ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿ.ಪ್ರಸಾದ್ ರೆಡ್ಡಿ ಮನೆಯಲ್ಲಿ 3ನೇ ದಿನವೂ ಐಟಿ ಶೋಧ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 02 : ಬಿಜೆಪಿ ಮುಖಂಡ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಜಿ.ಪ್ರಸಾದ್ ರೆಡ್ಡಿ ಅವರ ಮನೆ ಮತ್ತು ಕಚೇರಿಯಲ್ಲಿ 3ನೇ ದಿನವೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ.

ಅವಿನಾಶ್ ಅಮರಲಾಲ್ ಕುಕ್ರೇಜ ಅವರ ವ್ಯವಹಾರದಲ್ಲಿ ಜಿ.ಪ್ರಸಾದ್ ರೆಡ್ಡಿ ಅವರು ಪಾಲುದಾರರು ಎಂದು ತಿಳಿದುಬಂದಿದ್ದು, ಈ ಹಿನ್ನಲೆಯಲ್ಲಿ ಅವರ ಕಚೇರಿ ಮತ್ತು ನಿವಾಸದ ಮೇಲೆ ಸೋಮವಾರ ದಾಳಿ ನಡೆದಿತ್ತು.

ತಮಿಳುನಾಡಿನಲ್ಲಿ ಬೃಹತ್ ಐಟಿ ದಾಳಿ, 160 ಕೋಟಿ ರು ವಶ ತಮಿಳುನಾಡಿನಲ್ಲಿ ಬೃಹತ್ ಐಟಿ ದಾಳಿ, 160 ಕೋಟಿ ರು ವಶ

ಬೌರಿಂಗ್ ಇನ್‌ಸ್ಟಿಟ್ಯೂಟ್‌ನ ಮೂರು ಲಾಕರ್‌ಗಳಲ್ಲಿ ಬಚ್ಚಿಡಲಾಗಿದ್ದ ಹಣ, ಆಭರಣ ಮತ್ತು ಜಮೀನು ಪತ್ರಗಳನ್ನು ವಶಪಡಿಸಿಕೊಂಡಿರುವ ಐಟಿ ಇಲಾಖೆ ಅಧಿಕಾರಿಗಳು ಬಳಿಕ ಉದ್ಯಮಿ ಜಿ.ಪ್ರಸಾದ್ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ಮಾಡಿದ್ದರು.

ಬೌರಿಂಗ್ ಲಾಕರ್ ಪ್ರಕರಣ: ಸಿಸಿಟಿವಿ ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳುಬೌರಿಂಗ್ ಲಾಕರ್ ಪ್ರಕರಣ: ಸಿಸಿಟಿವಿ ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳು

IT raid on G Prasad Reddy continue for 3rd day

ಸೋಮವಾರ 30 ಕ್ಕೂ ಹೆಚ್ಚು ಅಧಿಕಾರಿಗಳು ಪ್ರಸಾದ್ ರೆಡ್ಡಿ ಅವರ ಮನೆ ಮೇಲೆ ದಾಳಿ ನಡೆಸಿದ್ದರು. 3 ದಿನವೂ ಪರಿಶೀಲನೆ ಮುಂದುವರೆಸಿದ್ದಾರೆ. ಯಶವಂತಪುರದಲ್ಲಿರುವ ಪ್ರಸಾದ್ ರೆಡ್ಡಿ ಅವರ ಕಚೇರಿಯಲ್ಲಿ ಬುಧವಾರ ಪರಿಶೀಲನೆ ನಡೆಸಲಾಯಿತು.

ಪ್ರಸಾದ್ ರೆಡ್ಡಿ ಅವರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು ಅವಿನಾಶ್ ಹಾಗೂ ಅವರ ತಂದೆ ಒಡೆತನದ 'ಅನುಷ್ಕಾ ಎಸ್ಟೇಟ್ಸ್‌'ಗೆ ಮಾರಾಟ ಮಾಡಿದ್ದಾರೆ ಎಂಬುವುದಕ್ಕೆ ಲಾಕರ್‌ನಲ್ಲಿ ದಾಖಲೆಗಳು ಸಿಕ್ಕಿವೆ. ಆದ್ದರಿಂದ, ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.

English summary
The Income-Tax department continued its searches for the third day on G.Prasad Reddy house and office. G Prasad Reddy is a Bengaluru based BJP leader and businessman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X