Tejasvi Surya: ತೇಜಸ್ವಿ ಸೂರ್ಯಗೆ "ಕಂಗ್ರಾಜುಲೇಷನ್ಸ್ ಬ್ರದರ್" ಎಂದ ಜಮೀರ್: ಜನ ಏನಂದ್ರು ?
Tejasvi Surya: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರ ವಿವಾಹವು ಅದ್ಧೂರಿಯಾಗಿ ನೆರವೇರಿದೆ. ನಿರೀಕ್ಷೆಗಿಂತ ಹೆಚ್ಚಾಗಿ ಜನ ಸಹಕಾರ ನೀಡಿದ್ದಾರೆ. ಸಾರ್ವಜನಿಕರು ಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ವಯಸ್ಸಾದವರು ಹಾಗೂ ವಿಶೇಷ ಚೇತನರು ತಾಸುಗಟ್ಟಲೆ ನಿಂತು ನನಗೆ ಆಶೀರ್ವಾದ ಮಾಡಿದ್ದೀರಿ ಅಂತ ತೇಜಸ್ವಿ ಸೂರ್ಯ ಅವರು ವಿಡಿಯೋ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.
ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ಈ ಸಮಾರಂಭದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಂಗ್ರಾಜುಲೇಷನ್ಸ್ ಬ್ರದರ್ ಎಂದಿದ್ದೇ ಚರ್ಚೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ರಾಜಕೀಯ. ಇವರಿಬ್ಬರೂ ರಾಜಕೀಯದಲ್ಲಿ ಬದ್ಧ ವೈರಿಗಳಾಗಿದ್ದರೂ ಪರಸ್ಪರ ಶುಭಕೋರಿದ್ದಾರೆ. ಆದರೆ, ಕಾರ್ಯಕರ್ತರು ಈಗಲೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಇವರನ್ನು ನೋಡಿ ಕಲಿಯಬೇಕು ಎನ್ನುವ ಚರ್ಚೆ ಶುರುವಾಗಿದೆ.

ಸಂಸದ ತೇಜಸ್ವಿ ಸೂರ್ಯ ಹಾಗೂ ಸಚಿವ ಜಮೀರ್ ಅವರು ರಾಜಕೀಯದಲ್ಲಿ ಬದ್ಧ ವೈರಿಗಳಂತೆ ವಾಕ್ಸಮರ ನಡೆಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನಡೆದ ಹಾಸಿಗೆ ಸಮಸ್ಯೆ ವಿಚಾರದಲ್ಲಿ ಇಬ್ಬರ ವಾಕ್ಸಮರ ದೊಡ್ಡ ಮಟ್ಟಕ್ಕೆ ಹೋಗಿತ್ತು. ನಿಂಗೆ ಒಳ್ಳೆದಾಯ್ತದ ಸೂರ್ಯ ಅಂತ ಜಮೀರ್ ಅವರು ಗರಂ ಆಗಿದ್ದರು. ತೇಜಸ್ವಿ ಸೂರ್ಯ ಅವರು ಸಹ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿ ಹೆಚ್ಚು ಮುಸ್ಲಿಂ ಸಿಬ್ಬಂದಿಯನ್ನೇ ನೇಮಿಸಿಕೊಳ್ಳಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳ ಮೇಲೆ ರೇಗಾಡಿದ್ದರು. ಈ ವಿಷಯಗಳನ್ನೇಲ್ಲ ಜನ ಈಗ ನೆನಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಸಂಸದ ತೇಜಸ್ವಿ ಸೂರ್ಯ ಅವರ ಮದುವೆ.
ತೇಜಸ್ವಿ ಸೂರ್ಯ ಅವರ ಮದುವೆ ಅಚ್ಚುಕಟ್ಟಾಗಿ ನಡೆದಿದೆ. ಇದೇ ಸಂದರ್ಭದಲ್ಲಿ ಅವರೊಂದು ಪರೋಕ್ಷ ರಾಜಕೀಯ ಸಂದೇಶವನ್ನೂ ಕೊಟ್ಟಿದ್ದಾರೆ. ನಾವೆಲ್ಲ ಲೈಫ್‌ನಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ. ಬರಹಗಾರ ಹರೀಶ್ ಗಂಗಾಧರ್ ಅವರು, ಊರ್ ಕಡೆ ಹೋದರೆ ಇವತ್ತು ಎಲ್ಲಾ ಬದಲಾಗಿದೆ. ಮನೆಗಳು ಹೊಡೆದು ಹೋಗಿವೆ. ಒಡಹುಟ್ಟಿದವರು ಒಬ್ಬರ ಮುಖ ಒಬ್ಬರು ನೋಡದ ಹಾಗಾಗಿದ್ದಾರೆ.

