ಸೀಕ್ರೇಟ್ ಆಪರೇಷನ್: "ಅನ್ ಎಡಿಟ್ ವಿಡಿಯೋ'' ದಿಂದ ಹೊರ ಬಿದ್ದ ಸತ್ಯದಿಂದ ಯಾರಿಗೆ ಅನುಕೂಲ ?

ಬೆಂಗಳೂರು, ಮಾರ್ಚ್‌ 26: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇತ್ತ ಶಂಕಿತರೆನ್ನಲಾದ ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವ ಎಸ್ಐಟಿ ತನಿಖಾ ತಂಡ "ಅನ್ ಎಡಿಟೆಡ್ ರಹಸ್ಯ ವಿಡಿಯೋ" ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. "ಇದೊಂದು ಹನಿ ಟ್ರ್ಯಾಪ್ " ಎಂಬುದನ್ನು ಸಾಬೀತು ಪಡಿಸುವ ಮಹತ್ವದ ಸಾಕ್ಷಿಯೊಂದು ಅನ್ ಎಡಿಟೆಡ್ ವಿಡಿಯೋದಲ್ಲಿ ಸಿಕ್ಕಿದೆ ಎಂಬ ಸ್ಫೋಟಕ ಸಂಗತಿ ಹೊರ ಬಿದ್ದಿದೆ.

ಮಾ. 2 ರಂದು ಬಿಡುಗಡೆಯಾಗಿದ್ದ ಅಶ್ಲೀಲ ವಿಡಿಯೋದಲ್ಲಿ ಎರಡು ರೀತಿಯ ವಿಡಿಯೋ ಪ್ರಸಾರವಾಗಿತ್ತು. ಒಂದು ಮೊಬೈಲ್‌ನಲ್ಲಿ ಸೆಲ್ಫಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಗಳು. ಇನ್ನೊಂದು ಹಾಸಿಗೆ ಪೂರ್ಣ ರೆಕಾರ್ಡ್ ಆಗಿದ್ದ ರಹಸ್ಯ ಕ್ಯಾಮರಾದ ದೃಶ್ಯಗಳು. ಈ ವಿಡಿಯೋ ಜಾಡು ಹಿಡಿದು ತನಿಖೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಶಂಕಿತ ಎನ್ನಲಾದ ವ್ಯಕ್ತಿಯ ಮನೆ ಮೇಲೆ ಶೋಧ ನಡೆಸಿದ್ದರು. ವಿಡಿಯೋ ಎಡಿಟ್ ಆಗಿದೆ ಎಂದೇ ಭಾವಿಸಿದ್ದ ಟೈಮ್ಸ್ ಕ್ರಿಯೇಷನ್ಸ್ ಕಂಪನಿಯ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲಿನ ಹಾರ್ಡ್ ಡಿಸ್ಕ್ ಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ, ಅನ್ ಎಡಿಟೆಡ್ ವಿಡಿಯೋ ಪತ್ತೆಯಾಗಿದೆ. ಅದರಲ್ಲಿ "ಹನಿ ಟ್ರ್ಯಾಪ್ ಕುರಿತ ಸಂಭಾಷಣೆ" ಅದೇ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ ಎನ್ನಲಾಗಿದೆ.

ವ್ಯಾನಿಟಿ ಬಾಗ್‌ಗೆ ರಹಸ್ಯ ಕ್ಯಾಮರಾ ಫಿಕ್ಸ್ ಮಾಡಿದ್ದು, ಅದನ್ನು ಸರಿಯಾಗಿ ನಿರ್ವಹಣೆ ಮಾಡುವ ಕಲೆ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿಗೆ ಗೊತ್ತಿರಲಿಲ್ಲ. ಹೀಗಾಗಿ ಅಶ್ಲೀಲ ದೃಶ್ಯ ರೆಕಾರ್ಡ್ ಮಾಡಿಕೊಂಡಿದ್ದ ಸಂತ್ರಸ್ತೆ ಎನ್ನಲಾದ ಯುವತಿ ಯುವಕನೊಬ್ಬನಿಗೆ ಕರೆ ಮಾಡಿ, ಕೆಲಸ ಆಗಿದೆ ಎಂದು ಹೇಳಿದ್ದಳು. ಅದಾದ ನಂತರ ಲಿಫ್ಟ್ ಸಮೀಪ ಬಂದು ಶ್ರವಣ್ ಹೆಸರಿನ ವ್ಯಕ್ತಿಗೆ ಕರೆ ಮಾಡಿ ಮಾತನಾಡಿದ್ದಾಳೆ. ಇದೆಲ್ಲವೂ ವ್ಯಾನಿಟಿ ಬ್ಯಾಗಿನಲ್ಲಿ ಅಡಗಿಸಿಟ್ಟಿದ್ದ ರಹಸ್ಯ ಕ್ಯಾಮಾರದಲ್ಲಿ ಸೆರೆಯಾಗಿದೆ.

Jarkiholi cd row Secret Operation “Who Can Benefit From The Truth That Has Been Out Of An Edit Video?

ಈ ವಿಡಿಯೋ ಭಾಗವನ್ನೇ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾ. 2 ರಂದು ಬಿಡುಗಡೆಯಾಗಿದೆ. ಇದರ ಮೂಲ ಜಾಡು ಹಿಡಿದು ತನಿಖೆ ನಡೆಸಿದ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಅನ್ ಎಡಿಟೆಡ್ ರಹಸ್ಯ ಕಾರ್ಯಾಚರಣೆ ವಿಡಿಯೋ ಸಿಕ್ಕಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ನಾಲ್ಕು ತಂಡದಿಂದ ಶೋಧ : ಇನ್ನು ಸಿಡಿ ಲೇಡಿಯ ಹೇಳಿಕೆ ಪಡೆಯಲು ಹರ ಸಾಹಸ ಪಡೆಯುತ್ತಿರುವ ಎಸ್ಐಟಿ ಅಧಿಕಾರಿಗಳ ನಾಲ್ಕು ತಂಡಗಳು ಸತತ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಸಂತ್ರಸ್ತೆ ಎನ್ನಲಾದ ಯುವತಿ ಹಾಗೂ ಆಕೆಯ ಜತೆ ಇದ್ದಾರೆ ಎನ್ನಲಾದ ಉದ್ಯಮಿ ಹಾಗೂ ಇತರೆ ಮೂವರು ಶಂಕಿತರಿಗಾಗಿ ಶೋಧ ನಡೆಸುತ್ತಿದ್ದಾರೆ. ಸಂತ್ರಸ್ತೆ ಎನ್ನಲಾದ ಯುವತಿ ಪರ ವಕಾಲತು ವಹಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಕೆ.ಎನ್. ಜಗದೀಶ್ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

Jarkiholi cd row Secret Operation “Who Can Benefit From The Truth That Has Been Out Of An Edit Video?

ದೂರು ಹೇಗೆ ಸಿಕ್ಕಿತು ? ಯುವತಿ ಎಲ್ಲಿದ್ದಾಳೆ ವಿವರ ನೀಡುವಂತೆ ಎಸ್ಐಟಿ ಅಧಿಕಾರಿಗಳು ವಕೀಲನನ್ನು ಪ್ರಶ್ನಿಸಿದ್ದಾರೆ. ಇದೀಗ ದೂರು ನೀಡಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಉದ್ದೇಶಕ್ಕಾಗಿಯಾದರೂ ಪತ್ತೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+