ನಿರ್ಲಿಪ್ತಳಾದ ವಕೀಲೆ ಶುಭಾಗೆ ಜಾಮೀನು ಸಿಕ್ಕಿದ್ದೇಕೆ?
ಮನೋಶಾಸ್ತ್ರಜ್ಞರು, ಕ್ರಿಮಿನೋಲಾಜಿಸ್ಟ್ ಗಳಿಗೆ ಅಥವಾ ನಮ್ಮ ಚಿತ್ರರಂಗದ ಸತ್ವಯುತ ನಿರ್ದೇಶಕರಿಗೆ ಶುಭಾ ಜೀವಂತ ಕಥಾವಸ್ತುವಾಗಬಲ್ಲ ವಕೀಲೆ ಶುಭಾ ಇನ್ನೂ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶುಭಾ ಮಾತನಾಡುವುದೇ ಕಮ್ಮಿ. ಜೈಲಿನಲ್ಲಿದ್ದುಕೊಂಡೇ ವಕಿಲೀಕೆ ಅಧ್ಯಯನ ಮುಗಿಸಿದ ಶುಭಾಗೆ ಸುಪ್ರೀಂಕೋರ್ಟ್ ಜಾಮೀನು ನೀಡಲು ಪ್ರಮುಖ ಕಾರಣವಾದರೂ ಏನು? ಮುಂದೆ ಓದಿ
2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ಇಂಟೆಲ್ ಟೆಕ್ಕಿ ಬಿ.ವಿ ಗಿರೀಶ್ (27) ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, 2004ರಲ್ಲಿ ಆರೋಪಿಗಳ ಬಂಧನವಾಗಿತ್ತು.
2010ರಲ್ಲಿ ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ 17 ನೇ ತ್ವರಿತ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಹಿಂದೆ ನವೆಂಬರ್ 11, 2011ರಲ್ಲಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ಶುಭಾಗೆ ಬೇಲ್ ನೀಡಲು ನಿರಾಕರಿಸಿತ್ತು.[ಶುಭಾಗೆ ಸಿಕ್ತು ಜಾಮೀನು]
ಶುಭಾ ತನ್ನ ಪ್ರಿಯಕರ ಅರುಣ್ ನನ್ನು ವರಿಸಬೇಕಿದ್ದರೆ, ನಿಶ್ಚಿತಾರ್ಥ ನಂತರ ಭಾವಿಪತಿಗೆ ನನಗೆ ನೀವು ಇಷ್ಟವಿಲ್ಲ ಎನ್ನಬಹುದಿತ್ತು. ಆದರೆ, ಕೊಲೆ ಮಾಡಿದ್ದೇಕೆ? ಕೊಲೆ ಮಾಡಿದರೂ ಯಾವುದೇ ಭಾವನೆ ವ್ಯಕ್ತಪಡಿಸದೆ ಕಲ್ಲು ಮನಸ್ಸು ಮಾಡಿಕೊಂಡಿದ್ದ ಶುಭಾ ಇಷ್ಟು ವರ್ಷ ಜೈಲಿನಲ್ಲಿ ಪಾಪಪ್ರಜ್ಞೆಯಿಂದ ಕಾಲದೂಡಿದ್ದು ಎಂಬ ಕಾರಣದಿಂದ ಮಾನವೀಯತೆ ದೃಷ್ಟಿಯಿಂದ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಕ್ರಿಮಿನಲ್ ಮೈಂಡ್ ಶುಭಾ
ಮಾಸ್ಟರ್ ಪ್ಲ್ಯಾನ್ ಮಾಡಿ ಗಿರೀಶ್ ಕೊಂದ ಶುಭಾ ವಿವೇಕ ನಗರ ಇನ್ಸ್ ಪೆಕ್ಟರ್ ತನಿಖಾಧಿಕಾರಿ ಕೆಎ ನಾಣಯ್ಯ ಅವರೇ ತಲೆದೂಗುತ್ತಾರೆ. ಕೊಲೆಗೂ ಮುನ್ನ ಔಟರ್ ರಿಂಗ್ ರೋಡ್ ಸ್ಟಡಿ ಮಾಡಿದ್ದ ಶುಭಾ, ಅಲ್ಲಿ ಕಳ್ಳಕಾಕರ ಹಾವಳಿಯನ್ನು ಖಾತ್ರಿ ಪಡಿಸಿಕೊಂಡಿದ್ದಳು.
ಕಳ್ಳ ಬಂದು ಹಿಂದಿನಿಂದ ರಾಡ್ ನಲ್ಲಿ ಹೊಡೆದ ನನಗೇನು ಗೊತ್ತಿಲ್ಲ ಎಂದು ಕಥೆ ಕಟ್ಟುವಾಗ ಮಾತ್ರ ಶುಭಾ ಚಂಚಲಾಗಿದ್ದಳು. ಯೋಜನೆ ಪೂರ್ಣವಾದ ಮೇಲೆ ಮುಂದಿನ ಪರಿಣಾಮದ ಬಗ್ಗೆ ಸರಿಯಾಗಿ ಪ್ಲ್ಯಾನ್ ಮಾಡಲು ಮರೆತಿದ್ದು ಆಕೆಗೆ ಮುಳುವಾಯಿತು. ಪ್ರಿಯಕರ ಅರುಣ್ ವರ್ಮಾ ಗೆ ಪ್ರತಿಕ್ಷಣ ಮೆಸೇಜ್ ಕಳಿಸುತ್ತಾ ಜಿಪಿಎಸ್ ರೀತಿಯಲ್ಲಿ ಎಲ್ಲವನ್ನೂ ಟ್ರ್ಯಾಕ್ ಮಾಡುತ್ತಿದ್ದಳು.

