* ಕುಟುಂಬಗಳಿಗೆ (ಮನೆ), ಸರ್ಕಾರಿ ಕಚೇರಿಗಳಲ್ಲಿ ಸೋಲಾರ್ ದೀಪ ಬಳಸುವಂತೆ ಉತ್ತೇಜನ
JDS ಭರವಸೆ- ಕೆರೆ ಕಣಿವೆಗಳ ಸಂರಕ್ಷಣೆ-ರಾಜಕಾಲುವೆ ಪುನಶ್ಚೇತನ
* ರಾಜಕಾಲುವೆ ಒತ್ತುವರಿ ತೆರವು ಮಾಡಿ ನಗರ ಪುನರ್ ನಿರ್ಮಾಣ
* ನಗರದ ಕುಡಿಯುವ ನೀರಿನ ಕ್ಷಾಮ ಬಗೆಹರಿಸಲು ಕ್ರಮ
* ಕೋರಮಂಗಲ ಮತ್ತು ಚೆಲ್ಲಘಟ್ಟ ವ್ಯಾಲಿ ಏತ ನೀರಾವರಿ ಯೋಜನೆ ಆಧುನಿಕರಣ
* ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಸಲು ಭಗೀರಥ ಪ್ರಯತ್ನ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ












Click it and Unblock the Notifications