ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

‍ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್ ಅಂದರ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಅಂತಾರಾಷ್ಟ್ರೀಯ ಕರೆಗಳನ್ನು ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್ ಬಂಧಿಸಿದ್ದಾರೆ. ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ನೀಡಿದ ಮಾಹಿತಿಯನ್ನು ಆಧರಿಸಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದರು. ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸರ್ಕಾರ ಹಾಗೂ ಟೆಲಿಕಾಂ ಕಂಪನಿಗಳ ಬೊಕ್ಕಸಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದ ಗ್ಯಾಂಗನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ಮೂಲದ ಡೆನಿಸ್, ಬಿಪಿನ್ ಸೇರಿ ಐವರು ಆರೋಪಿಗಳನ್ನ ಜೈಲಿಗಟ್ಟಲಾಗಿದ್ದು, ಇವರು SIP trunk line ಡಿವೈಸ್ ಇಟ್ಟುಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಖಚಿತ ಮಾಹಿತಿಯನ್ನು ಹೊಂದಿದ್ದ ಸಿಸಿಬಿ ಪೊಲೀಸರು ದಾಳಿಯನ್ನು ನಡೆಸಿದ್ದರು.

ದೇಶದಲ್ಲಿ ಮಹಾ ಮಾನ್ಸೂನ್: ಪ್ರವಾಹಕ್ಕೆ ಸಿಲುಕಿದ ಕೇರಳ, ಕರ್ನಾಟಕ, ತಮಿಳುನಾಡು ದೇಶದಲ್ಲಿ ಮಹಾ ಮಾನ್ಸೂನ್: ಪ್ರವಾಹಕ್ಕೆ ಸಿಲುಕಿದ ಕೇರಳ, ಕರ್ನಾಟಕ, ತಮಿಳುನಾಡು

ಕೋರಮಂಗಲದ ಬಿಜ್ ಹಬ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್‌ನ 1500 ಸಿಪ್ ಪೋರ್ಟಲ್ ಸಂಪರ್ಕ ಪಡೆದು 40 ದಿನಗಳಲ್ಲಿ ಒಟ್ಟು 68 ಲಕ್ಷ ನಿಮಿಷಗಳ ಅಂತಾರಾಷ್ಟ್ರೀಯ ಕರೆಯನ್ನು ಸ್ಥಳೀಯ ಕರೆಯಾಗಿ ಮಾರ್ಪಡಿಸಿದ್ದರು. ಅಂತೆಯೇ ಮೈಕೋ ಲೇಔಟ್ನ ಆರ್ಚರ್ ಟೆಕ್ನಾಲಜಿಯಿಂದ 900 ಸಿಪ್ ಪೋರ್ಟಲ್ ಸಂಪರ್ಕ ಪಡೆದು 60 ದಿನಗಳಲ್ಲಿ ಬರೋಬ್ಬರಿ 24 ಲಕ್ಷ ನಿಮಿಷಗಳ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡಿದ್ದರು.

ಟೈಮ್ ಇನ್ಫೋ ಟೆಕ್ನಾಲಜಿ ಎಂಬ ಕಂಪನಿ

ಅಂತಾರಾಷ್ಟ್ರೀಯ ಕರೆಗಳನ್ನು ಪರಿವರ್ತನೆ ಮಾಡುತ್ತಿದ್ದ ಗ್ಯಾಂಗ್ ಟೈಮ್ ಇನ್ಫೋ ಟೆಕ್ನಾಲಜಿ ಎಂಬ ಕಂಪನಿ ತೆರೆದು ವಂಚಿಸಿದ್ದರು. ಇವರು ಬಳಸುತ್ತಿದ್ದ ಪಿಆರ್‌ಐ ಡಿವೈಸ್ 1 ನಿಮಿಷಕ್ಕೆ ಲಕ್ಷಾಂತರ ಇಂಟರ್‌ನ್ಯಾಷನಲ್ ಕಾಲ್‌ಗಳನ್ನು ಲೋಕಲ್ ಕಾಲ್‌ಗಳಾಗಿ ಪರಿವರ್ತಿಸುತ್ತಿತ್ತು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ವಿಓಐಪಿ(ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್) ಕಾಲ್‌ಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದರು.

 ಅಂತಾರಾಷ್ಟ್ರೀಯ ಕರೆಗಳ ಪರಿವರ್ತನೆ

ಅಂತಾರಾಷ್ಟ್ರೀಯ ಕರೆಗಳ ಪರಿವರ್ತನೆ

ಗಲ್ಫ್ ಕಂಟ್ರಿಗಳಲ್ಲಿ ಡೇಟಾ ಕಾಲನ್ನು ಬೇರೆ ಸರ್ವರ್ ಗೆ ಕಳುಹಿಸಿ ಇಂಟರ್ನೆಟ್ ಸಹಾಯದಿಂದ ಕಾಲ್‌ಗಳನ್ನ ಕನ್ವರ್ಟ್ ಮಾಡುತ್ತಿದ್ದರು. ಟೂರಿಸಂ ಕಸ್ಟಮರ್ ಕೇರ್ ಮಾಡುತ್ತೇವೆ ಎಂದು ಕಂಪನಿ ತೆರೆದು ವಂಚಿಸಿದ್ದ ಆರೋಪಿಗಳು ಸದ್ಯ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ.

