ಜಯನಗರ: ಬಿಜೆಪಿಗೆ ಸಕತ್ 'ಕೈ'ಕೊಟ್ಟಿದ್ದು ಏಳು ವಾರ್ಡುಗಳ ಪೈಕಿ ಇದು!

Recommended Video

      Jayanagar Election Results 2018 : ಬಿಜೆಪಿ ಸೋಲಿಗೆ ಕಾರಣವಾಗಿದ್ದು ಈ ಜಯನಗರ ವಾರ್ಡ್

      ಬೆಂಗಳೂರು, ಜೂ 13: ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ನಗರದ ಬಿಜೆಪಿಯ ಭದ್ರಕೋಟೆಯಾಗಿದ್ದ ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಬಾವುಟವನ್ನು ಹಾರಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ಸಿನ ಸೌಮ್ಯಾ ರೆಡ್ಡಿ ಗೆಲುವು ಸಾಧಿಸಿದ್ದಾರೆ.

      ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಏಳು ವಾರ್ಡುಗಳ ಪೈಕಿ, ನಿರೀಕ್ಷೆಯಂತೆ ಬಿಜೆಪಿಗೆ ಕೈಕೊಟ್ಟಿದ್ದು ಮುಸ್ಲಿಂ ಪ್ರಾಭಲ್ಯದ ಗುರಪ್ಪನಪಾಳ್ಯ ವಾರ್ಡ್. ಆದರೆ, ಬಹುಷಃ ಕಾಂಗ್ರೆಸ್ ಕೂಡಾ ಈ ವಾರ್ಡಿನಲ್ಲಿ ಈ ಮಟ್ಟದ ಲೀಡ್ ಬರುತ್ತದೆ ಎಂದು ಅಂದುಕೊಂಡಿರಲಿಕ್ಕಿಲ್ಲ.

      ಏಳು ವಾರ್ಡುಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದರೆ, ನಾಲ್ಕರಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿಗೆ ಇನ್ನೊಂದು ಹಿನ್ನಡೆಯನ್ನು ತಂದುಕೊಟ್ಟ ವಾರ್ಡ್ ಎಂದರೆ ಅದು, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ಎಂ ನಾಗರಾಜ್ ಪ್ರತಿನಿಧಿಸುವ ಭೈರಸಂದ್ರ ವಾರ್ಡ್.

      Jayanagar assembly election ward wise vote sharing details and leading

      ಜೆ ಪಿ ನಗರ, ಶಾಖಾಂಬರಿ ನಗರ, ಸಾರಕ್ಕಿ, ಪಟ್ಟಾಭಿರಾಮ ನಗರದಲ್ಲಿ ಬಿಜೆಪಿಗೆ, ಕಾಂಗ್ರೆಸ್ ಗಿಂತ ಹೆಚ್ಚಿನ ಮತಗಳು ಬಂದಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಭೈರಸಂದ್ರ, ಜಯನಗರ ಪೂರ್ವ, ಗುರಪ್ಪನಪಾಳ್ಯದಲ್ಲಿ ಲೀಡ್ ಸಿಕ್ಕಿತ್ತು. ಪ್ರತೀ ವಾರ್ಡ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಸಿಕ್ಕ ಮತ, ಅಂತರಗಳ ವಿವರ ಇಂತಿದೆ:

      ಜೆ ಪಿ ನಗರ ಬಿಜೆಪಿ - 8,492 ಕಾಂಗ್ರೆಸ್ - 4,984 ಲೀಡ್ - 3,508 (ಬಿಜೆಪಿಗೆ ಲೀಡ್)
      ಸಾರಕ್ಕಿ ಬಿಜೆಪಿ - 9,097 ಕಾಂಗ್ರೆಸ್ - 4,490 ಲೀಡ್ - 5,607 (ಬಿಜೆಪಿಗೆ ಲೀಡ್)
      ಶಾಖಾಂಬರಿ ನಗರ ಬಿಜೆಪಿ - 9,637 ಕಾಂಗ್ರೆಸ್ - 3,555 ಲೀಡ್ - 6,087 (ಬಿಜೆಪಿಗೆ ಲೀಡ್)
      ಪಟ್ಟಾಭಿರಾಮ ನಗರ ಬಿಜೆಪಿ - 9,358 ಕಾಂಗ್ರೆಸ್ - 4,282 ಲೀಡ್ - 5,256 (ಬಿಜೆಪಿಗೆ ಲೀಡ್)
      ಭೈರಸಂದ್ರ ಬಿಜೆಪಿ - 6,595 ಕಾಂಗ್ರೆಸ್ - 9,809 ಲೀಡ್ - 3,214 (ಕಾಂಗ್ರೆಸ್ಸಿಗೆ ಲೀಡ್)
      ಜಯನಗರ ಪೂರ್ವ ಬಿಜೆಪಿ - 5,523 ಕಾಂಗ್ರೆಸ್ - 7,777 ಲೀಡ್ - 2,254 (ಕಾಂಗ್ರೆಸ್ಸಿಗೆ ಲೀಡ್)
      ಗುರಪ್ಪನಪಾಳ್ಯ ಬಿಜೆಪಿ - 2,710 ಕಾಂಗ್ರೆಸ್ - 19,650 ಲೀಡ್ - 16,850 (ಕಾಂಗ್ರೆಸ್ಸಿಗೆ ಲೀಡ್)

      ಕಾಂಗ್ರೆಸ್: 54,457
      ಬಿಜೆಪಿ: 51,592
      ಕಾಂಗ್ರೆಸ್ ಗೆಲುವಿನ ಅಂತರ: 2,865

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+