IPS ಅಧಿಕಾರಿ ವರ್ತಿಕಾ ಕಟಿಯಾರ್ ಕೊಟ್ಟ ದೂರಿನಲ್ಲಿ ಏನಿದೆ ?
ಬೆಂಗಳೂರು, ಫೆಬ್ರವರಿ 06: ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರ ಜೀವನದಲ್ಲಿ ಕೌಟುಂಬಿಕ ಸಮಸ್ಯೆ ತಲೆದೋರಿದೆ. ರಾಜ್ಯ ಕೆಎಸ್ಆರ್ಪಿ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವರ್ತಿಕ ಕಟಿಯಾರ್ ತನ್ನ ಪತಿ ನಿತಿನ್ ಶುಭಾಶ್ ಯೋಲಾ ಮತ್ತು ಅವರ ಕುಟುಂಬದ ಏಳು ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.
ವರ್ತಿಕಾ ಕಟಿಯಾರ್ ನೀಡಿರುವ ದೂರನ್ನಾಧರಿಸಿ ಕಬ್ಬನ್ ಪಾರ್ಕ್ ಪೊಲೀಸರು ಕಟಿಯಾರ್ ಪತಿ ಐಎಫ್ಎಸ್ ಅಧಿಕಾರಿ ನಿತಿನ್ ಶುಭಾಶ್ ಯೋಲಾ , ಮಾವ ಸುಭಾಶ್ ಲೊಯಾ, ಅಮೋಲ್ ಯೊಲಾ, ಸುನಿತಾ ಯೋಲಾ, ಸಚಿನ್ ಯೋಲಾ, ಪ್ರಜಕ್ತಾ ಯೋಲಾ ಇತರರ ವಿರುದ್ಧ ವರದಕ್ಷಿಣೆ ಕಿರುಕುಳ, ವಂಚನೆ, ಮೋಸ ಮಾಡಿದ ಆರೋಪದಡಿ ಕೇಸು ದಾಖಲಿಸಿದ್ದಾರೆ. ಒಂದು ವಾರದ ಹಿಂದೆ ವರ್ತಿಕಾ ಕಟಿಯಾರ್ ನೀಡಿದ ದೂರಿನ ಮೇರೆಗೆ ಕಬ್ಬನ್ ಪಾರ್ಕ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ವರ್ತಿಕಾ ಮದುವೆ : 2010 ನೇ ಸಾಲಿನ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಮಹಾರಾಷ್ಟ್ರ ಮೂಲದ 2009 ನೇ ಬ್ಯಾಚ್ ನ ಐಎಫ್ಎಸ್ ( ಫಾರಿನ್ ಸರ್ವೀಸ್ ) ಅಧಿಕಾರಿ ನಿತೀನ್ ಸುಭಾಸ್ ಅವರನ್ನು ಪ್ರೀತಿಸಿ 2011 ರಲ್ಲಿ ಮದುವೆಯಾಗಿದ್ದರು, ನಿತಿನ್ ಕೊಲಂಬೋ ಸೇರಿದಂತೆ ವಿದೇಶಿ ರಾಯಭಾರ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮದುವೆಯಾದ ಕೆಲವೇ ದಿನಕ್ಕೆ ಇಬ್ಬರ ನಡುವೆ ವೈಮನಸ್ಯ ಉಂಟಾಗಿತ್ತು. ಇದೀಗ ಪತಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ ? : ನಾನು ಮತ್ತು ನಿತಿನ್ ಯೊಲಾ ಇಬ್ಬರೂ 2011 ನವೆಂಬರ್ ನಲ್ಲಿ ಮಹಾರಾಷ್ಟ್ರದಲ್ಲಿ ಮದುವೆಯಾದೆವು. ಅದ್ಧೂರಿ ನಿಶ್ಚಿತಾರ್ಥ ಮತ್ತು ಮದುವೆಯ ವೆಚ್ಚವನ್ನು ನಮ್ಮ ಕುಟುಂಬವೇ ಭರಿಸಿತ್ತು. ಮದುವೆ ವೇಳೆ ಚಿನ್ನದ ಆಭರಣ ನೀಡುವಂತೆ ನನ್ನ ಗಂಡನ ಕುಟುಂಬದವರು ಬೇಡಿಕೆ ಇಟ್ಟಿದ್ದರು. ಮದುವೆಯ ಬಳಿಕ ನನ್ನನ್ನು ಕೆಟ್ಟ ಪದಗಳಿಂದ ನನ್ನ ಗಂಡನ ಕಡೆಯವರು ನಿಂದನೆ ಮಾಡುತ್ತಿದ್ದರು. ಯಾವುದೇ ಕಾರಣ ಇಲ್ಲದಿದ್ದರೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಮದುವೆಯಾದ ಮೂರೇ ತಿಂಗಳಿಗೆ ವರದಕ್ಷಿಣೆ ನೀಡುವಂತೆ ನನ್ನ ಗಂಡನ ಕಡೆಯವರು ಬೇಡಿಕೆ ಇಟ್ಟರು. ಈ ಕೂಡಲೇ ಮೂರು ಲಕ್ಷ ರೂಪಾಯಿ ಹಣ ನೀಡದಿದ್ದರೆ, ಮದುವೆ ಸಂಬಂಧ ಮುರಿದುಕೊಳ್ಳುವುದಾಗಿ ನನ್ನ ಗಂಡನ ಕಡೆಯವರು ಬೆದರಿಕೆ ಹಾಕಿದರು. ಹೀಗಾಗಿ ಮದುವೆ ಸಂಬಂಧ ಮುರಿದುಕೊಳ್ಳಬಾರದು ಎಂದು ಬಯಿಸಿ ಮೂರು ಲಕ್ಷ ರೂಪಾಯಿ ಹಣವನ್ನು ನಾನು ನೀಡಿದ್ದೇನೆ. ಹೀಗಿದ್ದೂ ಮತ್ತೆ ನನ್ನ ಗಂಡನಿಗೆ ವರದಕ್ಷಿಣೆ ತಂದು ಕೊಡುವಂತೆ ಪೀಡಿಸುತ್ತಿದ್ದರು. ಮದುವೆಯಾದ ಆರಂಭದಿಂದ ಒಂದು ವರ್ಷದ ವರೆಗೂ ಅವರ ಎಲ್ಲಾ ಬೇಡಿಕೆಗಳನ್ನು ಪೂರೈಸಿರುತ್ತೇನೆ.
