ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 1,918 ಕೋಟಿ ಹೂಡಿಕೆ ಮಾಡಲಿದೆ ಇನ್ಫೋಸಿಸ್‌

|
Google Oneindia Kannada News

ಬೆಂಗಳೂರು, ಆ. 30 : ಕರ್ನಾಟಕ ಮೂಲದ ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್‌ನ ಮೂರು ಯೋಜನೆಗಳಿಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಮೂರು ಯೋಜನೆಗಳು ಬೆಂಗಳೂರಿನಲ್ಲಿ ಆರಂಭವಾಗಲಿದ್ದು, 27 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ನಡೆದ ರಾಜ್ಯ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಒಂದು ವಿಶೇಷ ಆರ್ಥಿಕ ವಲಯ ಮತ್ತು ಎರಡು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಯೋಜನೆಗಳಲ್ಲಿ ಇನ್ಫೋಸಿಸ್ 1,918 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುತ್ತಿದೆ. [ಇನ್ಫೋಸಿಸ್ Q1: ಆದಾಯ 12%, ಲಾಭ 5% ಏರಿಕೆ]

Infosys

ಯೋಜನೆ 1 : ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್) ಸ್ಥಾಪನೆಯಾಗಲಿದೆ.
ಬೇಗೂರು ಹೋಬಳಿಯ ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೋಗೂರು ಗ್ರಾಮದ ವಿವಿಧ ಸರ್ವೆ ನಂಬರ್‌ಗಳ 10.04 ಎಕರೆ ಜಮೀನಿನಲ್ಲಿ 625 ಕೋಟಿ ರೂ. ವೆಚ್ಚದಲ್ಲಿ ಎಸ್‌ಇಝೆಡ್ ಸ್ಥಾಪನೆಯಾಗಲಿದೆ. ['ಸ್ಕಾವಾ' ಖರೀದಿಸಿದ ಐಟಿ ದಿಗ್ಗಜ ಇನ್ಫೋಸಿಸ್]

ಯೋಜನೆ 2 : ಕೋನಪ್ಪನ ಅಗ್ರಹಾರ ಗ್ರಾಮದಲ್ಲಿ ಐದು ಎಕರೆ ಜಮೀನಿನಲ್ಲಿ ಸಾಫ್ಟ್‌ವೇರ್ ಟೆಕ್ನಾಜಲಿ ಪಾರ್ಕ್ ಸ್ಥಾಪನೆಯಾಗಲಿದ್ದು, 1,079 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿ 15 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.

bengaluru

ಯೋಜನೆ 3 : ಎಲೆಕ್ಟ್ರಾನಿಕ್‌ ಸಿಟಿ 2ನೇ ಹಂತದಲ್ಲಿ 3.5 ಎಕರೆ ಪ್ರದೇಶದಲ್ಲಿ 216 ಕೋಟಿ ರೂ. ವೆಚ್ಚದಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪನೆಯಾಗಲಿದ್ದು, 3,500 ಉದ್ಯೋಗ ಸೃಷ್ಟಿಯಾಗಲಿದೆ.

English summary
Infosys Ltd will set up three more campuses in Bengaluru at an investment of Rs 1,918 crore. The state high level clearance committee chaired by Karnataka chief minister Siddaramaiah cleared the three IT projects of Infosys. Three projects will create 27,000 jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X