ಬಾಹ್ಯಾಕಾಶಕ್ಕೆ ತೆರಳಲಿದ್ದಾಳೆ 'ವ್ಯೋಮಮಿತ್ರ': ಯಾರು ಈ 'ಮಹಿಳೆ'?
ಬೆಂಗಳೂರು, ಜನವರಿ 23: ಇಸ್ರೋದ ಮಹತ್ವಾಕಾಂಕ್ಷೆಯ ಮಾನವಸಹಿತ 'ಗಗನಯಾನ' ಯೋಜನೆಗೂ ಮುನ್ನ 'ಮಹಿಳೆ'ಯೊಬ್ಬರು ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. ಆ ಮಹಿಳೆಯ ಹೆಸರು 'ವ್ಯೋಮಮಿತ್ರ'. ಹೆಸರು ವಿಚಿತ್ರವಾಗಿದೆಯಲ್ಲವೇ?
ಅಂದಹಾಗೆ, 'ವ್ಯೋಮಮಿತ್ರ' ಸಂಪೂರ್ಣ ಮನುಷ್ಯಳಲ್ಲ. ಅರ್ಧ ಮಾನವಳಾಗಿರುವ ವ್ಯೋಮಮಿತ್ರಳನ್ನು ಭಾರತದ ಪ್ರಪ್ರಥಮ ಮಾನವಸಹಿತ ಗಗನಯಾನ ಯೋಜನೆಗೂ ಮುನ್ನ ಪರೀಕ್ಷಾರ್ಥ ಸಂಚಾರಗಳಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಉದ್ದೇಶಿಸಿದೆ.
ವ್ಯೋಮಮಿತ್ರ ಪದವು ವ್ಯೋಮ (ಬಾಹ್ಯಾಕಾಶ) ಮತ್ತು ಮಿತ್ರ (ಸ್ನೇಹಿತ) ಪದಗಳಿಂದ ಹುಟ್ಟಿಕೊಂಡಿದೆ. ಮಹಿಳಾ ರೋಬೋಟ್ 'ವ್ಯೋಮಮಿತ್ರ', ಬುಧವಾರ ನಡೆದ 'ಮಾನವ ಗಗನಯಾನ ಮತ್ತು ಪರಿಶೋಧನೆ- ಪ್ರಸ್ತುತ ಸವಾಲುಗಳು ಹಾಗೂ ಮುಂದಿನ ಒಲವು' ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಅನುಕರಣೆ ಮಾಡಬಲ್ಲ ವ್ಯೋಮಮಿತ್ರ
ಈ ರೋಬೋಟ್ ಮಹಿಳೆ ಮಾತನಾಡಬಲ್ಲಳು. ಇತರೆ ಮನುಷ್ಯರನ್ನು ಗುರುತಿಸಬಲ್ಲಳು. ಬಾಹ್ಯಾಕಾಶದಲ್ಲಿ ಗಗನಯಾನಿಗಳು ಮಾಡುವುದನ್ನು ಅನುಕರಣೆ ಮಾಡಬಲ್ಲಳು. ಅಷ್ಟೇ ಅಲ್ಲ, ಸಂಭಾಷಣೆ ನಡೆಸಬಲ್ಲಳು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಲ್ಲಳು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಗಗನಯಾನಿ ಮಾನವ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದೆ.

