ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಕ್ಯಾಂಟೀನ್‌ಗೆ ಹಣ ನೀಡದ ಸರ್ಕಾರ, ಇಕ್ಕಟ್ಟಿನಲ್ಲಿ ಬಿಬಿಎಂಪಿ

By Nayana
|
Google Oneindia Kannada News

ಬೆಂಗಳೂರು, ಜೂನ್‌ 26: ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಸರ್ಕಾರ ಹಣ ನೀಡದೆ ಬಿಬಿಎಂಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಹೀಗಾಗಿ ಯೋಜನೆಗೆ ಅಗತ್ಯವಿರುವ ಹಣವನ್ನು ಬಿಬಿಎಂಪಿ ತನ್ನ ಆದಾಯದಿಂದ ಪಾವತಿಸುವಂತಾಗಿದೆ. 2017-18ನೇ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಹಾಗೂ ನಿರ್ವಹಣೆಗಾಗಿ ಪಾಲಿಕೆಗೆ 100 ಕೋಟಿ ರೂ. ಗಳನ್ನು ಸರ್ಕಾರ ನೀಡಿತ್ತು. ಆದರೆ, ಕ್ಯಾಂಟೀನ್‌ ನಿರ್ಮಾಣ ಕಾಮಗಾರಿಗೆ 87.73 ಕೋಟಿ ಹಾಗೂ ನಿರ್ವಹಣೆಗೆ 33.78 ಕೋಟಿ ರೂ. ಸೇರಿ ಒಟ್ಟು 121.51 ಕೋಟಿ ರೂ. ವೆಚ್ಚ ಮಾಡಲಾಗಿದೆ.

'ಇಂದಿರಾ ಕ್ಯಾಂಟೀನ್ ಮುಚ್ಚಲ್ಲ, ಅನ್ನಭಾಗ್ಯಕ್ಕೆ ಇಲ್ಲ ಕನ್ನ''ಇಂದಿರಾ ಕ್ಯಾಂಟೀನ್ ಮುಚ್ಚಲ್ಲ, ಅನ್ನಭಾಗ್ಯಕ್ಕೆ ಇಲ್ಲ ಕನ್ನ'

ಹೀಗಾಗಿ ಬಿಬಿಎಂಪಿಯಿಂದ ಹೆಚ್ಚುವರಿಯಾಗಿ 21.51 ಕೋಟಿ ರೂ,ಗಳನ್ನು ಕ್ಯಾಂಟೀನ್‌ಗೆ ಭರಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ. 2018-19ನೇ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್‌ಗಾಗಿ ಸರ್ಕಾರದ ಬಜೆಟ್‌ನಲ್ಲಿ 120 ಕೋಟಿ ರೂ. ಮೀಸಲಿಟ್ಟಿದೆ.

Indira canteen BBMP cries for fund

ಆದರೆ, ಈವರೆಗೆ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ ಈ ವರ್ಷದ ನಿರ್ವಹಣೆಗಾಗಿ ಗುತ್ತಿಗೆ ಸಂಸ್ಥೆಗೆ ಬಿಬಿಎಂಪಿಯಿಂದಲೇ 14.74 ಕೋಟಿ ರೂ. ನೀಡಲಾಗಿದೆ. ಇದರಿಂದಾಗಿ ಬಿಬಿಎಂಪಿಗೆ ಆರ್ತೀಕ ಹೊರೆಯಾಗುತ್ತಿದೆ ಎಂದು ದೂರಿದರು.

English summary
Around two hundred Indira canteens in Bangalore run by BBMP have crying for fund since this financial year which have become burden on the corporation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X