• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಚ್ಚರಿಯಾದರೂ ಸತ್ಯ, ಬಿಬಿಎಂಪಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ

|

ಬೆಂಗಳೂರು, ಆ. 28 : ಬಿಬಿಎಂಪಿ ಚುನಾವಣೆ ಫಲಿತಾಂಶ ಹೊಸ ರಾಜಕೀಯ ಲೆಕ್ಕಾಚಾರಗಳನ್ನು ಹುಟ್ಟು ಹಾಕಿದೆ. ಮೇಯರ್ ಪಟ್ಟವನ್ನು ಬಿಜೆಪಿಯಿಂದ ಕಸಿದುಕೊಳ್ಳಲು ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲಿವೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ದೂಸ್ತಿಗೆ ಹಸಿರು ನಿಶಾನೆ ತೋರಿಸಿದ್ದು, ರೆಸಾರ್ಟ್ ರಾಜಕೀಯ ಆರಂಭವಾಗಿದೆ.

ಪಕ್ಷದ ಮೂಲಗಳ ಪ್ರಕಾರ ಬೆಂಗಳೂರನ್ನು ಪ್ರತಿನಿಧಿಸುವ ಕಾಂಗ್ರೆಸ್‌ನ ಕೆಲವು ಸಚಿವರು ಜೆಡಿಎಸ್‌ನ ವಿಧಾನಸಪರಿಷತ್ ಸದಸ್ಯರ ಮೂಲಕ ಈ ಕುರಿತ ಮಾತುಕತೆ ಆರಂಭಿಸಿದ್ದಾರೆ. ಚಾಮರಾಜಪೇಟೆ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಜೊತೆ ಮಾತುಕತೆ ನಡೆಸಿದ್ದು, ನಂತರ ಇದು ಕುಮಾರಸ್ವಾಮಿ ಅವರನ್ನು ತಲುಪಿದೆ. ಇಂದು ದೇವೇಗೌಡ ಅಥವ ಕುಮಾರಸ್ವಾಮಿ ಅವರ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ. [ಬಿಬಿಎಂಪಿ ಮೇಯರ್ ಹುದ್ದೆಯ ರೇಸ್ ನಲ್ಲಿರುವ ನಾಯಕರು]

ಎಲ್ಲವೂ ಅಂದುಕೊಂಡಂತೆ ನಡೆದು ಮೈತ್ರಿಕೂಟ ಸಿದ್ಧವಾದರೆ ಮೇಯರ್ ಸ್ಥಾನವನ್ನು ಕಾಂಗ್ರೆಸ್, ಉಪ ಮೇಯರ್ ಸ್ಥಾನವನ್ನು ಜೆಡಿಎಸ್ ಹಂಚಿಕೊಳ್ಳಲಿವೆ. ಆ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡವಿದೆ. ಈ ಬೆಳವಣಿಗೆ ಗುರುವಾರ ರಾತ್ರೋರಾತ್ರಿ ನಡೆದಿದ್ದು. 8 ಪಕ್ಷೇತರರು ಕಾಂಗ್ರೆಸ್ ಪಾಳಯಕ್ಕೆ ಜಿಗಿದಿದ್ದಾರೆ. [ಮಹಿಳಾ ಉಪ ಮೇಯರ್ ಗೌನ್ ಯಾರು ತೊಡಲಿದ್ದಾರೆ?]

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ 76 ಮತ್ತು ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿದ್ದು, ಪಕ್ಷೇತರರು 8 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಬಿಜೆಪಿಗೆ ಬಹುಮತ ಪಡೆಯಲು 3 ಸ್ಥಾನಗಳ ಅವಶ್ಯಕತೆ ಇದೆ. ಇತ್ತ ಕಾಂಗ್ರೆಸ್ ಜೆಡಿಎಸ್ ಜೊತೆ ಕೈ ಜೋಡಿಸಿದರೆ ಬಿಜೆಪಿಗೆ ಮೇಯರ್ ಪಟ್ಟ ತಪ್ಪಿಲಿದೆ....

ಗುರುವಾರ ರಾತ್ರಿಯೇ ಮುಗಿದ ದೋಸ್ತಿ ಮಾತುಕತೆ

ಗುರುವಾರ ರಾತ್ರಿಯೇ ಮುಗಿದ ದೋಸ್ತಿ ಮಾತುಕತೆ

ಜೆಡಿಎಸ್‌ನಿಂದ ಆಯ್ಕೆಯಾದ ಪಾಲಿಕೆ ಸದಸ್ಯರು ಮತ್ತು ವಿಧಾನಪರಿಷತ್ ಸದಸ್ಯರ ಜೊತೆ ಬೆಂಗಳೂರನ್ನು ಪ್ರತಿನಿಧಿಸುವ ಕಾಂಗ್ರೆಸ್‌ನ ಸಚಿವರು ಮೊದಲು ಮಾತುಕತೆ ನಡೆಸಿ ದೋಸ್ತಿ ವೇದಿಕೆ ಸಿದ್ಧಗೊಳಿಸಿದರು. ಗುರುವಾರ ರಾತ್ರಿ ಈ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಅಂತಿಮವಾಗಿ ದೇವೇಗೌಡರು ದೋಸ್ತಿಗೆ ಅಂತಿಮ ಒಪ್ಪಿಗೆ ನೀಡಿದ್ದಾರೆ.