ಹಾಯ್ ನಾನು ವ್ಯೋಮಮಿತ್ರ
'ಹಾಯ್ ನಾನು ವ್ಯೋಮಮಿತ್ರ, ಮೊದಲ ಅರ್ಧಮಾನವ ಮಾದರಿ. ಮೊದಲ ಮಾನವರಹಿತ ಗಗನಯಾನ ಯೋಜನೆಗಾಗಿ ನನ್ನನ್ನು ಸಿದ್ಧಪಡಿಸಲಾಗಿದೆ. ಮುನ್ನೆಚ್ಚರಿಕೆ ನೀಡುವ ಮತ್ತು ಜೀವರಕ್ಷಣೆಯ ಕಾರ್ಯಗಳಲ್ಲಿ ಸಹಕರಿಸುತ್ತೇನೆ. ಸ್ವಿಚ್ ಪ್ಯಾನಲ್ ಸೇರಿದಂತೆ ಅನೇಕ ಚಟುವಟಿಕೆಗಳನ್ನು ನಡೆಸಬಲ್ಲದೆ' ಎಂದು ವ್ಯೋಮಮಿತ್ರ ಹೇಳುತ್ತದೆ.
|
ಗಗನಯಾನಿಗಳಿಗೆ ಉತ್ತರ ನೀಡಬಲ್ಲದು
ಈ ಮಹಿಳಾ ರೋಬೋಟ್ ಗಗನಯಾನಿ ಸಿಬ್ಬಂದಿಯ ಚಟುವಟಿಕೆಗಳನ್ನು ಅನುಕರಿಸಬಲ್ಲದು ಮತ್ತು ಅವರನ್ನು ಗುರುತಿಸಿ ಅವರ ಪ್ರಶ್ನೆಗಳಿಗೆ ಉತ್ತರವನ್ನು ಸಹ ನೀಡಬಲ್ಲದು. ವ್ಯೋಮಮಿತ್ರ ಅರ್ಧ ಮಾನವಸ್ವರೂಪಿ. ಏಕೆಂದರೆ ಆಕೆಗೆ ಕಾಲುಗಳಿಲ್ಲ. ಅದು ಮುಂದೆ ಮತ್ತು ಅಕ್ಕಪಕ್ಕ ಮಾತ್ರ ಬಾಗಬಲ್ಲದು. ಅದು ಕೆಲವು ಪ್ರಯೋಗಗಳನ್ನು ನಡೆಸಬಲ್ಲದು ಮತ್ತು ಇಸ್ರೋ ಕಮಾಂಡ್ ಸೆಂಟರ್ ಜತೆ ನಿರಂತರ ಸಂಪರ್ಕದಲ್ಲಿ ಇರಬಲ್ಲದು ಎಂದು ಇಸ್ರೋ ವಿಜ್ಞಾನಿ ಸ್ಯಾಮ್ ದಯಾಳ್ ತಿಳಿಸಿದರು.

ಎರಡು ಮಾನವರಹಿತ ಗಗನಯಾನ
2022ರಲ್ಲಿ ಮಾನವಸಹಿತ ಗಗನಯಾನ ಯೋಜನೆಯನ್ನು ನಡೆಸಲು ಇಸ್ರೋ ಗುರಿ ನಿಗದಿಮಾಡಿದೆ. ಅದಕ್ಕೂ ಮುನ್ನ ಈ ವರ್ಷದ ಡಿಸೆಂಬರ್ ಮತ್ತು 2021ರ ಜೂನ್‌ನಲ್ಲಿ ಎರಡು ಮಾನವರಹಿತ ಗಗನಯಾನ ಯೋಜನೆಗಳನ್ನು ನಡೆಸಲಿದೆ. ಇದು ಬಾಹ್ಯಾಕಾಶಕ್ಕೆ ಇಸ್ರೋ ಮನುಷ್ಯರನ್ನು ಕಳುಹಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ನೆರವಾಗಲಿದೆ ಮತ್ತು ಅಂತಿಮ ಮಾನವಸಹಿತ ಬಾಹ್ಯಾಕಾಶ ಯೋಜನೆಯ ವಿವಿಧ ವ್ಯವಸ್ಥೆಗಳ ಪರೀಕ್ಷೆಗೂ ಸಹಕಾರಿಯಾಗಲಿದೆ.
ಪರೀಕ್ಷಾರ್ಥ ಬಾಹ್ಯಾಕಾಶ ಹಾರಾಟದಲ್ಲಿ ವ್ಯೋಮಮಿತ್ರ ಭಾಗವಹಿಸಲಿದ್ದಾಳೆ. ಆದರೆ 2022ರಲ್ಲಿ ನಡೆಯಲಿರುವ ಐತಿಹಾಸಿಕ ಮಾನವಸಹಿತ ಗಗನಯಾನ ಯೋಜನೆಯಲ್ಲಿ ಗಗನಯಾತ್ರಿಗಳ ಜತೆಗೂ ವ್ಯೋಮಮಿತ್ರ ತೆರಳಲಿದ್ದಾಳೆಯೇ ಎನ್ನುವುದು ಖಚಿತವಾಗಿಲ್ಲ.
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain












Click it and Unblock the Notifications