ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳಯಾನದ ಅಂತಿಮ ಚಾಲೆಂಜ್ ಗೆದ್ದ ಇಸ್ರೋ

By Mahesh
|
Google Oneindia Kannada News

ಬೆಂಗಳೂರು,ಸೆ.22: ಮಂಗಳ ಗ್ರಹದೆಡೆಗೆ ಸಾಗುತ್ತಿರುವ ಮಂಗಳಯಾನ (ಮಾರ್ಸ್‌ ಅರ್ಬಿಟರ್ ಮಿಷನ್) ಬಾಹ್ಯಾಕಾಶ ನೌಕೆ ಕೊನೆಯ ಹಂತದ ಪರೀಕ್ಷೆ ಯಶಸ್ವಿಯಾಗಿದೆ. ಮಂಗಳಗ್ರಹಕ್ಕೆ ಸೇರಿಸುವ ಎಲ್ಎಎಂ(ನ್ಯೂಟನ್ ಲಿಕ್ವಿಡ್ ಅಪೋಜಿ ಮೋಟಾರ್) ದ್ರವ ದಹನ ಪರೀಕ್ಷೆ ಸೋಮವಾರ ಯಶಸ್ವಿಯಾಗಿದೆ. ಸೆ.24ರಂದು ಮಂಗಳನ ಕಕ್ಷೆಯಲ್ಲಿ ಭಾರತದ ಮಹತ್ವದ ನೌಕೆ ಸೇರಲಿದೆ.

300 ದಿನದಿಂದ ನಿಷ್ಕ್ರಿಯವಾಗಿದ್ದ ಇಂಜಿನ್ ನನ್ನು 4 ಸೆಕೆಂಡುಗಳ(3.968 secs) ಕಾಲ ಚಾಲನೆ ಮಾಡುವ ಮೂಲಕ ವಿಜ್ಞಾನಿಗಳು ಪ್ರಮುಖ ಘಟ್ಟವನ್ನು ದಾಟಿದ್ದಾರೆ. ಬೆಂಗಳೂರಿನ ಪೀಣ್ಯದ ಇಸ್ರೋ ಕೇಂದ್ರದಿಂದ ವಿಜ್ಞಾನಿಗಳು ಇಂಜಿನ್ ಚಾಲನೆಯನ್ನ ವೀಕ್ಷಣೆ ಮಾಡಿದರು. 2014ರ ಸೆಪ್ಟಂಬರ್ 24ರಂದು ಬಾಹ್ಯಾಕಾಶ ನೌಕೆಯು ಮಂಗಳ ಗ್ರಹದ ಕಕ್ಷೆಯನ್ನು ತಲುಪಲಿದೆ. ಆ ನಂತರ 160 ದಿನಗಳ ಕಾಲ ಉಪಗ್ರಹ ಮಂಗಳನ ಸುತ್ತ ಸುತ್ತಲಿದೆ.

ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ 307 ದಿನಗಳ ಪ್ರಯತ್ನ ಯಶಸ್ಸು ಕಾಣುವ ಎಲ್ಲ ಲಕ್ಷಣ ಕಂಡುಬರುತ್ತಿದೆ. ಈ ಮೂಲಕ ಭಾರತ ಮೊದಲ ಪ್ರಯತ್ನದಲ್ಲೇ ಕೆಂಪುಗ್ರಹದ ಅಂಗಳಕ್ಕೆ ಕಾಲಿಟ್ಟ ಖ್ಯಾತಿಗೆ ಪಾತ್ರವಾಗಲಿದೆ. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಂಗಳ ಅಂಗಳಕ್ಕೆ ಕಾಲಿಟ್ಟ ಕೆಲವೇ ಕೆಲವು ದೇಶಗಳ ಸಾಲಿನಲ್ಲಿ ಭಾರತ ನಿಲ್ಲಲಿದೆ.[ಬಾನಬಂಡಿಯಲ್ಲಿನ ಸಲಕರಣೆಗಳು ಏನು ಮಾಡಲಿವೆ]

ಉಪಗ್ರಹದ ಮೇಲೆ ಬೆಂಗಳೂರಿನ ಬ್ಯಾಲಾಳು, ಪೀಣ್ಯ, ಅಂಡಮಾನ್-ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ , ಮಲೇಷ್ಯಾದ ಬ್ರೂನೈ ಇಸ್ರೋ ಕೇಂದ್ರ, ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಭಾರತದ ಎರಡು ಹಡಗುಗಳು ಯಮುನಾ ಹಾಗೂ ನಳಂದ ನಿಗಾ ಇಡಲಿವೆ.