ಪುಟ್ಟ ಮನಸ್ತಾಪ ಸಾಕು ಬಿರುಕು ಮೂಡಲು. ಇನ್ನು ಆಸ್ತಿ ಪಾಲಿನ ವಿಷಯ ಬಂದರಂತೂ ಕೂತು ಸಂಯಮದಿಂದ ಮಾತನಾಡಿಕೊಂಡು ಎಲ್ಲವನ್ನು ಬಗೆಹರಿಸಿಕೊಳ್ಳುವ ಗುಣ ನಮ್ಮ ಜನರಿಗೆ ಬಹಳ ವಿರಳ. ನೇರ ಕೋರ್ಟ್ ಮೆಟ್ಟಿಲೇರಿ, ವಕೀಲರಿಗೆ, ಓಡಾಟಕ್ಕೆ ಹಣ ಪೋಲು ಮಾಡುತ್ತಾರೆ ಹೊರತು ತಮ್ಮ ಅಹಮ್ಮಿನ ಕೋಟೆಯಿಂದ ಎಂದಿಗೂ ನಮ್ಮೂರ ಜನ ಹೊರಬರಲಾರರು...
ಸಣ್ಣ ಸಣ್ಣ ವ್ಯಾಜ್ಯಕ್ಕೆ, ರಾಜಕೀಯ ಭಿನ್ನಾಭಿಪ್ರಾಯಕ್ಕೆ, ಬಾಯ್ ತಪ್ಪಿ ಬಂದ ಮಾತಿಗೆ ಕೊಲೆಗಳಾಗಿ ಹೋಗಿವೆ, ಕೋರ್ಟ್ ಕಚೇರಿ ಅಲೆದು ಅಲೆದು ಜನರ ಚಪ್ಪಲಿ ಸವೆದುಹೋಗಿದೆ... ಇದೆಲ್ಲಾ ಯಾಕ್ ಹೇಳ್ದೆ ಅಂತೀರಾ... I really don't know... ಈ ಪಟಗಳು ತುಂಬಾ ಚೆನ್ನಾಗಿದೆ ಅಂತ ಶೇರ್ ಮಾಡಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಅವರ ಮದುವೆಗೆ ಸಚಿವ ಜಮೀರ್ ಅಹಮದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಸೂರ್ಯ ಅವರು ಭೇಟಿ ಮಾಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಅಮರೇಂದ್ರ ಹೊಲ್ಲಂಬಳ್ಳಿ ಅವರು, ರಾಜಕಾರಣ ಬೇರೆ. ವೈಯಕ್ತಿಕ ಸಂಬಂಧಗಳು ಬೇರೆ ಎನ್ನುವುದನ್ನು ಈ ಫೋಟೊಗಳು ಹೇಳುತ್ತಿವೆ. ಜನ ಇದನ್ನು ಅರ್ಥ ಮಾಡಿಕೊಂಡು ತಮ್ಮ ನಾಯಕರು ಹೇಗೆ ಪರಸ್ಪರ ವಿಶ್ವಾಸದಿಂದ ಇದ್ದಾರೋ ಹಾಗೆಯೇ ಎಲ್ಲರೊಂದಿಗೆ ತಾವೂ ಇದ್ದರಾಯಿತು.
ಅದರ ಬದಲು ಆ ಪಕ್ಷ, ಈ ಪಕ್ಷ ಎಂದು ದಡ್ಡರಂತೆ ಗುದ್ದಾಡಿದರೆ ಇಂತಹ ಫೋಟೋಗಳನ್ನು ನೋಡಿದಾಗ ಕಣ್ಣುರಿ, ಹೊಟ್ಟೆಯುರಿ, ಹೃದಯ ಸ್ತಂಭನ ಮುಂತಾದ ಸಮಸ್ಯೆಗಳು ಬರುತ್ತವೆ, ವಾಪಸ್ಸು ಹೋಗುವುದಿಲ್ಲ. ಹಾಗೆಯೇ, ದೂರ ಹೋದ ಸ್ನೇಹ ಸಂಬಂಧಗಳು ಮತ್ತೆ ವಾಪಸ್ಸು ಬರುವುದಿಲ್ಲ ಎಂದಿದ್ದಾರೆ.
ಬರಹಗಾರ್ತಿ ಪಿ. ಕುಸುಮಾ ಆಯರಹಳ್ಳಿ ಅವರು, ಹಳ್ಳಿಗಳು ರಾಜಕಾರಣದ ಕೂಪಗಳಾಗಿವೆ. ಬಡವರ ಮಕ್ಕಳು ಪಕ್ಷಗಳ ಹೆಸರಲ್ಲಿ ಹೊಡೆದಾಡಿಕೊಂಡು ಜೈಲು ಸೇರುತ್ತಾರೆ. ಬೀದಿ ಹೆಣಗಳಾಗುತ್ತಾರೆ. ಬುದ್ದಿ ಇಲ್ಲದ ಜೀವಗಳು. ಅವರು ತಮ್ಮ ನಾಯಕರನ್ನು ಅನುಸರಿಸಬೇಕು. ರಾಜಕಾರಣ ಬದುಕಲ್ಲ! ಎಂದಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications