• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನಾರ್ದನ ರೆಡ್ಡಿಗೆ ಇಂದು ಅದೃಷ್ಟ ಖುಲಾಯಿಸುತ್ತಾ? ಕೋರ್ಟ್ ಜಾಮೀನು ಕೊಡುತ್ತಾ?

|
   ಜನಾರ್ದನ ರೆಡ್ಡಿಗೆ ಇಂದು ಅದೃಷ್ಟ ಖುಲಾಯಿಸುತ್ತಾ? ಕೋರ್ಟ್ ಜಾಮೀನು ಕೊಡುತ್ತಾ? | Oneindia Kannada

   ಬೆಂಗಳೂರು, ನವೆಂಬರ್ 14: ಆಂಬಿಡೆಂಟ್ ಕಂಪನಿ 950 ಕೋಟಿ ಚಿಟ್ ಫಂಡ್ ಹಗರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಜಾಮೀನು ತೀರ್ಪು ಇಂದು(ನವೆಂಬರ್ 14) ಪ್ರಕಟವಾಗಲಿದೆ.

   ರೆಡ್ಡಿ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ 1ನೇ ಎಸಿಎಂಎಂ ಕೋರ್ಟ್ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ರೆಡ್ಡಿ ಪರ ವಕೀಲ ಸಿ.ಎಚ್ ಹನುಮಂತರಾಯ ವಾದ ಮಂಡಿಸಿ 57 ಕೆಜಿ ಚಿನ್ನಕ್ಕೂ ರೆಡ್ಡಿಗೂ ಸಂಬಂಧವಿಲ್ಲ ನಾಲ್ಕನೇ ಆರೋಪಿ ರಮೇಶ್‌ನಿಂದ ಐದನೇ ಆರೋಪಿ ಅಲಿಖಾನ್ ಚಿನ್ನ ಪಡೆದಿದ್ದಾರೆ ಎಂದು ವಾದ ಮಂಡಿಸಿದ್ದರು. ಸಿಸಿಬಿ ಪೊಲೀಸರು ನವೆಂಬರ್ 11ರಂದು ಬಂಧಿಸಿ ನವೆಂಬರ್ 24ರವರೆಗೆ ನ್ಯಾಯಾಂಗ ಬಂಧನದಲ್ಲಿರುವಂತೆ ಆದೇಶಿಸಲಾಗಿತ್ತು.

   ಜನಾರ್ದನ ರೆಡ್ಡಿಗೆ ಮತ್ತೆ ಜೈಲುವಾಸ ಶುರು, ಖೈದಿ ನಂ 10902

   ಅಲಿಖಾನ್ ಚಿನ್ನ ಕೊಡಬೇಕೆ ಹೊರತು ಜನಾರ್ದನ ರೆಡ್ಡಿಯಲ್ಲ, ಎಫ್‌ಐಆರ್ ನಲ್ಲಿ ರೆಡ್ಡಿ ಹೆರಿಲಲ್, ಆದರೂ ಬಂಧಿಸಲಾಗಿದೆ. ನೋಟಿಸ್ ಕೊಟ್ಟ ಕೂಡಲೇ ಸಿಸಿಬಿ ಕಚೇರಿಗೆ ವಿಚಾರಣೆಗೆ ರೆಡ್ಡಿ ಹಾಜರಾಗಿದ್ದು, 12 ಗಂಟೆಗಳ ಕಾಲ ವಿಚಾರಣೆ ನಡೆಸಿ ಒಪ್ಪಿಸಿದ್ದಾರೆ. ಸಿಬಿಐ ಪ್ರಕರಣಗಳಲ್ಲಿ ರೆಡ್ಡಿ ಹಾಜರು ಆಗಬೇಕಾಗಿರುವುದರಿಂದ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ.

    ಸಿಸಿಬಿಗೆ ಕೋರ್ಟ್ ತರಾಟೆ

   ಸಿಸಿಬಿಗೆ ಕೋರ್ಟ್ ತರಾಟೆ

   ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜನಾರ್ದನ ರೆಡ್ಡಿ ಮತ್ತು ಕಂಪನಿಗೆ ನೇರ ನಂಟು ಇದೆಯಾ? ರೆಡ್ಡಿಗೆ ನೇರವಾಗಿ ಲಿಂಕ್ ಇದೆಯಾ, ದೂರು ಇರುವುದೇ ಒಂದು, ನೀವು ಮಾಡುತ್ತಿರುವ ತನಿಖೆಯೇ ಮತ್ತೊಂದು, ಗ್ರಾಹಕರು ಅಥವಾ ದೂರುದಾರರು ರೆಡ್ಡಿ ವಿರುದ್ಧ ಕೇಸ್ ಕೊಟ್ಟಿಲ್ಲ, ಹಾಗಿದ್ದರೂ ಸಂಬಂಧ ಇದೆ ಎಂದು ಹೇಗೆ ಹೇಳುತ್ತೀರಾ ಎಂದು ತರಾಟೆ ತೆಗೆದುಕೊಂಡರು.

