ಆರ್ ಎಲ್ ಜಾಲಪ್ಪ ಅವರ ಆಸ್ಪತ್ರೆ ಮೇಲೆ ಐಟಿ ಇಲಾಖೆ ದಾಳಿ

ಬೆಂಗಳೂರು, ಆಗಸ್ಟ್ 07: ಕೇಂದ್ರದ ಮಾಜಿ ಸಚಿವ, ಮಾಜಿ ಸಂಸದ ಆರ್ಎಲ್ ಜಾಲಪ್ಪ ಅವರಿಗೆ ಸೇರಿದ ವಿದ್ಯಾಸಂಸ್ಥೆ, ಆಸ್ಪತ್ರೆಗಳ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ಗುರುವಾರ ಸಂಜೆಯಿಂದ ಐಟಿ ಇಲಾಖೆ ವಿಚಾರಣೆ ನಡೆಸುತ್ತಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿ ಜನಾರ್ದನ ನೇತೃತ್ವದ ತಂಡ ಬೆಂಗಳೂರು, ಕೋಲಾರದಲ್ಲಿರುವ ಶ್ರೀದೇವರಾಜ್ ಅರಸ್ ಮೆಡಿಕಲ್ ಕಾಲೇಜ್, ಆರ್ ಎಲ್ ಜಾಲಪ್ಪ ಆಸ್ಪತ್ರೆ ಹಾಗೂ ಇನ್ನಿತರ ಕಾಲೇಜು ಕಮ್ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದೆ.

IT raid on Jalappa Hospital

ಆರ್ ಎಲ್ ಜಾಲಪ್ಪ ಅವರು ದೇವರಾಜ್ ಅರಸ್ ಅಕಾಡೆಮಿ ಫಾರ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್(ಎಸ್ ಡಿಯುಎಚ್ ಇಆರ್) ನ ಮುಖ್ಯಸ್ಥರಾಗಿದ್ದಾರೆ. ಈ ಎಲ್ಲಾ ವಿದ್ಯಾಸಂಸ್ಥೆಗಳು ತೆರಿಗೆ ವಂಚನೆ ಆರೋಪ ಎದುರಿಸುತ್ತಿವೆ.

ಗುರುವಾರ ನಡೆಸಲಾದ ಮೊದಲ ದಾಳಿ ಸಂಜೆ ತನಕ ಮುಂದುವರೆದಿತ್ತು, ಸುಮಾರು 3 ಕೋಟಿ ರು ನಗದು ಹಾಗೂ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಉದ್ಯೋಗಿಗಳ ಭವಿಷ್ಯ ನಿಧಿ ಅಧಿಕಾರಿಗಳಿಗೆ ವಿದ್ಯಾಸಂಸ್ಥೆ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಕಾಲೇಜು, ಆಸ್ಪತ್ರೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿರುವುದರಿಂದ ಯಾರನ್ನು ಒಳಗೆ ಯಾರನ್ನು ಬಿಡುತ್ತಿಲ್ಲ. ದಾಳಿ ಬಗ್ಗೆ ಆರ್ ಜಾಲಪ್ಪ ವಿದ್ಯಾಸಂಸ್ಥೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+