ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಆಗಿ ರವಿ ಚೆನ್ನಣ್ಣನವರ್ ಅಧಿಕಾರ ಸ್ವೀಕಾರ
Recommended Video

ಬೆಂಗಳೂರು, ಮಾರ್ಚ್ 15: ಖಡಕ್ ಪೊಲೀಸ್ ಅಧಿಕಾರಿಯೆಂದು ಹೆಸರು ಗಳಿಸಿರುವ ರವಿ ಚೆನ್ನಣ್ಣನವರ್ ಅವರು ಇಂದು (ಮಾರಚ್ 15) ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಆಗಿ ಅಧಿಕಾರ ಸ್ವೀಕರಿಸಿದರು.
ಮೈಸೂರು ನಗರ ಎಸ್‌ಪಿ ಆಗಿ ಒಂದೂವರೆ ವರ್ಷದ ಕಾಲ ಕಾರ್ಯ ನಿರ್ವಹಿಸಿದ ರವಿ ಚೆನ್ನಣ್ಣನವರ್ ಅವರನ್ನು ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಲಾಗಿತ್ತು. ನಗರದಲ್ಲಿ ಅಪರಾಧ ವಿಭಾಗಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಖಡಕ್ ಅಧಿಕಾರಿಗಳನ್ನು ನಗರಕ್ಕೆ ವರ್ಗಾಯಿಸುವಂತೆ ಬೇಡಿಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವರ್ಗಾವಣೆ ಆಗಿದೆ ಎನ್ನಲಾಗಿತ್ತು.
ಪಶ್ಚಿಮ ವಿಭಾಗದ ಈ ಹಿಂದಿನ ಡಿಸಿಪಿ ಎಂ.ಎನ್.ಅನುಚೇತಾ ಅವರು ಹೊಸ ಪಶ್ಚಿಮ ವಿಭಾಗದ ಡಿಸಿಪಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಎಂ.ಎನ್.ಅನುಚೇತ ಅವರು ಸಿಸಿಬಿಗೆ ವರ್ಗಾವಣೆಗೊಂಡಿದ್ದಾರೆ.

ನಗರದ ಜ್ಞಾನಭಾರತಿಯ ವಿದ್ಯಾರ್ಥಿಯಾಗಿದ್ದ ರವಿ ಚೆನ್ನಣ್ಣನವರ್ ಅವರು ಈ ಮುಂಚೆಯೂ ಬೆಂಗಳೂರಿನಲ್ಲಿ ಸಿಸಿಬಿ ವಿಭಾಗದಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ ನಗರ ಆಯುಕ್ತರಾಗಿರುವ ಸುನಿಲ್ ಕುಮಾರ್ ಅವರ ಅಧೀನದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ರವಿ ಚೆನ್ನಣ್ಣನವರ್ ಅವರು ' ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಜನರ ನಿರೀಕ್ಷೆಗೆ ತಕ್ಕಂತೆ ಹಾಗೂ ಅಪರಾಧ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತೇನೆ' ಎಂದು ಅವರು ಹೇಳಿದರು.












Click it and Unblock the Notifications