ನಿತಿನ್ ಅವರ ಅಜ್ಜಿಯ ಮನೆ ಉತ್ತರ ಪ್ರದೇಶದಲ್ಲಿದ್ದು, 2012 ಜುಲೈನಲ್ಲಿ ಐದು ಲಕ್ಷ ರೂ. ನೀಡುವಂತೆ ಕೇಳಿದ್ದು, ಅದನ್ನು ನಾನು ನೀಡಿರುತ್ತೇನೆ. ಈ ಹಣ ವಾಪಸು ನೀಡುವುದಾಗಿ ನನ್ನ ಗಂಡ ಹೇಳಿದ್ದು, ಆತ ನೀಡಿದ ಚೆಕ್ ಬೌನ್ಸ್ ಆಗಿರುತ್ತದೆ. ಕುಡಿತ ಮತ್ತು ಸಿಗರೇಟ್ ಸೇವನೆ ಬಿಡುವಂತೆ ನಾನು ಅನೇಕ ಸಲ ಕೇಳಿಕೊಂಡಿದ್ದೇನೆ. ನನ್ನನ್ನು ಪ್ರಶ್ನಿಸಬಾರದು ಎಂದು ಹೆದರಿಸಿ ಹಿಂಸೆ ನೀಡುತ್ತಿದ್ದರು. ನನಗೆ ಅವಾಚ್ಯ ಪದಗಳಿಂದ ನಿಂದಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದರು. 2016 ರಲ್ಲಿ ನನ್ನ ಗಂಡ ವಾಸವಿದ್ದ ಕೊಲೊಂಬಗೆ ಹೋಗಿದ್ದೆ. ಅಲ್ಲಿ ಮಾರ್ಬಲ್ ಬಾಕ್ಸ್ ನಿಂದ ಹೊಡೆದಿದ್ದು, ನನ್ನ ಕೈ ಮುರಿದಿತ್ತು. ಹೀಗೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಹಿಂಸೆ ನೀಡುತ್ತಿದ್ದ. ಒಮ್ಮೆ ಪ್ರಗ್ಮೆನ್ಸಿಯಾಗಿದ್ದ ವೇಳೆ, ನನ್ನ ಗಂಡ ಮತ್ತು ಅವರ ಕುಟುಂಬ ಹಿಂಶೆ ನೀಡಿ, ಬಲವಂತವಾಗಿ ನನ್ನ ಕುಟುಂಬಕ್ಕೆ ಕಳಿಸಿದರು. 2018 ದೀಪಾವಳಿ ಸಂದರ್ಭದಲ್ಲಿ ನಾನು ಮತ್ತು ನನ್ನ ಗಂಡನ ಕಡೆ ಕುಟುಂಬ ಶ್ರೀಲಂಕಾದ ಕೊಲೊಂಬೊಗೆ ಹೋಗಿದ್ದೆವು. ಈವೇಳೆ ನನ್ನ ಪತಿ ಹಾಗೂ ಮನೆಯವರು ಹೀನಾಯವಾಗಿ ನಡೆಸಿಕೊಂಡು ಅವಾಚ್ಯ ಪದಗಳಿಂದ ನಿಂದನೆ ಮಾಡಿದರು. ಉಡುಗೊರೆ ಕೊಡಲಿಲ್ಲ ಎಂದು ಹಿಂಸೆ ನೀಡಿ, ಡೈವೋರ್ಸ್ ನೀಡುವುದಾಗಿ ಕಿರುಕುಳ ನೀಡಿದರು. ಮನೆ ತೆಗೆದುಕೊಳ್ಳಲಿಕ್ಕೆ 35 ಲಕ್ಷ ರೂಪಾಯಿ ವರದಕ್ಷಿಣೆ ಕೊಡಲಿಕ್ಕೆ ಬೇಡಿಕೆ ಇಟ್ಟಿದ್ದು, ಹೀಗಾಗಿ ನಾನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ.