Get Updates
Get notified of breaking news, exclusive insights, and must-see stories!

ಜಯಾ ವಿರುದ್ಧ ಮೇಲ್ಮನವಿ ಸಲ್ಲಿಸಲು ಚುನಾವಣಾ ಲೆಕ್ಕಾಚಾರ

ಬೆಂಗಳೂರು, ಮೇ 27 : ಜಯಲಲಿತಾ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರಕ್ಕೆ ಆಗಸ್ಟ್ 11ರವರೆಗೆ ಅವಕಾಶವಿದೆ. ಬಿಬಿಎಂಪಿ ಚುನಾವಣೆ ಎದುರಾಗಿರುವ ಹಿನ್ನಲೆಯಲ್ಲಿ ತಮಿಳರ ಮತಗಳ ಮೇಲೆ ಕಣ್ಣಿಟ್ಟಿರುವ ಸರ್ಕಾರ, ಚುನಾವಣೆ ನಂತರ ಮೇಲ್ಮನವಿ ಸಲ್ಲಿಸಲಿದೆ.

ಮೂರು ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ ಎಂದು ಸುಪ್ರೀಂಕೋರ್ಟ್ ಮೇ 5ರಂದು ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಚುನಾವಣೆ ಮುಗಿಯಲಿ ಎಂದು ಕಾಯಲು ತೀರ್ಮಾನಿಸಿದೆ. [ಮೇಲ್ಮನವಿಗೆ ಕಾನೂನು ತೊಡಕಿದೆಯೇ?]

bbmp election

30 ಲಕ್ಷ ಮತಗಳು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸುಮಾರು 30 ಲಕ್ಷ ತಮಿಳರು ಮತದಾನ ಮಾಡಲಿದ್ದಾರೆ. ಇಷ್ಟು ಮತಗಳು ಯಾವುದೇ ಪಕ್ಷಕ್ಕಾದರೂ ದೊಡ್ಡ ಲಾಭ ತಂದುಕೊಡಲಿವೆ. ಆದ್ದರಿಂದ, ಚುನಾವಣೆ ಮುಗಿಯಲಿ ಎಂದು ಸರ್ಕಾರ ಕಾದು ನೋಡುವ ತಂತ್ರ ಅನುಸರಿಸಲಿದೆ. [ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ]

ಮೂವತ್ತು ಲಕ್ಷ ಮತದಾರರ ಪೈಕಿ ಬಹುಸಂಖ್ಯಾತರು ಜಯಲಲಿತಾ ಬೆಂಬಲಿಗರು ಮತ್ತು ಎಐಎಡಿಎಂಕೆ ಪಕ್ಷವನ್ನು ಬೆಂಬಲಿಸುವವರು. ಒಂದು ವೇಳೆ ಸರ್ಕಾರ ಮೇಲ್ಮನವಿ ಸಲ್ಲಿಸಿದರೆ ಕಾಂಗ್ರೆಸ್ ಎಐಎಡಿಎಂಕೆ ವಿರೋಧಿ ಎಂದು ಜನರು ಪಕ್ಷದ ವಿರುದ್ಧ ತಿರುಗಿ ಬೀಳಬಹುದು ಎಂಬ ಅಡಗಿದೆ. [ಬಿಬಿಎಂಪಿ ವಿಭಜನೆ ಹೇಗೆ, ಇಲ್ಲಿದೆ ಮಾಹಿತಿ]

ಚುನಾವಣೆ ಲೆಕ್ಕಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಸದ್ಯಕ್ಕೆ ಮೇಲ್ಮನವಿ ಸಲ್ಲಿಸುವಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಕಾನೂನು ಇಲಾಖೆಯೂ ಸರ್ಕಾರಕ್ಕೆ ಅಗತ್ಯ ವರದಿಗಳನ್ನು ನೀಡಲಿದ್ದು, ನಂತರ ಮೇಲ್ಮನವಿ ಸಲ್ಲಿಸಬಹುದು. ಅಂದಹಾಗೆ ಜುಲೈನಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+