ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ರಾಗಿಮುದ್ದೆ, ಸೊಪ್ಪುಸಾರು!
Recommended Video

ಬೆಂಗಳೂರು, ಫೆಬ್ರವರಿ 20 : ಮುಂದಿನ ವಾರದಿಂದ ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಬದಲಾವಣೆ ಮಾಡುತ್ತಿದ್ದು, ರಾಗಿ ಮುದ್ದೆ ಮತ್ತು ಸೊಪ್ಪಿನ ಸಾಂಬಾರ್ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ಕೆಲ ಕ್ಯಾಂಟೀನ್ ಗಳಲ್ಲಿ ಪ್ರಾಯೋಗಿಕವಾಗಿ ಮುದ್ದೆ ಊಟ ವಿತರಿಸುತ್ತಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಇದುವರೆಗೆ ಹನುಮಂತನಗರದಲ್ಲಿ ನಡೆಯುತ್ತಿರುವ ಅಪ್ಪಾಜಿ ಕ್ಯಾಂಟೀನ್ ಲ್ಲಿ ಮಾತ್ರ ಹಾಗೂ ಸೊಪ್ಪಿನ ಸಾರು ನೀಡಲಾಗುತ್ತಿತ್ತು. ಈಗ ಇಂದಿರಾ ಕ್ಯಾಂಟೀನ್ ನಲ್ಲಿಯೂ ಮುದ್ದೆ ಊಟ ಸಿಗಲಿದೆ.ಇಂದಿರಾ ಕ್ಯಾಂಟೀನ್ ಗಳಿಗೆ ಮೊದಲಿನಷ್ಟು ಜನ ಬರುತ್ತಿಲ್ಲ. ಹಾಗಾಗಿ ಹೆಚ್ಚು ಜನರು ಬರುವಂತೆ ಮಾಡಲು ಇದೊಂದು ಪ್ರಯತ್ನ ಎಂದರು.
ಸಾರ್ವಜನಿಕರು ಮೆನು ಬದಲಾವಣೆ ಕೋರಿ ಮನವಿ ಮಾಡಿಕೊಂಡಿದ್ದಾರೆ. ಅದೆಲ್ಲವನ್ನೂ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.ಕೆಲವು ಮೊಸರನ್ನದ ಬದಲಿಗೆ ಸಿಹಿ ತಿಂಡಿ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ.

ಅಲ್ಲದೇ ಮುದ್ದೆ ಊಟ ನೀಡುವಂತೆ ಬೇಡಿಕೆ ಬಂದಿದೆ. ಹಾಗಾಗಿ ಬ್ಯಾಟರಾಯನಪುರ ಕ್ಷೇತ್ರದ ಐದಾರು ವಾರ್ಡ್ ಗಳಲ್ಲಿ ಮುದ್ದೆ, ಸೊಪ್ಪಿನ ಸಾಂಬಾರ್ ನೀಡಲಾಗುತ್ತಿದೆ. ಮುದ್ದೆ ತಯಾರಿಕೆಗಾಗಿಯೇ ಮೈಸೂರಿನಿಂದ ಯಂತ್ರ ಖರೀದಿಸಿ ತರಲಾಗಿದೆ. ಇದರಲ್ಲಿ ಒಂದು ತಾಸಿಗೆ 250 ಮುದ್ದೆ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯ ನಾಗರಿಕರಿಗೆ ಉಚಿತ ಬಿಡಿಯೂಟ: ಬಿಬಿಎಂಪಿ ವ್ಯಾಪ್ತಿಯ198 ವಾರ್ಡ್ ಗಳಲ್ಲೂ ತಲಾ 50 ಮಂದಿ ಹಿರಿಯ ನಾಗರಿಕರಿಗೆ ಉಚಿತವಾಗಿ ಇಂದಿರಾ ಕ್ಯಾಂಟೀನ್ ನಿಂದ ಬಿಸಿಯೂಟ ನೀಡುವ ಪ್ರಸ್ತಾವನೆಗೆ ಕೌನ್ಸಿಲ್ ಸಭೆ ಅನುಮೋದನೆ ನೀಡಿದೆ. ಪ್ರತಿಯೊಂದು ವಾರ್ಡ್ ನಲ್ಲಿ50 ಮಂದಿ ಹಿರಿಯ ನಾಗರಿಕರನ್ನು ಆಯ್ಕೆ ಮಾಡಿ, ಇಂದಿರಾ ಕ್ಯಾಂಟೀನ್ ಗಳಲ್ಲಿ ಬಿಸಿಯೂಟ ನೀಡಲಾಗುತ್ತದೆ ಇದಕ್ಕಾಗಿ ಪ್ರತ್ಯೇಕವಾಗಿ ಟೋಕನ್ ನಿರ್ಧರಿಸಲಾಗಿದೆ. ಕಲ್ಯಾಣ ವಿಭಾಗವು ಪ್ರತಿ ಊಟಕ್ಕೆ 20 ರೂ ಭರಿಸಲಿದೆ..












Click it and Unblock the Notifications