   ಸಿಸಿಬಿಯನ್ನು ಸುಸ್ತಾಗಿಸುತ್ತಿರುವ ಆಂಬಿಡೆಂಟ್ ವಂಚನೆ ಪ್ರಕರಣ

    ಅಲಿಖಾನ್ ಪ್ರಮಾಣಪತ್ರ

   ಅಲಿಖಾನ್ ಪ್ರಮಾಣಪತ್ರ

   ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿರುವ ಅಲಿಖಾನ್ ವಿರುದ್ಧ ಸಿಸಿಬಿ ಪೊಲೀಸರು ಜಾಮೀನು ರದ್ದು ಮಾಡುವಂತೆ ಕೋರಿದ್ದಾರೆ, ಜತೆಗೆ ನಿರೀಕ್ಷಣಾ ಜಾಮೀನಿಗೂ ಸಲ್ಲಿಸಿದ್ದಾರೆ. ಇದೇ ವೇಳೆ ಅಲಿಖಾನ್, ತನ್ನ ವಿರುದ್ಧ ಕೇಳಿ ಬಂದಿರುವ ಆರೋಪ ಸಾಬೀತಾದರೆ 18 ಕೋಟಿ ರೂ ಕೊಡುವುದಾಗಿ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.

   ಜನಾರ್ದನ ರೆಡ್ಡಿಗೆ ಪ್ರತಿ ದೀಪಾವಳಿ ಅಮಾವಾಸ್ಯೆ ಕಂಟಕ ಪ್ರಾಯವೇ? ಹೀಗೊಂದು ಜಿಜ್ಞಾಸೆ

    ಸೋಮವಾರ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ

   ಸೋಮವಾರ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ

   ಸಿಸಿಬಿ ಪೊಲೀಸರು ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ನವೆಂಬರ್ 11ರಿಂದ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು, ರೆಡ್ಡಿ ಪರ ವಕೀಲರು ಸೋಮವಾರವೇ ಜಾಮೀನಿಗೆ ಅರ್ಜಿ ಸಲಲ್ಇಸಲು ಮುಂದಾಗಿದ್ದರೂ ಕೂಡ ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನದಿಂದಾಗಿ ಕೋರ್ಟ್ ಗಳು ಕಾರ್ಯ ನಿರ್ವಹಿಸಿರಲಿಲ್ಲ. ನವೆಂಬರ್ 13ರಂದು ಬೆಳಗ್ಗೆ ಜಾಮೀನು ಅರ್ಜಿಯನ್ನು ಸಲ್ಲಿಸಿದರೂ ಕೂಡ ಒಂದನೇ ಎಸಿಸಿಎಂಎಂ ಕೋರ್ಟ್ ಜಾಮೀನು ಆದೇಶವನ್ನು ನವೆಂಬರ್ 14ಕ್ಕೆ ಮುಂದೂಡಿತು.

   ಎಂಇಪಿಯ ನೌಹೀರಾ ಶೇಖ್‌ರಿಂದ ಕೋಟ್ಯಂತರ ಹಣ ಪಡೆದಿದ್ದ ರೆಡ್ಡಿ

    ಜನಾರ್ದನ ರೆಡ್ಡಿ ಬಂಧನವಾಗಿದ್ದು ಯಾವಾಗ?ಯಾಕೆ?

   ಜನಾರ್ದನ ರೆಡ್ಡಿ ಬಂಧನವಾಗಿದ್ದು ಯಾವಾಗ?ಯಾಕೆ?

   ಆಂಬಿಡೆಂಟ್ ಕಂಪನಿ ಚಿಟ್ ಫಂಡ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿಯ ಹುಡುಕಾಟ ಆರಂಭಿಸಿದಂತೆ ಅವರು ನಾಲ್ಕು ದಿನಗಳ ಕಾಲ ಯಾರಿಗೂ ಕಾಣದಂತೆ ಮರೆಯಲ್ಲಿದ್ದರು. ಬಳಿಕ ಒಂದು ವಿಡಿಯೋವನ್ನು ಚಿತ್ರೀಕರಿಸಿ ಮಾಧ್ಯಮಗಳಿಗೆ ಕಳುಹಿಸಿದರು ಅದರಲ್ಲಿ ನಾನು ಎಲ್ಲಿಯೂ ಓಡಿಹೋಗಿಲ್ಲ ಬೆಂಗಳೂರಿನಲ್ಲೇ ಇದ್ದೇನೆ ಎನ್ನುವ ಮಾತುಗಳ ಜತೆಗೆ ಸಿಸಿಬಿ ಕಚೇರಿಗೆ ವಿಚಾರಣೆಗೆಂದು ತೆರಳಲಿದ್ದೇನೆ ಎನ್ನುವ ಮಾತುಗಳಿದ್ದವು. ಬಳಿಕ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಪೊಲೀಸರು ವಿಚಾರಣೆ ನಡೆಸಿ ಅಂದು ರಾತ್ರಿ ಸಿಸಿಬಿ ಕಚೇರಿಯಲ್ಲೇ ಇಟ್ಟುಕೊಂಡು ಮರುದಿನ ನ್ಯಾಯಾಂಗ ಬಂಧನಕ್ಕೆ ಒಳಡಪಸಿದ್ದರು.

   ಜನಾರ್ದನ ರೆಡ್ಡಿಗೆ ಆಂಬಿಡೆಂಟ್ 20 ಕೋಟಿ ಕೊಟ್ಟಿದ್ದೇಕೆ? ಡೀಟೇಲ್ಸ್ ಇಲ್ಲಿದೆ

   English summary
   Bengaluru first session court will decide on bail application filed by former minister Janardhan Reddy in Ambident company fraud case on Wednesday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X