ಐಟಿ ದಾಳಿ ಬಗ್ಗೆ ನನಗೇನು ಆತಂಕವಿಲ್ಲ : ನಟ ಸುದೀಪ್
ಬೆಂಗಳೂರು, ಜನವರಿ 03: ಕನ್ನಡ ಚಲನಚಿತ್ರರಂಗದ ಪ್ರಮುಖ ನಟ, ನಿರ್ಮಾಪಕರ ಮನೆ, ಕಚೇರಿ ಮೇಲೆ ಗುರುವಾರದಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದೆ.
ಪವರ್ ಸ್ಟಾರ್ ಪುನೀತ್, ರಾಕಿಂಗ್ ಸ್ಟಾರ್ ಯಶ್, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಮನೆ ಮೇಲೆ ದಾಳಿ ನಡೆದಿದೆ. ನಿರ್ಮಾಪಕರಾದ ವಿಜಯ್ ಕಿರಗಂದೂರು, ಜಯಣ್ಣ, ಶಾಸಕ ಸಿಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಮನೆಗೆ ಮರಳಿದ ಸುದೀಪ್: ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸುದೀಪ್ ಅವರು ಐಟಿ ಅಧಿಕಾರಿಗಳ ಕರೆಯ ಮೇರೆಗೆ ಬೆಂಗಳೂರಿನ ಜೆಪಿ ನಗರದ ನಿವಾಸಕ್ಕೆ ಮರಳಿದ್ದಾರೆ.

ಸುದೀಪ್ ಪ್ರತಿಕ್ರಿಯೆ
ಶೂಟಿಂಗ್ ನಲ್ಲಿರುವಾಗ ಐಟಿ ದಾಳಿ ಬಗ್ಗೆ ಮಾಹಿತಿ ಸಿಕ್ಕಿತು. ನನ್ನ ತಾಯಿ ಮನೆಯಲ್ಲಿ ಒಬ್ಬರೇ ಇದ್ದರು. ಅವರಿಗೆ 70ಪ್ಲಸ್ ವಯಸ್ಸು, ಅವರಿಗೆ ತೊಂದರೆಯಾಗಬಾರದು ಎಂದು ಕೂಡಲೇ ಹೊರಟು ಬಂದೆ.
ನಮ್ಮ ಮೇಲೆ ವೈಯಕ್ತಿಕ ದಾಳಿ ನಡೆದಿಲ್ಲ. ಐಟಿಗೆ ಅವರದ್ದೆ ಆದ ನೀತಿ ನಿಯಮಗಳಿರುತ್ತದೆ. ಮೂರು ಸಿನಿಮಾಗಳ ಬಜೆಟ್ ಇರಬಹುದು, ಕೆಜಿಎಫ್, ಪೈಲ್ವಾನ್, ನಟ ಸಾರ್ವಭೌಮ ಬಿಗ್ ಬಜೆಟ್ ಸಂಬಂಧಪಟ್ಟಂತೆ ವಿಚಾರಣೆ ನಡೆದಿದೆ.
ನಟ ಸುದೀಪ್, ಯಶ್ ರಿಗೂ ಶಾಕ್ ನೀಡಿದ ಐಟಿ ಅಧಿಕಾರಿಗಳು
ಇದು ಎಕಾನಾಮಿ ಬಗ್ಗೆ ಸಂಬಂಧಿಸಿದ್ದು, ಪರ್ಸನಲ್ ದಾಳಿ ಅಲ್ಲ, ನಾನು ಏನಾದರೂ ತಪ್ಪು ಮಾಡಿದ್ದರೆ ಭಯ ಪಡಬೇಕು, ನಾನೇನು ತಪ್ಪು ಮಾಡಿಲ್ಲ, ನನಗೆ ಭಯವಿಲ್ಲ.
ಯಾವ ಪಕ್ಷಕ್ಕೆ ಸಂಬಂಧಪಟ್ಟಿಲ್ಲ, ಇದನ್ನು ರಾಜಕೀಯ ಉದ್ದೇಶಿತ ದಾಳಿ ಎಂದು ಹೇಳಲಾರೆ ಎಂದಿದ್ದಾರೆ.
ರಾಕ್ ಲೈನ್ ಮನೆ ಮೇಲೆ ಐಟಿ ದಾಳಿಯ ವೇಳೆ ಚಿನ್ನ, ಬೆಳ್ಳಿ ಪತ್ತೆ
ಜಿ ಎಸ್ ಟಿ ಹೊಸ ನಿಯಾಮಾವಳಿಗಳ ಪ್ರಕಾರ 20 ಲಕ್ಷಕ್ಕೂ ಹೆಚ್ಚು ಅದಾಯ ಪಡೆದುಕೊಳ್ಳುವ ಕಲಾವಿದರು ಶೇಕಡಾ 28 ರಷ್ಟು ತೆರಿಗೆ ಪಾವತಿ ಮಾಡಬೇಕು
ಸ್ಯಾಂಡಲ್ ವುಡ್ ನ '8' ಶ್ರೀಮಂತ ಮನೆಗಳ ಮೇಲೆ ಐಟಿ ರೈಡ್
ಆದರೆ ಸಂಭಾವನೆಯನ್ನು ನಿಯಮಿತವಾಗಿ ಪಡೆದು ಸಿನಿಮಾದ ಒಟ್ಟು ಆದಾಯದಲ್ಲಿ ಇಂತಿಷ್ಟು ಅಂತಾ ಪಡೆದುಕೊಳ್ಳುವ ನಟರಿಂದ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಐಟಿ ಅಧಿಕಾರಿಗಳು ಕೋರ್ಟಿನಿಂದ ಆದೇಶ ಪಡೆದು ಈ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications