IRCTC Tour Package: ಬೆಂಗಳೂರಿನಿಂದ ಈ ಭಾಗಗಳಿಗೆ ಐಆರ್ಸಿಟಿಸಿಯಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ
IRCTC Tour Package: ಭಾರತೀಯ ರೈಲ್ವೆ ವಿಭಾಗವಾದ ಐಆರ್ಸಿಟಿಸಿಯು ಕೈಗೆಟಕುವ ದರದಲ್ಲಿ ಟೂರ್ ಪ್ಯಾಕೇಜ್ಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಹೊಸ ವರ್ಷಕ್ಕೆ ಬೆಂಗಳೂರಿನಿಂದ ಈ ಭಾಗಗಳಿಗೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ. ಹಾಗಾದ್ರೆ, ಎಲ್ಲಿಗೆ ಹಾಗೂ ಸಮಯ, ದಿನಾಂಕಗಳ ವಿವರವರನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ಪ್ಯಾಕೇಜ್ಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಇನ್ನೂ ಕೆಲವೇ ವಾರಗಳಲ್ಲಿ 2025ನೇ ವರ್ಷ ಮುಗಿಯಲಿದ್ದು, 2026 ಎಂಟ್ರಿ ಕೊಡಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ವರ್ಷಕ್ಕೆ ಐಆರ್ಸಿಟಿಸಿ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಹಾಗಾದ್ರೆ, ಎಲ್ಲೆಲ್ಲಿಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

2026ರ ಹೊಸ ವರ್ಷಕ್ಕೆ ವಿಶೇಷ ಟೂರ್ ಪ್ಯಾಕೇಜ್ ಅನ್ನು ಐಆರ್ಸಿಟಿಸಿ ಘೋಷಣೆ ಮಾಡಿದೆ. ಇದೇ ಡಿಸೆಂಬರ್ 30 ರಿಂದ ಫೆಬ್ರವರಿ 9, 2026ರ ಅವಧಿಯಲ್ಲಿ ಕಾಶಿ, ಗಯಾ , ಅಯೋಧ್ಯೆಯ ಪ್ರವಾಸ ಯೋಜನೆಯನ್ನು ರೂಪಿಸಲಾಗಿದೆ. ಈ ಟೂರ್ ಪ್ಯಾಕೇಜ್ನಲ್ಲಿ ಬೆಳಗಿನ ಉಪಾಹಾರ ಮತ್ತು ಭೋಜನದ ವ್ಯವಸ್ಥೆ ಇರಲಿದೆ. ಅಲ್ಲದೆ, ಎಸಿ ಕೊಠಡಿಗಗಳು ಇರಲಿದ್ದು, 4 ರಾತ್ರಿಗಳ ಹೋಟೆಲ್ ವಸತಿಯ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ.
ಡಿಸೆಂಬರ್ 30 ಮತ್ತು ಫೆಬ್ರುವರಿ 5ರಂದು 6E-463 ಸಂಖ್ಯೆಯ ವಿಮಾನ ಬೆಳಗ್ಗೆ 8.25ಕ್ಕೆ ಬೆಂಗಳೂರಿನಿಂದ ಹೊರಟು, 10:55ಕ್ಕೆ ಪಟ್ನಾಗೆ ತಲುಪಲಿದೆ. ಜನವರಿ 30ರಂದು ಮತ್ತು ಫೆಬ್ರುವರಿ 9ರಂದು 6E-926 ಸಂಖ್ಯೆಯ ವಿಮಾನವು ಮಧ್ಯಾಹ್ನ 2.30ಕ್ಕೆ ಅಯೋಧ್ಯೆಯಿಂದ ಹೊರಟು, ಸಂಜೆ 5:05ಕ್ಕೆ ಬೆಂಗಳೂರಿಗೆ ತಲುಪಲಿದೆ. ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯ ಕಾರ್ಯಸಾಧ್ಯತೆಗೆ ತಕ್ಕಂತೆ ವಿಮಾನ ಸಮಯ ಅಥವಾ ವೇಳಾಪಟ್ಟಿ ಬದಲಾವಣೆಗೆ ಅನುಗುಣವಾಗಿರುತ್ತದೆ.
