• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಜೆಪಿ ಕ್ರಾಂತಿ ಕಾರಣ: ಆರ್.ಅಶೋಕ್

|

ಬೆಂಗಳೂರು, ಅಕ್ಟೋಬರ್ 11: ದೇಶದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯ ನಂತರ ದೇಶದಲ್ಲಿ ಪ್ರಜಾಪ್ರಭುತ್ವದ ಮರುಹುಟ್ಟು ಆಯಿತು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.

ನಗರದಲ್ಲಿ ಇಂದು ಕೇಂದ್ರ ಸಚಿವ ಅನಂತಕುಮಾರ್ ಅವರ ಕಚೇರಿಯಲ್ಲಿ ನಡೆದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಹಾಗೂ ನಾನಾಜಿ ದೇಶಮುಖ್ ಅವರ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ 'ಸರ್ವಾಧಿಕಾರ vs ಪ್ರಜಾಪ್ರಭುತ್ವ' ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಳ್ಳಾರಿ ಉಪಚುನಾವಣೆ: ಡಿಕೆಶಿ ವಿರುದ್ದ ತೊಡೆತಟ್ಟಿದ ಶ್ರೀರಾಮುಲು

ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಇಂದಿರಾಗಾಂಧಿ ಅವರು ಹೇರಿದ್ದ ತುರ್ತುಪರಿಸ್ಥಿತಿಯ ಸಂಧರ್ಭದಲ್ಲಿ ಜನಸಾಮಾನ್ಯರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರು ಎಂದರು.

1975 ರಲ್ಲಿ ಈ ತುರ್ತು ಪರಿಸ್ಥಿತಿಯ ವಿರುದ್ದ ದೇಶಾದ್ಯಂತ ಜನಾಂದೋಲನ ಪ್ರಾರಂಭಿಸಿದ್ದು ಲೋಕಮಾನ್ಯ ಜಯಪ್ರಕಾಶ್ ನಾರಾಯಣ್ ಅವರು. ಈ ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಜನಸಾಮಾನ್ಯರು ತಮ್ಮ ಸರಕಾರ ಹಾಗೂ ಇಂದಿರಾಗಾಂಧಿಯವರ ಬಗ್ಗೆ ಸೊಲ್ಲೆತ್ತಲೂ ಆಗುತ್ತಿರಲಿಲ್ಲ. ಆ ಸಂಧರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ತಾವು ಜೈಲು ಪಾಲಾಗಿದ್ದನ್ನು ನೆನಪಿಸಿಕೊಂಡರು.

ಉತ್ತರ ಪ್ರದೇಶದಲ್ಲಿ ಬಿಜೆಪಿಯವರಿಗೆ 'ನೊ ಎಂಟ್ರಿ' ಬೋರ್ಡ್ ನ ಸ್ವಾಗತ!

ದೇಶದಲ್ಲಿ ಜನರ ಸ್ವಾತಂತ್ರ ಹರಣ ಮಾಡುವಂತ ಕ್ರಮವನ್ನು ಕೈಗೊಂಡ ಕಾಂಗ್ರೆಸ್ ದುರಾಡಳಿತದ ಬಗ್ಗೆ ಅರಿವಿಲ್ಲದೆ ಇದ್ದಂತಹ ಮುಗ್ದ ಜನರು ಗ್ರಾಮಗಳಲ್ಲಿದ್ದರು. ಅವರಿಗೆ ತುರ್ತುಪರಿಸ್ಥಿತಿಯ ಘೋರ ಪರಿಣಾಮಗಳ ಕುರಿತು ಸರಿಯಾದ ಮಾಹಿತಿ ಇರಲಿಲ್ಲ. ಹಾಗಾಗಿ ಉರಲ್ಲಿ ಕೆಲವರು ಈ ತುರ್ತು ಪರಿಸ್ಥಿತಿ ಹೋರಾಟದ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿದ್ದರು ಎಂದರು.

ಜೆಪಿ ಎರಡನೇ ಸ್ವಾತಂತ್ರ್ಯ ಕೊಡಿಸಿದರು

ಜೆಪಿ ಎರಡನೇ ಸ್ವಾತಂತ್ರ್ಯ ಕೊಡಿಸಿದರು

ಆ ಪರಿಸ್ಥಿತಿಯ ನಂತರ ತಮ್ಮ ಜೀವವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಬದುಕುತ್ತಿದ್ದೆ. ಎರಡು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಆ ನಂತರವಷ್ಟೇ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಯಿತು ಎಂದರು. ಜೆಪಿ ಚಳುವಳಿ ಅಗದೇ ತುರ್ತು ಪರಿಸ್ಥಿತಿಯಂತಹ ಅವಕಾಶದ ರುಚಿಯನ್ನು ಕಂಡುಕೊಂಡಿದ್ದರೆ ದೇಶ ಪಾಕಿಸ್ತಾನವಾಗುತ್ತಿತ್ತು. ಆ ದಿನಗಳಲ್ಲಿ ದೇಶದಲ್ಲಿ ಪ್ರಜಾಪ್ರಭುತ್ತವವನ್ನು ಉಳಿಸುವ ಮೂಲಕ ದೇಶಕ್ಕೆ ಎರಡನೇ ಸ್ವಾತಂತ್ರ ತಂದುಕೊಡುವಲ್ಲಿ ಜೆಪಿಯವರು ಪ್ರಮುಖ ಪಾತ್ರವಹಿಸಿದರು ಎಂದರು.

ಬಿಎಸ್‌ವೈ, ಅನಂತ್‌ಕುಮಾರ್‌, ಸುರೇಶ್‌ಕುಮಾರ್‌ ಹೋರಾಡಿದ್ದರು

ಬಿಎಸ್‌ವೈ, ಅನಂತ್‌ಕುಮಾರ್‌, ಸುರೇಶ್‌ಕುಮಾರ್‌ ಹೋರಾಡಿದ್ದರು

ಬಿಜೆಪಿಯ ರಾಜ್ಯ ಮುಖಂಡರುಗಳಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಕೇಂದ್ರ ಸಚಿವ ಅನಂತ ಕುಮಾರ್ ಅವರು ಹಾಗೂ ಸುರೇಶ್ ಕುಮಾರ್ ಅವರು ತುರ್ತುಪರಿಸ್ಥಿತಿ ವಿರುದ್ದ ಹೋರಾಟದ ಸಂಧರ್ಭದಲ್ಲಿ ಜೈಲು ಪಾಲಾಗಿದ್ದನ್ನು ಉಲ್ಲೇಖಿಸಿದರು. ಹಾಗೂ ಅನಂತ್ ಕುಮಾರ್ ಅವರು ಪ್ರತಿವರ್ಷ ಜೆಪಿ ಅವರ ಹುಟ್ಟೂರಾದ ಸಿತಾಬ್ ದಿಯಾರಾ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು ಎಂದು ಹೇಳಿದರು.

ತಂದೆಯ ಅಂತ್ಯಕ್ರಿಯೆ ನೆನೆಸಿಕೊಂಡು ಕಣ್ಣೀರಿಟ್ಟ ದೇವೇಗೌಡ

ಜೆಪಿ ಅವರು ಮಹಾನಾಯಕರ ಸಂಗಮ

ಜೆಪಿ ಅವರು ಮಹಾನಾಯಕರ ಸಂಗಮ

ಮಾಜಿ ವಿಧಾನ ಪರಿಷತ್ ಸದಸ್ಯ - ಪದ್ಮಶ್ರಿ ಪುರಸ್ಕೃತರಾದ ಪ್ರೊ. ದೊಡ್ಡರಂಗೇಗೌಡರು ಮಾತನಾಡಿ, ಜಯಪ್ರಕಾಶ್ ನಾರಾಯಣ್ ಅವರಲ್ಲಿ ಮಹಾತ್ಮಾ ಗಾಂಧಿ, ಕಾರ್ಲ್ ಮಾಕ್ಸ್, ವಿನೋಭಾ ಭಾವೆ ಇದ್ದಾರೆ ಎಂದರು. ಈ ಎಲ್ಲಾ ಮಹಾತ್ಮ ಜನರ ಅಪೂರ್ವ ವಿಚಾರ ಧಾರೆಯ ಸಂಗಮ ಜಯಪ್ರಕಾಶ್ ನಾರಾಯಣ್. ಅವರು, ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಜೆಪಿ ಅವರ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ನನಗೆ ಒದಗಿಬಂದಿತ್ತು. ಪತ್ರಿಕೆಯೊಂದಕ್ಕೆ ಸುದ್ದಿ ನೀಡಬೇಕು ಎನ್ನುವ ಹಿನ್ನಲೆಯಲ್ಲಿ ಅವರ ವಿಚಾರ ಪ್ರಭಾ ವಲಯ ಒಳಪಡುವ ಅವಕಾಶ ಒದಗಿಬಂದಿದ್ದನ್ನು ನೆನೆಪಿಸಿಕೊಂಡರು.

ನೆಹರೂ-ಜೆಪಿ ನಡುವೆ ಭಿನ್ನಾಭಿಪ್ರಾಯವಿದ್ದವು

ನೆಹರೂ-ಜೆಪಿ ನಡುವೆ ಭಿನ್ನಾಭಿಪ್ರಾಯವಿದ್ದವು

ಈ ಸಂಪೂರ್ಣ ಕ್ರಾಂತಿಯ ಹರಿಕಾರರಾದ ಜಯಪ್ರಕಾಶ್ ನಾರಾಯಣ್ ಅವರು ಸರ್ವಾಧಿಕಾರದ ವಿರುದ್ದ ಎದೆತಟ್ಟಿ ನಿಂತ ಮಹಾನ್ ವ್ಯಕ್ತಿ. ಭಾರತದ ಅಭಿವೃದ್ದಿಯ ಬಗ್ಗೆ ಅಪಾರ ಕನಸನ್ನು ಹೊಂದಿದ್ದರು. ಕ್ರಿಯಾತ್ಮಕ ಆಲೋಚನೆಯನ್ನು ಹೊಂದಿದ್ದ ಜೆಪಿ ಅವರು, ಮಹಾತ್ಮಾಗಾಂಧಿಯವರ ಗ್ರಾಮಸ್ವರಾಜ್ಯದಂತಹ ಕನಸನ್ನು ನನಸುಗೊಳಿಸಲು ಶ್ರಮಿಸಿದರು ಎಂದರು. ಕ್ರಿಯಾತ್ಮಕ ಆಲೋಚನೆಯನ್ನು ಹೊಂದಿದ್ದ ಇವರಿಗೂ ಆಗಿನ ಪ್ರಧಾನಿ ನೆಹರೂ ಅವರಿಗೂ ಅನೇಕ ವ್ಯತ್ಯಾಸಗಳಿದ್ದವು. ನೆಹರು ಜೆಪಿ ಅವರನ್ನು ಇಷ್ಟಪಡುತ್ತಿದ್ದರು ಆದರೆ ನೆಹರು ಅವರ ಕೆಲವು ನೀತಿಗಳು ಜೆಪಿ ಅವರಿಗೆ ಇಷ್ಟವಾಗುತ್ತಿರಲಿಲ್ಲ. ನೆಹರೂ ಕನಸಿನ ವಾದಿಯಾಗಿದ್ದರೆ ಜೆಪಿ ಅವರು ವಾಸ್ತವ ವಾದಿಯಾಗಿದ್ದರು. ಭಾರತದ ಪರಿವರ್ತನೆಯ ಸಮಾಜ ವಿಜ್ಞಾನಿ ಜಯಪ್ರಕಾಶ್ ನಾರಾಯಣ್ ಅವರು ಎಂದರೆ ತಪ್ಪಾಗಲಾರದು ಎಂದರು.

ಜೆಪಿ ಚಳುವಳಿ ದಿನಗಳ ನೆನೆದ ಸೋಮಣ್ಣ

ಜೆಪಿ ಚಳುವಳಿ ದಿನಗಳ ನೆನೆದ ಸೋಮಣ್ಣ

ಮಾಜಿ ಸಚಿವ ಸೋಮಣ್ಣ ಮಾತನಾಡಿ, ತಮ್ಮ ಕಾಲೇಜಿನ ದಿನಗಳಲ್ಲಿ ಜಯಪ್ರಕಾಶ್ ನಾರಾಯಣ್ ಚಳುವಳಿಯ ದಿನಗಳನ್ನು ನೆನೆಪಿಸಿಕೊಂಡರು. ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದ್ದ ಸಂಧರ್ಭದಲ್ಲಿ ದೇಶದಲ್ಲಿ ಚಳುವಳಿಯನ್ನು ಪ್ರಾರಂಭಿಸಿ ದೇಶಕ್ಕೆ ಮತ್ತೊಮ್ಮೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ಚೇತನ ಎಂದರು. ಇಂತಹ ಮಹಾನ್ ಸಾಧಕರ ಜೀವನ ಚರಿತ್ರೆ ಹಾಗೂ ಚಿಂತನೆಗಳು ಮುಂದಿನ ಪೀಳಿಗೆಗೂ ದೊರಕುವ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಪ್ರೊ ದೊಡ್ಡರಂಗೇಗೌಡರು ಜೆಪಿ ಅವರ ವಿಚಾರಗಳ ಬಗ್ಗೆ ಪುಸ್ತಕವನ್ನು ಬರೆದಲ್ಲಿ ಅದರ ಪ್ರಕಟಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಜೆಪಿ ಅವರ ಕನಸುಗಳನ್ನು ನನಸು ಮಾಡುವತ್ತ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ

ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ

ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ದೊರೆಸ್ವಾಮಿ ನಾಯ್ಡು, ಬಿಜೆಪಿ ನಗರ ಘಟಕದ ಅಧ್ಯಕ್ಷ ಸದಾಶಿವ, ಖಚಾಂಚಿ ಸುಬ್ಬಣ್ಣ ಸೇರಿದಂತೆ ಹಲವು ಬಿಬಿಎಂಪಿ ಸದಸ್ಯರಾದ ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ಡಾ ರಾಜು, ಅನಂದ ಹೊಸೂರ್, ಮಾಜಿ ಸದಸ್ಯರಾದ ಹೆಚ್ ರವೀಂದ್ರ, ವೇದವ್ಯಾಸ ಭಟ್ಟ, ಎ ಹೆಚ್ ಬಸವರಾಜ್ ಹಾಗೂ ಬಿಜೆಪಿ ಮುಖಂಡರುಗಳಾದ ಪೂರ್ಣಿಮಾ ಪ್ರಕಾಶ್ ಲಕ್ಷ್ಮಿಕಾಂತ್, ನರೇಶ್, ಕುಮಾರ್, ಸದಾಶಿವಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ತುರ್ತುಪರಿಸ್ಥಿತಿ ಸಂಧರ್ಭದ "ಸರ್ವಾಧಿಕಾರ vs ಪ್ರಜಾಪ್ರಭುತ್ವ" ಛಾಯಾಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

English summary
Jayaprakash Narayan birth anniversary celebrated in MP Ananth Kumar's office in Bengaluru by Karnataka BJP leaders. R Ashok spoke about JP's life and emergency time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X