ಜೈನ್ ಸಂಘಟನೆ: ಮಾರ್ಚ್ 29ರಂದು ಮಹಾವೀರ ಜಯಂತಿ ಆಚರಣೆ
ಬೆಂಗಳೂರು, ಮಾರ್ಚ್ 27: ಜೈನ್ ಯುವ ಸಂಘಟನೆಯು ಮಹಾವೀರ ಜಯಂತಿಯನ್ನು ಮಾರ್ಚ್ 29ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದೆ.
ಇದು ಭಗವಾನ್ ಮಹಾವೀರ ಅವರ 2,617ನೇ ಜನ್ಮ ಕಲ್ಯಾಣ ಮಹೋತ್ಸವವಾಗಿದೆ. ಕಾರ್ಯಕ್ರಮದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಅಹಿಂಸಾ ಹಾಗೂ ವಿಶ್ವಶಾಂತಿ ಜಾಥಾವನ್ನು ಅಂದು ಬೆಳಗ್ಗೆ 8ಗಂಟೆಗೆ ಟೌನ್‌ಹಾಲ್ ಬಳಿ ಹಮ್ಮಿಕೊಳ್ಳಲಾಗಿದೆ.
ಮೇಯರ್ ಆರ್. ಸಂಪತ್ ರಾಜ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ನಗರ್ತ ಪೇಟೆ ಆದಿನಾಥ ಜೈನ್ ಸೇವಸ್ಥಾಮ, ಬಿವಿಕೆ ಅಯ್ಯಂಗಾರ್ ರಸ್ತೆ ಹಾಸ್ಪಿಟಲ್ ರಸ್ತೆ, ಅವೆನ್ಯೂ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ, ವೈ. ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ ಮಾರ್ಗವಾಗಿ ಜಾಥಾವು ಸ್ವಾತಂತ್ರ್ಯ ಉದ್ಯಾನ ತಲುಪಲಿದೆ ಎಂದು ಸಂಘಟನೆ ಅಧ್ಯಕ್ಷ ಜೈನ್ ವಿನೋದ್ ನಂದಾವತ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತ ಕುಮಾರ್, ಜೈನ್ ಸಮುದಾಯದ ಉತ್ತಮ ಚಂದ್ ಜಿ ಭಂಡಾರಿ, ಸುರೇಶ್ ಜಿ ಛಲ್ಲಾಣಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.












Click it and Unblock the Notifications