4 ರಾತ್ರಿ ಮತ್ತು 5 ದಿನಗಳ ಪ್ರವಾಸ ಇದಾಗಿದೆ. ಪಾಟ್ನಾ, ಗಯಾ, ವಾರಾಣಸಿ, ಪ್ರಯಾಗ್ರಾಜ್, ಅಯೋಧ್ಯೆಗೆ ಪ್ರವಾಸ ಆಯೋಜನೆ ಮಾಡಲಾಗಿದೆ. ಮೊದಲನೇ ದಿನ ಡಿಸೆಂಬರ್ 30ಕ್ಕೆ ವಿಮಾನವು ಬೆಳಗ್ಗೆ 8:25ಕ್ಕೆ ಹೊರಡಲಿದ್ದು, ನಿಗದಿತ ಸಮಯಕ್ಕೂ 2 ಗಂಟೆ ಮುಂಚಿತವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರಬೇಕಾಗುತ್ತದೆ ಎಂದು ಸೂಚಿಸಿದೆ.
ಪಾಟ್ನಾಗೆ 10:55 ಗಂಟೆಗೆ ಪ್ರಯಾಣಿಕರು ತಲುಪಲಿದ್ದು, ಬೋಧ್, ಗಯಾದಲ್ಲಿನ ಮಹಾಬೋಧಿ ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿದೆ. ಬಳಿಕ, ಹೋಟೆಲ್ ತಲುಪಲಾಗುತ್ತದೆ. ಬೋಧ್ ಗಯಾದಲ್ಲಿ ಭೋಜನ ಮತ್ತು ರಾತ್ರಿ ವಾಸ್ತವ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ಎರಡನೇ ದಿನ ಬೆಳಗ್ಗೆ, ಗಯಾದಲ್ಲಿರುವ ವಿಷ್ಣುಪಾದ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ಬಳಿಕ ಹೊಟೆಲ್ನಲ್ಲಿ ಉಪಾಹಾರ ವ್ಯವಸ್ತೇ ಇರುತ್ತದೆ. ಹೋಟೆಲ್ನಿಂದ ಹೊರೆಟು, ವಾರಾಣಸಿಗೆ ಪ್ರಯಾಣವನ್ನು ಬೆಳೆಸಲಾಗುತ್ತದೆ. ವಾರಾಣಸಿಯಲ್ಲಿ ಹೋಟೆಲ್ಗೆ ಚೆಕ್ ಇನ್ ಮಾಡಿದ ನಂತರ ಭೋಜನ ಮತ್ತು ರಾತ್ರಿಯ ವಾಸ್ತವ್ಯದ ವ್ಯವಸ್ಥೆ ಇರುತ್ತದೆ.
ಮೂರನೇ ದಿನ ಬೆಳಗ್ಗೆ ಬೇಗನೆ ಕಾಶಿ ವಿಶ್ವನಾಥ ದೇವಸ್ಥಾನ, ವಿಶಾಲಾಕ್ಷಿ ಮತ್ತು ಅನ್ನಪೂರ್ಣ ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಸಂಜೆ ಗಂಗಾ ಆರತಿಗೆ ತೆರಳಿ, ನಂತರ ಭೋಜನ ಮತ್ತು ರಾತ್ರಿಯ ವಾಸ್ತವ್ಯಕ್ಕಾಗಿ ಹೋಟೆಲ್ಗೆ ಹಿಂತಿರುಗಲಾಗುತ್ತದೆ.
ನಾಲ್ಕನೇ ದಿನ ಬೆಳಗಿನ ಉಪಹಾರದ ನಂತರ, ಹೋಟೆಲ್ನಿಂದ ಚೆಕ್ ಔಟ್ ಮಾಡಿ ಪ್ರಯಾಗ್ರಾಜ್ಗೆ ಹೊರಡಲಾಗುತ್ತದೆ. ಅಲ್ಲಿ ತಲುಪಿದ ನಂತರ ತ್ರಿವೇಣಿ ಸಂಗಮ ಮತ್ತು ಪಾತಾಳಪುರಿ ದೇವಾಲಯಕ್ಕೆ ಭೇಟಿ ನೀಡಿ, ಅಯೋಧ್ಯೆಗೆ ತೆರಳಿ, ಅಯೋಧ್ಯೆಯ ಹೋಟೆಲ್ನಲ್ಲಿ ಭೋಜನ ಮತ್ತು ರಾತ್ರಿ ವಾಸ್ತವ್ಯ ಇರಲಿದೆ.
