ಕೇವಲ 6 ಜನರಿಗಾಗಿ ಹಾರಲು ನಿರಾಕರಿಸಿದ ಇಂಡಿಗೋ ವಿಮಾನ, ರಾತ್ರಿಯಿಡೀ ಏರ್‌ಪೋರ್ಟ್‌ನಲ್ಲಿ ಕಳೆದ ಪ್ರಯಾಣಿಕರು!
ಬೆಂಗಳೂರು, ನವೆಂಬರ್ 21: ಇಂಡಿಗೋ ವಿಮಾನಯಾನ ಸಂಸ್ಥೆಯು ಕೇವಲ ಆರು ಪ್ರಯಾಣಿಕರಿಗಾಗಿ ತಮ್ಮ ವಿಮಾನವನ್ನು ಹಾರಿಸಲು ನಿರಾಕರಿಸಲಾಯಿತು. ಬಳಿಕ ಚೆನ್ನೈಗೆ ಹೋಗುವ ವಿಮಾನದಿಂದ ಪ್ರಯಾಣಿಕರನ್ನು ಹೊರಬರುವಂತೆ ಮಾಡಲಾಯಿತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಇಬ್ಬರು ವಯೋವೃದ್ಧರನ್ನು ಒಳಗೊಂಡಂತೆ ಆರು ಮಂದಿ ಪ್ರಯಾಣಿಕರನ್ನು ಭಾನುವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಹೊರಬರಲು ಇಂಡಿಗೋದ ಗ್ರೌಂಡ್ ಸಿಬ್ಬಂದಿ ಹೇಳಿದರು. ಸಿಬ್ಬಂದಿ ಅವರನ್ನು ಇನ್ನೊಂದು ವಿಮಾನದಲ್ಲಿ ಕಳುಹಿಸಲು ಭರವಸೆ ನೀಡಿದರು.

ಆದರೆ ಅವರು ಭರವಸೆ ನೀಡಿದಂತೆ ಭಾನುವಾರ ರಾತ್ರಿ ಚೆನ್ನೈಗೆ ಬೇರೆ ಯಾವುದೇ ವಿಮಾನ ಇರಲಿಲ್ಲ. ಕೊನೆಗೆ ಪ್ರಯಾಣಿಕರು ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲಿ ಉಳಿದು ಮರುದಿನ ವಿಮಾನ ಪ್ರಯಾಣ ಮಾಡಬೇಕಾಯಿತು. ಆರು ಪ್ರಯಾಣಿಕರು ಇಂಡಿಗೋ ಅವರಿಗೆ ವಿಮಾನ ನಿಲ್ದಾಣದ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಲಿಲ್ಲ ಎಂದು ಅವರು ಹೇಳಿದರು.
ಪ್ರಯಾಣಿಕರಿಗೆ ವಸತಿ ವ್ಯವಸ್ಥೆ ಮಾಡಲೇ ಇಲ್ಲ:
ಭಾನುವಾರ ರಾತ್ರಿ 9.30 ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಅಮೃತಸರದಿಂದ ಬೆಂಗಳೂರಿನ ಮೂಲಕ ಚೆನ್ನೈಗೆ ಇಂಡಿಗೋ ವಿಮಾನ 6E478 ನಲ್ಲಿ ಈ ಘಟನೆ ನಡೆದಿದೆ. ಘಟನೆಯನ್ನು ದೃಢಪಡಿಸಿದ ಇಂಡಿಗೋ ಮೂಲಗಳು, ಇಬ್ಬರು ಪ್ರಯಾಣಿಕರು ವಿಮಾನ ನಿಲ್ದಾಣದಿಂದ 13 ಕಿಮೀ ದೂರದಲ್ಲಿರುವ ಹೋಟೆಲ್‌ನಲ್ಲಿ ರಾತ್ರಿ ಉಳಿದುಕೊಂಡಿದ್ದರೆ, ಇತರರು ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ತಂಗಿದ್ದರು. "ಎಲ್ಲರಿಗೂ ಸೋಮವಾರ ಬೆಳಿಗ್ಗೆ ವಿಮಾನಗಳಲ್ಲಿ ಅವಕಾಶ ಕಲ್ಪಿಸಲಾಯಿತು ಮತ್ತು ಚೆನ್ನೈಗೆ ಕಳುಹಿಸಲಾಯಿತು" ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಇದನ್ನು ಪ್ರಯಾಣಿಕರು ಶುದ್ಧ ಸುಳ್ಳು ಎಂದು ಅಲ್ಲಗೆಳೆದರು. ಅವರು ತಮಗಾದ ಅನಾನುಕೂಲತೆಗಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. "ಇಂಡಿಗೋ ಗ್ರೌಂಡ್ ಸಿಬ್ಬಂದಿಯಿಂದ ನನ್ನ ಮೊಬೈಲ್ ಫೋನ್‌ಗೆ ಕರೆ ಬಂದಾಗ ನಾನು ಸೇರಿದಂತೆ ಆರು ಮಂದಿ ವಿಮಾನದಲ್ಲಿದ್ದರು. ಅವರು ಮತ್ತೊಂದು ವಿಮಾನಕ್ಕಾಗಿ ನನ್ನ ಬೋರ್ಡಿಂಗ್ ಪಾಸ್‌ನೊಂದಿಗೆ ವಿಮಾನ ನಿಲ್ದಾಣದ ಒಳಗೆ ನನಗಾಗಿ ಕಾಯುತ್ತಿರುವಾಗ ವಿಮಾನದಿಂದ ಇಳಿಯುವಂತೆ ನನಗೆ ಹೇಳಿದರು. ಚೆನ್ನೈಗೆ ಹೊರಡಲು ಸಿದ್ಧವಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದರು. ಇತರ ಐದು ಪ್ರಯಾಣಿಕರಿಗೂ ಇದೇ ರೀತಿಯ ಫೋನ್ ಕರೆಗಳು ಬಂದವು ಮತ್ತು ವಿಮಾನವನ್ನು ಡಿ-ಬೋರ್ಡ್ ಮಾಡಲು ಹೇಳಲಾಯಿತು ಎಂದರು.
ಇಂಡಿಗೋ ಮೌನ:
ತಮನ್ನು ಇಳಿಯುವ ಸೂಚಿಸಿದ ಬಳಿಕ ಪ್ರಯಾಣಿಕರು ಇಂಡಿಗೋ ಸಿಬ್ಬಂದಿಯನ್ನು ಪತ್ತೆಹಚ್ಚಿದರು. ವಿಮಾನಯಾನ ಸಂಸ್ಥೆಯಿಂದ ತಮಗೆ ಅನ್ಯಾಯವಾಗಿದೆ ಎಂದು ಕಂಡುಕೊಂಡರು. "ವಿಮಾನ ನಿಲ್ದಾಣದಲ್ಲಿ ಇಂಡಿಗೋದ ಸಹಾಯಕ ವ್ಯವಸ್ಥಾಪಕ ಲಾಯ್ಡ್ ಪಿಂಟೋ ಬಂದರು. ಆದರೆ ಅವರು ಕೂಡ ತಣ್ಣಗಾಗಿದ್ದರು. ಎಲ್ಲ ಪ್ರಯಾಣಿಕರ ಬಗ್ಗೆ ಸಹ ಯಾವುದೇ ಸಹಾನುಭೂತಿ ವ್ಯಕ್ತಪಡಿಸಲಿಲ್ಲ. ಅಂತಿಮವಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡ ನಂತರವೂ ಅವರು ನಮಗೆ ವಿಮಾನ ನಿಲ್ದಾಣದ ಹೋಟೆಲ್ ಅನ್ನು ಬುಕ್ ಮಾಡಲು ಮುಂದಾಗಲಿಲ್ಲ. ಈ ಬಗ್ಗೆ ಇಂಡಿಗೋ ಇನ್ನೂ ಅಧಿಕೃತ ಸ್ಪಷ್ಟೀಕರಣವನ್ನು ನೀಡಿಲ್ಲ.












Click it and Unblock the Notifications