ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೌರಿಂಗ್ ಇನ್ಸ್ಟಿಟ್ಯೂಟ್ ಪ್ರಕರಣ: ಬಿಜೆಪಿ ಮುಖಂಡನ ಮನೆ ಮೇಲೆ ಐಟಿ ದಾಳಿ

By Manjunatha
|
Google Oneindia Kannada News

ಬೆಂಗಳೂರು, ಜುಲೈ 30: ಬೌರಿಂಗ್ ಇನ್ಸ್ಟಿಟ್ಯೂಟ್ ನ ಲಾಕರ್‌ನಲ್ಲಿ ಕೋಟಿಗಟ್ಟಲೆ ಹಣ , ಚಿನ್ನಾಭರಣ, ಆಸ್ತಿ ದಾಖಲೆಗಳು ದೊರೆತಿದ್ದ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಐಟಿ ಅಧಿಕಾರಿಗಳು ಇಂದು ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಬಿಜೆಪಿ ಮುಖಂಡರಾದ ಪ್ರಸಾದ್ ರೆಡ್ಡಿ ಅವರ ಕೋರಮಂಗಲ ನಿವಾಸದ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಬೌರಿಂಗ್ ಲಾಕರ್ ಪ್ರಕರಣ: ಸಿಸಿಟಿವಿ ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳುಬೌರಿಂಗ್ ಲಾಕರ್ ಪ್ರಕರಣ: ಸಿಸಿಟಿವಿ ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳು

ಬೌರಿಂಗ್ ಇನ್ಸ್ಟಿಟ್ಯೂಟ್‌ನ ಲಾಕರ್‌ನಲ್ಲಿ ಸಿಕ್ಕ ಹಣದ ಪ್ರಕರಣದಲ್ಲಿ ಪ್ರಮುಖ ನಾಯಕರಿಗೆ ಸಂಬಂಧ ಇರುವ ಬಗ್ಗೆ ಐಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹಣ ದೊರಕಿದ್ದ ಲಾಕರ್‌ ನ ಮಾಲೀಕ ಅವಿನಾಶ್‌ನನ್ನು ಸಹ ವಿಚಾರಣೆ ಮಾಡದಂತೆ ರಾಜಕೀಯ ಒತ್ತಡಗಳು ಬಂದಿದ್ದಾಗಿಯೂ ಮೂಲಗಳಿಂದ ತಿಳಿದುಬಂದಿದೆ.

IT officers raid on BJP leader regarding bowring institute case

ಬೌರಿಂಗ್ ಇನ್ಸ್ಟಿಟ್ಯೂಟ್‌ನ ಮೂರು ಲಾಕರ್‌ಗಳಲ್ಲಿ ಹಲವು ಕೋಟಿ ಹಣ, ಚಿನ್ನದ ಬಿಸ್ಕತ್ತು ಮತ್ತು ಕೋಟ್ಯಂತರ ಮೊತ್ತದ ಆಸ್ತಿ ಪತ್ರಗಳು ಪತ್ತೆಯಾಗಿದ್ದವು. ಇವೆಲ್ಲವೂ ದೊರೆತ ಲಾಕರ್‌ಗಳು ಗುಜರಾತ್ ಮೂಲದ ಅವಿನಾಶ್ ಎಂಬುವರಿಗೆ ಸೇರಿದ್ದಾಗಿತ್ತು. ಈ ಪ್ರಕರಣದಲ್ಲಿ ರಾಜಕೀಯ ಮುಖಂಡರು ಮತ್ತು ಅವರ ಮಕ್ಕಳು ಭಾಗಿಯಾಗಿರುವ ಅನುಮಾನವನ್ನು ಐಟಿ ಅಧಿಕಾರಿಗಳು ವ್ಯಕ್ತಪಡಿಸಿದ್ದರು.

English summary
IT officers raid on BJP leader Prasad Reddy house in Koramangal accusing in link with Bowring institute money case. Some days ago in Bowring institute locker money and gold was found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X