ಸಿದ್ದರಾಮಯ್ಯ, ಕುಮಾರಸ್ವಾಮಿ ಮಾತುಕತೆ

ಸಿದ್ದರಾಮಯ್ಯ, ಕುಮಾರಸ್ವಾಮಿ ಮಾತುಕತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ರಾತ್ರಿ ಈ ಕುರಿತು ಅಂತಿಮ ಮಾತುಕತೆ ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಲು ನಿರ್ಧರಿಸಿದ್ದು, ನಂತರ ಮೈತ್ರಿ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನ

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನ

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ಮೈತ್ರಿಕೂಟ ಸಿದ್ಧವಾಗುತ್ತಿದೆ. ಧರ್ಮಸಿಂಗ್ ಜೊತೆ ಸೇರಿ ಸರ್ಕಾರದ ಮಾಡಿದ ಬಳಿಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತಿವೆ. 8 ಜನ ಪಕ್ಷೇತರರನ್ನು ಸೆಳೆದಿರುವುದೇ ಈ ಮೈತ್ರಿಗೆ ಮುನ್ನುಡಿಯಾಗಿದೆ. 100 ಸ್ಥಾನ ಪಡೆದ ಬಿಜೆಪಿ ಪಕ್ಷೇತರರನ್ನು ಸೆಳೆಯಲು ವಿಫಲವಾಗಿದೆ ಎಂಬುದು ಸದ್ಯದ ಸುದ್ದಿ.

ದೋಸ್ತಿ ಲೆಕ್ಕಾಚಾರದ ನಂಬರ್ ಗೇಮ್

ದೋಸ್ತಿ ಲೆಕ್ಕಾಚಾರದ ನಂಬರ್ ಗೇಮ್

ಕಾಂಗ್ರೆಸ್ 76 + 25 - 101

ಬಿಜೆಪಿ 100 +24 - 124

ಜೆಡಿಎಸ್ 14 + 7 - 21

ಮೇಯರ್ ಆಯ್ಕೆಯಾಗಲು 128 ಮತಗಳು ಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಬಿಬಿಎಂಪಿ ಸದಸ್ಯರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, 8 ಜನ ಪಕ್ಷೇತತರು ಸೇರಿ ಈ ಮೈತ್ರಿಕೂಟ ಸಿದ್ಧವಾಗುತ್ತಿದೆ.

ದೋಸ್ತಿಯಾದರೆ ಸಂಖ್ಯಾಬಲ ಎಷ್ಟಾಗುತ್ತದೆ?

ದೋಸ್ತಿಯಾದರೆ ಸಂಖ್ಯಾಬಲ ಎಷ್ಟಾಗುತ್ತದೆ?

ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಬಿಬಿಎಂಪಿಯ 198 ಸದಸ್ಯರು. ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಒಟ್ಟು 250 ಸದಸ್ಯರು ಮತದಾನ ಮಾಡಲಿದ್ದಾರೆ. 100+24 ಸೇರಿ ಬಿಜೆಪಿ ಬಳಿ 124 ಬಲ ವಾಗುತ್ತದೆ. ಕಾಂಗ್ರೆಸ್, ಜೆಡಿಎಸ್ ಪಕ್ಷೇತರರು ಸೇರಿ 130 ಬಲವಾಗುತ್ತದೆ. ಮೇಯರ್ ಆಯ್ಕೆಗೆ 128 ಮತಗಳು ಸಾಕು.

ಹೀಗಿದೆ ಮೈತ್ರಿ ಲೆಕ್ಕಾಚಾರ

ಹೀಗಿದೆ ಮೈತ್ರಿ ಲೆಕ್ಕಾಚಾರ

* ಕಾಂಗ್ರೆಸ್‌ನ 76 ಸದಸ್ಯರು, 25 ಶಾಸಕ, ಸಂಸದ, ಪರಿಷತ್ ಸದಸ್ಯರು ಸೇರಿ 101 ಸ್ಥಾನವಾಗುತ್ತದೆ.

* ಜೆಡಿಎಸ್‌ನ 14 ಸದಸ್ಯರು ಮತ್ತು 7 ಶಾಸಕರು, ವಿಧಾನಪರಿಷತ್ ಸದಸ್ಯರ ಸೇರಿ 21 ಮತವಾಗುತ್ತದೆ.

101 + 21 ಅಂದರೆ ಒಟ್ಟು 122 ಸದಸ್ಯರಾಗುತ್ತಾರೆ. 8 ಪಕ್ಷೇತರರು ಬೆಂಬಲ ನೀಡಿದರೆ 130 ಸದಸ್ಯ ಬಲವಾಗಲಿದ್ದು, ಮೇಯರ್ ಪಟ್ಟ ಬಿಜೆಪಿ ಕೈ ತಪ್ಪಲಿದೆ.

ರೆಸಾರ್ಟ್ ರಾಜಕಾರಣ ಆರಂಭ

ರೆಸಾರ್ಟ್ ರಾಜಕಾರಣ ಆರಂಭ

ಬಿಬಿಎಂಪಿ ಚುನಾವಣೆಯಲ್ಲೂ ರೆಸಾರ್ಟ್ ರಾಜಕಾರಣ ಆರಂಭವಾಗಲಿದ್ದು 8 ಪಕ್ಷೇತರ ಸದಸ್ಯರ ಜೊತೆ ಕೆಲವು ಜೆಡಿಎಸ್ ಸದಸ್ಯರು ನಗರದ ಹೊರವಲಯದ ರೆಸಾರ್ಟ್ ಸೇರಿದ್ದಾರೆ. ಕಾಂಗ್ರೆಸ್‌ನ ಸದಸ್ಯರು ಇಂದು ರೆಸಾರ್ಟ್‌ಗೆ ತೆರಳಿದ್ದಾರೆ. ಮೈತ್ರಿ ಮಾತುಕತೆ ಅಂತಿಮ ರೂಪ ಪಡೆದ ಬಳಿಕ ಎಲ್ಲರೂ ವಾಪಸ್ ಆಗಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
In a political development in Karnataka Congress may join hands with JDS for Bruhat Bengaluru Mahanagara Palike (BBMP) Mayor and Deputy mayor post.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more