ಟೂರಿಸಂ ಕಸ್ಟಮರ್ ಕೇರ್ ಸೆಂಟರ್ ನೆಪ

ಟೂರಿಸಂ ಕಸ್ಟಮರ್ ಕೇರ್ ಸೆಂಟರ್ ನೆಪ

ಗಲ್ಫ್ ಕಂಟ್ರಿಗಳಲ್ಲಿ ಡೇಟಾ ಕಾಲನ್ನು ಬೇರೆ ಸರ್ವರ್ ಗೆ ಕಳುಹಿಸಿ ಇಂಟರ್ನೆಟ್ ಸಹಾಯದಿಂದ ಕಾಲ್‌ಗಳನ್ನ ಕನ್ವರ್ಟ್ ಮಾಡುತ್ತಿದ್ದರು. ಟೂರಿಸಂ ಕಸ್ಟಮರ್ ಕೇರ್ ಮಾಡುತ್ತೇವೆ ಎಂದು ಕಂಪನಿ ತೆರೆದು ವಂಚಿಸಿದ್ದ ಆರೋಪಿಗಳು ಸದ್ಯ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ.

ಸಿಸಿಬಿ ಪಡೆ ಆಕ್ಟೀವ್

ಸಿಸಿಬಿ ಪಡೆ ಆಕ್ಟೀವ್

ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಮಾಹಿತಿ ನೀಡಿದ್ದರಿಂದ ಸಿಸಿಬಿ ಪಡೆ ಆಕ್ಟೀವ್ ಆಗಿತ್ತು. ಕೋರಮಂಗಲ , ಮೈಕೋ ಲೇಔಟ್, ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳ ಮೂಲದ 5 ಆರೋಪಿಗಳು ಜಿಯೋ ಕಂಪನಿಯ SIP Trunk call Devices ಗಳನ್ನು ಪಡೆದು Bizhub Solutions (OPC) PVt.Ltd ಎಂಬ ಕಂಪನಿಯ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ ಸ್ಥಿರ ದೂರವಾಣಿಯನ್ನು ಪಡೆದುಕೊಂಡು ಅನಧಿಕೃತವಾಗಿ ಟೆಲಿಫೋನ್ ಎಕ್ಸ್ ಚೇಂಚ್ ರೀತಿಯಲ್ಲಿ Voice over Internet protocal ಕರೆಗಳನ್ನು ಸ್ಥಳೀಯ GSM ಕರೆಗಳನ್ನಾಗಿ ಪರಿವರ್ತಿಸಿ ದೂರ ಸಂಪರ್ಕ ಇಲಾಖೆಗೆ ವಂಚನೆ ಮಾಡುತ್ತಿದ್ದ ಜಾಲವನ್ನು ತುಂಡರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶದ ಭದ್ರತೆ ಮೇಲೂ ಆತಂಕ

ದೇಶದ ಭದ್ರತೆ ಮೇಲೂ ಆತಂಕ

ಕೇರಳ ಮೂಲದ ಆರೋಪಿಗಳು ಮಾಡುತ್ತಿದ್ದ ಕೃತ್ಯದಿಂದಾಗಿ ದೇಶದ ಆರ್ಥಿಕತೆಗೆ ನಷ್ಟ ಉಂಟಾಗುತ್ತದೆ. ಇನ್ನು ಅಂತಾರಾಷ್ಟ್ರೀಯ ಕರೆಗಳನ್ನು ಲೋಕಲ್ ಕಾಲ್‌ ಆಗಿ ಕನ್ವರ್ಟ್ ಮಾಡುವುದರಿಂದ ಭಯೋತ್ಪಾದಕರು ಇದರ ಉಪಯೋಗವನ್ನು ಪಡೆದುಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆಗಳಿರುತ್ತದೆ. ಇದರಿಂದಾಗಿ ಸಿಸಿಬಿ ಪೊಲೀಸರು ಈ ಹಿಂದೆ ಎರಡ್ಮೂರು ಸಲ ಇಂಥದ್ದೇ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಈಗಲೂ ಅಂತಾರಾಷ್ಟ್ರೀಯ ಕರೆಗಳ ಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

English summary
In Bengaluru, the CCB police have succeeded in arresting a gang that had converted international calls into local calls based on information provided by the Central Government's Department of Telecommunications and dealt a huge blow to the coffers of the government and telecom companies, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X