450 ಕೋಟಿ ರೂಪಾಯಿ ವೆಚ್ಚದ ಯೋಜನೆ

450 ಕೋಟಿ ರೂಪಾಯಿ ವೆಚ್ಚದ ಯೋಜನೆ

ಸುಮಾರು 450 ಕೋಟಿ ರೂಪಾಯಿ ವೆಚ್ಚದ ಮಂಗಳಯಾನ ಯೋಜನೆಯ ಅಡಿಯಲ್ಲಿ 2013ರ ನವೆಂಬರ್ 5ರಂದು ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಈ ಮಹತ್ವದ ನೌಕೆಯನ್ನು ಪೋಲಾರ್ ಉಪಗ್ರಹ ಉಡಾವಣೆ ವಾಹನ(ಪಿಎಸ್ ಎಲ್ವಿ) ಮೂಲಕ ಉಡಾವಣೆ ಮಾಡಲಾಗಿತ್ತು.

ಡಿ.1, 2013ರಂದು ಭೂಮಿಯ ಗುರುತ್ವಾಕರ್ಷಣಾ ಸೆಳೆತವನ್ನು ಕಳೆದುಕೊಂಡ ಈ ನೌಕೆ ಸುಮಾರು 666 ಮಿಲಿಯನ್ ಕಿ.ಮೀ ಯಾನವನ್ನು ಸೆ.24ರಂದು ಪೂರೈಸಲಿದೆ, ಈ ಅಮೃತಘಳಿಗೆಯನ್ನು ವೀಕ್ಷಿಸಲು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಉಪಸ್ಥಿತರಿರಲಿದ್ದಾರೆ.

ಎಲ್ಎಎಂ ಇಂಜಿನ್ ಯಶಸ್ವಿ ಪರೀಕ್ಷೆ

Liquid Apogee Motor ಇಂಜಿನ್ ಯಶಸ್ವಿ ಪರೀಕ್ಷೆ ಮುಕ್ತಾಯವಾಗಿದ್ದು 12 ನಿಮಿಷಗಳ ವಿಳಂಬದ ನಂತರ ಈ ಬಗ್ಗೆ ಸ್ಪಷ್ಟ ಸೂಚನೆ ಸಿಕ್ಕಿದೆ.

ಪ್ರೊಪೆಲೆಂಟ್ ಲೈನ್ ಗಳು ಚಾಲ್ತಿಯಲ್ಲಿವೆ

ಪ್ರೊಪೆಲೆಂಟ್ ಲೈನ್ ಗಳು ಚಾಲ್ತಿಯಲ್ಲಿವೆ ಎಂದು ಟ್ವೀಟ್ ಮಾಡಿದ ಇಸ್ರೋ ಸಂಸ್ಥೆ

Maven ಯಶಸ್ಸಿಗೆ ಇಸ್ರೋ ಅಭಿನಂದನೆ

ಯುಎಸ್ ಬಾಹ್ಯಾಕಾಶ ಸಂಸ್ಥೆ(ನಾಸಾ) ಹೊಚ್ಚ ಹೊಸ ಉಪಗ್ರಹ Maven ಮಂಗಳನ ಕಕ್ಷೆ ಸೇರಿದ್ದಕ್ಕೆ ಇಸ್ರೋ ಅಭಿನಂದನೆ ಸಲ್ಲಿಸಿದೆ.

English summary
The Indian Space Research Organisation on Monday(Sep.22) successfully test fired the main liquid engine of India's Mars Orbiter Mission, which has been in sleep mode for more than 300 days. The Mars Orbiter Mission will enter the red planet's atmosphere on September 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X