ಆದ್ರೆ, ಕೇಸ್ ಸುಲಭ ಇರಲಿಲ್ಲ
ಆಕೆ ಎಸ್ಸೆಂಎಂಸ್, ಕಾಲ್ ರಿಜಿಸ್ಟ್ರಿ ಕೈಗೆ ಸಿಕ್ಕರೂ ಕೋರ್ಟ್ ತಲುಪುವಾಗ ಬದಲಾಗಿತ್ತು. ಆದರೆ, ನಂತರ ಅಸಲಿ ಕಾಲ್ ರಿಜಿಸ್ಟ್ರಿ ಕೈ ತಲುಪಿತು. ಅರುಣ್ ತನ್ನ ಕಸಿನ್ ದಿನೇಶ್ ಹಾಗೂ ಸ್ಥಳೀಯ ಗೂಂಡಾ ವೆಂಕಟೇಶ್ ಕರೆ ಆಧಾರವಾಗಿ ಸಿಕ್ಕಿತು. ಜನವರಿ 2004ರಲ್ಲಿ ನಾಲ್ವರನ್ನು ಬಂಧಿಸಿ ವಿಚಾರಿಸಿದಾಗ ಸತ್ಯ ಹೊರಬಿದ್ದಿತು.
ಕೊಲೆಗೂ ಕೆಲ ದಿನಗಳ ಮುನ್ನ ಗಿರೀಶ್ ಜೊತೆ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥಕ್ಕೆ ಅರುಣ್ ಕೂಡಾ ಬಂದಿದ್ದ. ಅರುಣ್ ಬಂದ ಮೇಲೆ ಆಕೆ ಮುಖದಲ್ಲಿ ಮೂಡಿದ ಮಂದಹಾಸ ಕಂಡ ಪೊಲೀಸರಿಗೆ ಎಲ್ಲವೂ ಅರ್ಥವಾಗಿತ್ತು.

ಭಾವಿಪತಿಗೆ ನನಗೆ ನೀವು ಇಷ್ಟವಿಲ್ಲ ಎನ್ನಬಹುದಿತ್ತು
ಶುಭಾ ತನ್ನ ಪ್ರಿಯಕರ ಅರುಣ್ ನನ್ನು ವರಿಸಬೇಕಿದ್ದರೆ, ನಿಶ್ಚಿತಾರ್ಥ ನಂತರ ಭಾವಿಪತಿಗೆ ನನಗೆ ನೀವು ಇಷ್ಟವಿಲ್ಲ ಎನ್ನಬಹುದಿತ್ತು. ಅಷ್ಟು ಸಲಿಗೆ ಶುಭಾ ಹಾಗೂ ಗಿರೀಶ್ ಮಧ್ಯೆ ಇತ್ತು. ಚಿಕ್ಕಂದಿನಿಂದ ಪರಸ್ಪರ ಪರಿಚಯವಿದ್ದಿದ್ದರಿಂದ ಶುಭಾಳ ಕೋರಿಕೆಗೆ ಸರಳ ಸ್ವಭಾವ ಗಿರೀಶ್ ಕೂಡಾ ಒಪ್ಪಿರುತ್ತಿದ್ದ ಆದರೆ, ನಿಶ್ಚಿತಾರ್ಥಕ್ಕೆ ಮೊದಲೇ ಮೂರು ಬಾರಿ ಗಿರೀಶ್ ಕೊಲೆಗೆ ಯತ್ನ ನಡೆಸಿದ್ದ ಶುಭಾ ತನ್ನ ಪೈಶಾಚಿಕ ಕೃತ್ಯವನ್ನು ಪೂರೈಸುವ ನಿರ್ಧಾರ ಮಾಡಿಯಾಗಿತ್ತು.

ಮುಂದೇನಾಗುವುದೋ ಕಾದು ನೋಡೋಣ
ನೀರಜ್ ಗ್ರೋವರ್ ನನ್ನು ಕತ್ತರಿಸಿಕೊಂದ ಮರಿಯಾ ಮೋನಿಕಾ ಸುಸೈರಾಜ್ ಗೆ ಜಾಮೀನು ಸಿಕ್ಕಿದೆ ಎಂದ ಮೇಲೆ ಕೊಲೆಗೆ ಸಂಚು ಹಾಗೂ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕೆ ಸರಿಯಾದ ಸಾಕ್ಷಿ ಇಲ್ಲದ ಕಾರಣ, ಅಲ್ಲದೆ ಈಗಾಗಲೇ ಪಶ್ಚಾತ್ತಾಪ? ದಿಂದ ಕಾರಾಗೃಹವಾಸ ಅನುಭವಿಸಿರುವುದರಿಂದ ಶುಭಾಗೆ ಜಾಮೀನು ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಸಿವಿ ನಾಗೇಶ್ ಅವರು ಜಾಮೀನು ಕೊಡಿಸಿರುವುದರಿಂದ ಕೋರ್ಟ್ ಅನುಮತಿ ಪಡೆದು ವಿದೇಶಕ್ಕೆ ಹಾರುವ ಯೋಜನೆಯೂ ಶುಭಾ ಅವರಿಗಿದೆ. ಮುಂದೇನಾಗುವುದೋ ಕಾದು ನೋಡೋಣ
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications