ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ತಡರಾತ್ರಿವರೆಗೂ ನಡೆದಿದ್ದೇನು?
Recommended Video

ಬೆಂಗಳೂರು, ಡಿಸೆಂಬರ್ 5: ಜೆಡಿಎಸ್ ಶಾಸಕಾಂಗ ಸಭೆ ತಡರಾತ್ರಿವರೆಗೂ ನಡೆದಿದೆ ಹಾಗಾದರೆ ಸಭೆಯಲ್ಲಿ ಅಷ್ಟು ಚರ್ಚೆಯಾದಂತಹ ವಿಷಯ ಯಾವುದು?
ಸಭೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಸಮನ್ವಯ ಸಮಿತಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರನ್ನು ಸೇರ್ಪಡೆ ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಯಿತು.
ಕೆಪಿಸಿಸಿ ಅಧ್ಯಕ್ಷರು ಸಮನ್ವಯ ಸಮಿತಿ ಸದಸ್ಯರಾಗಿರುವ ಮಾದರಿಯಲ್ಲೇ ವಿಶ್ವನಾಥ್ ಅವರನ್ನೂ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಮುಂದಾದರೆ ಜೆಡಿಎಸ್‌ನಿಂದಲೂ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಕುರಿತು ಚರ್ಚಿಸಲಾಯಿತು.
ಹಿಂದುಳಿದ, ದಲಿತ, ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದವರಿಗೆ ಅವಕಾಶ ನೀಡಬೇಕಿದೆ. ಆದರೆ 2 ಸ್ಥಾನ ಮಾತ್ರ ಖಾಲಿ ಇರುವುದರಿಂದ ಯಾರನ್ನು ಸೇರ್ಪಡೆ ಮಾಡಬೇಕು ಎಂಬ ವಿಚಾರದಲ್ಲಿ ಎಚ್‌ಡಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪರಸ್ಪರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾಂಗ್ರೆಸ್ ಸಚಿವರು ತಮ್ಮನ್ನು ಕಡೆಗಾಣಿಸುತ್ತಿದ್ದಾರೆ ಎಂದು ಕೆಲ ಜೆಡಿಎಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿಯ ಭಿನ್ನಾಭಿಪ್ರಾಯ ಮನೋಭಾವ ಬೇಡ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡುಹಾಗೆ ಪಕ್ಷಗಳ ಸಚಿವರ ಮನವೊಲಿಸುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.












Click it and Unblock the Notifications