ಕೊನೆಯ ದಿನ ಬೆಳಗ್ಗೆ ರಾಮ್ ಲಲ್ಲಾ ದೇವಸ್ಥಾನ ಮತ್ತು ಹನುಮಾನ್ ಘಾಟಿಗೆ ಹೋಗಿ ಹೋಟೆಲ್ಗೆ ಹಿಂತಿರುಗಿದ ನಂತರ ಹೋಟೆಲ್ನಲ್ಲಿ ಉಪಾಹಾರ ಮಾಡಿ ಚೆಕ್ ಔಟ್ ಮಾಡಿದ ನಂತರ 12 ಗಂಟೆಗೆ ಅಯೋಧ್ಯಾ ವಿಮಾನ ನಿಲ್ದಾಣ ತಲುಪಲಾಗುತ್ತದೆ. ಮಧ್ಯಾಹ್ನ2:30 ಗಂಟೆಗೆ ವಿಮಾನ ಟೇಕ್ ಆಫ್ ಆಗಲಿದ್ದು, ಸಂಜೆ 5 ಗಂಟೆಗೆ ಬೆಂಗಳೂರು ತಲುಪುತ್ತದೆ.
ಪ್ಯಾಕೇಜ್ನಲ್ಲಿ ಒಬ್ಬ ಪ್ರಯಾಣಿಕನಿಗೆ 42,600 ರೂಪಾಯಿ, ಇಬ್ಬರಿಗೆ 33,950 ರೂಪಾಯಿ, ಮೂವರಿಗೆ 31,900 ರೂಪಾಯಿ, 5-11 ವರ್ಷದ ಮಗುವಿಗೆ ಹಾಸಿಗೆ ಸಹಿತ 31,750 ರೂಪಾಯಿ ಹಾಸಿಗೆ ರಹಿತ 29,600 ರೂಪಾಯಿ ಹಾಸಿಗೆ ರಹಿತ 2 ರಿಂದ 4 ವರ್ಷದ ಮಗುವಿಗೆ 18,450 ರೂಪಾಯಿ ದರ ನಿಗದಿಗೊಳಿಸಲಾಗಿದೆ.
* ಟೂರ್ ಪ್ಯಾಕೇಜ್ನಲ್ಲಿ ಏನೆಲ್ಲಾ ಸೌಲಭ್ಯಗಳಿರುತ್ತವೆ?: ಎಕಾನಮಿ ಕ್ಲಾಸ್ನಲ್ಲಿ ವಿಮಾನ ಟಿಕೆಟ್ಗಳು, ಬೆಳಗಿನ ಉಪಾಹಾರ ಮತ್ತು ಭೋಜನ, ಎಸಿ ಕೊಠಡಿಗಳೊಂದಿಗೆ 4 ರಾತ್ರಿಗಳ ಹೋಟೆಲ್ ವಸತಿ ವ್ಯವಸ್ಥೆ ಇರಲಿದೆ.
* ಮತ್ತೊಂದೆಡೆ ಪ್ಯಾಕೇಜ್ನಲ್ಲಿ ಎಲ್ಲಾ ಪ್ರವಾಸಿ ತಾಣಗಳ ಪ್ರವೇಶ ಶುಲ್ಕಗಳು/ಟಿಕೆಟ್ಗಳು, ಸ್ಟಿಲ್/ ವಿಡಿಯೋ ಕ್ಯಾಮೆರಾ ಶುಲ್ಕಗಳು, ದೋಣಿ ವಿಹಾರ ಶುಲ್ಕಗಳು ಇತ್ಯಾದಿ ಇರುವುದಿಲ್ಲ. ವಿಮಾನ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಆದರೆ, ವಿಮಾನ ನಿಲ್ದಾಣ ತೆರಿಗೆಗಳಲ್ಲಿ ಬದಲಾವಣೆ ಆದರೆ ಸೇರಿದಂತೆ ಯಾವುದೇ ವೈಯಕ್ತಿಕ ವೆಚ್ಚಗಳನ್ನು ನಿಗಮ ಭರಿಸಲಾಗುವುದಿಲ್ಲ.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications