ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಜುಕೊಳದಲ್ಲಿ ಟೆಕ್ಕಿಸಾವು, 2 ಕೋಟಿ ಪರಿಹಾರ

|
Google Oneindia Kannada News

ಬೆಂಗಳೂರು, ಡಿ.12 : ಬೆಂಗಳೂರಿನ ಜಯನಗರದ ಈಜುಕೊಳದಲ್ಲಿ ಮುಳುಗಿ ಸಾಫ್ಟ್‌ವೇರ್ ಇಂಜಿನಿಯರ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ನೀಡಿದೆ.

ಆರು ವರ್ಷಗಳ ಹಿಂದೆ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಸಾಫ್ಟ್‌ವೇರ್ ಇಂಜಿನಿಯರ್ ಸ್ಮೃತಿ ರಂಜನ್ ಶರ್ಮ (27) ಅವರ ತಂದೆ ಡಾ.ನಿರಂಜನ್‌ನಾಥ ಶರ್ಮ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. [ಜಯನಗರ ಶಾಸಕ ವಿಜಯ ಕುಮಾರ್ ಸಂದರ್ಶನ]

swimming pool

2 ಕೋಟಿ ಮೊತ್ತದಲ್ಲಿ ಬಿಬಿಎಂಪಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಪಾಲಿಕೆ 50 ಲಕ್ಷ ಪರಿಹಾ ನೀಡಬೇಕು. ಈಜುಕೊಳ ಗುತ್ತಿಗೆ ಪಡೆದಿದ್ದ ಪಾಲುದಾರ ಎಂ.ಬಾಬಣ್ಣ 1.34 ಕೋಟಿ ರೂ. ಹಾಗೂ ಓರಿಯಂಟಲ್ ವಿಮಾ ಕಂಪೆನಿಯು ಇನ್ನುಳಿದ 16 ಲಕ್ಷ ರೂ. ಪರಿಹಾರವನ್ನು 90 ದಿನಗಳಲ್ಲಿ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. [ಜಯನಗರಕ್ಕೊಂದು ಸುಂದರ ರಸ್ತೆ]

ಏನಿದು ಪ್ರಕರಣ : ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಸ್ಮೃತಿರಂಜನ್ ಶರ್ಮ 2008ರ ಏ.1ರಂದು ಜಯನಗರ ಈಜುಕೊಳದಲ್ಲಿ 20 ದಿನಗಳ ಈಜು ತರಬೇತಿಗೆ ಹೆಸರು ನೋಂದಾಯಿಸಿ 2,200 ರೂ. ಶುಲ್ಕ ಪಾವತಿಸಿದ್ದರು. ಪ್ರತಿದಿನ ಬೆಳಗ್ಗೆ 8.45ರಿಂದ 9.45ರವರೆಗೆ ಅಭ್ಯಾಸದಲ್ಲಿ ತೊಡಗುತ್ತಿದ್ದರು.

ಏ.16ರಂದು ಶರ್ಮ ಅವರು ಈಜು ಕಲಿಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಈಜುಕೊಳದಲ್ಲಿ ಜನದಟ್ಟಣೆಯಿದ್ದ ಕಾರಣ ಶರ್ಮ ನೀರಿನಲ್ಲಿ ಮುಳುಗಿದ್ದು ಇತರರ ಗಮನಕ್ಕೆ ಬಂದಿರಲಿಲ್ಲ.

ಈಜುಕೊಳದಲ್ಲಿ ಜೀವರಕ್ಷಕ ಸಾಧನ ಮತ್ತು ತರಬೇತುದಾರರು ಇರಲಿಲ್ಲ. ಶರ್ಮ ನೀರಿನಲ್ಲಿ ಮುಳುಗಿದ್ದನ್ನು ತಡವಾಗಿ ಗಮಿಸಿದ್ದ ವೆಂಕಟೇಶ್ ಎಂಬುವರು ಅವರನ್ನು ನೀರಿನಿಂದ ಹೊರ ತಂದಿದ್ದರು. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಅಲ್ಲಿ ಅವರು ಮೃತಪಟ್ಟಿದ್ದರು.

ಶರ್ಮ ಸಾವಿಗೆ ಬಿಬಿಎಂಪಿ, ನಿರ್ವಹಣೆ ಹೊತ್ತ ಗುತ್ತಿಗೆ ಸಂಸ್ಥೆಯೇ ನೇರ ಕಾರಣ. ತರಬೇತಿದಾರರು, ಜೀವರಕ್ಷಕ ಸಾಧನಗಳಂತಹ ಕನಿಷ್ಠ ಸೌಲಭ್ಯಗಳು ಇರಲಿಲ್ಲ ಆದ್ದರಿಂದ ನಮಗೆ ಪರಿಹಾರ ನೀಡಬೇಕೆಂದು ಶರ್ಮಾ ತಂದೆ ಕೋರ್ಟ್ ಮೆಟ್ಟಿಲೇರಿದ್ದರು.

English summary
National Consumer Disputes Commission ordered to pay 2 core compensation for 27-year-old techie Smriti Ranjan Sharma family who died alleged negligence of swimming pool authorities in Jayanagara, Bengaluru on 2008.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X