Get Updates
Get notified of breaking news, exclusive insights, and must-see stories!

Indigo: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 'ಇಂಡಿಗೋ MRO ಕೇಂದ್ರ': 1,100 ಕೋಟಿ ರೂ.ಹೂಡಿಕೆ

ಬೆಂಗಳೂರು, ಮೇ 31: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕೈಗಾರಿಕೆ, ಇನ್ನಿತರ ವಲಯಗಳಿಂದ ವ್ಯಾಪಕ ಹೂಡಿಕೆ ಹರಿದು ಬರುತ್ತಿದೆ. ಇದೀಗ ಆ ಸಾಲಿಗೆ ವೈಮಾನಿಕ ಸಂಸ್ಥೆ 'ಇಂಡಿಗೋ' ಸಂಸ್ಥೆ ಸೇರಿದೆ. ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲು ಮುಂದಾಗಿದೆ. ಇದರಿಂದ ಕರ್ನಾಟಕವನ್ನು ಏಷ್ಯಾದ 'ಎಂಆರ್‌ಒ' ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ನಮ್ಮ ಮುನ್ನೋಟ ಬಲಪಡಿಸಲು ಸಹಾಯವಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂಡಿಗೊ ಹೂಡಿಕೆ ನಿರ್ಧಾರವನ್ನು ಸ್ವಾಗತಿಸಿ ಅವರು ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ದೇಶಿ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ- ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ- MRO ಸೌಲಭ್ಯ (ಘಟಕ) ಆರಂಭಿಸಲು ಸಜ್ಜಾಗಿದೆ. ಈ ಸಂಬಂಧ ಬರೋಬ್ಬರಿ ₹1,100 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಮಾಡಲಿದೆ ಎಂದು ಸಚಿವರು ವಿವರಿಸಿದರು.

IndiGo amp amp BIAL Join Hands for MRO Hub at Bengaluru Airport With Rs 1 100 Crore Investment

ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಅತ್ಯಾಧುನಿಕ 'ಎಂಆರ್‌ಒ' ಸೌಕರ್ಯ ತಲೆಎ ಎತ್ತಲಿದೆ. ಈ ಮಹತ್ವದ ನಿರ್ಧಾರವು ಕರ್ನಾಟಕ ರಾಜ್ಯವನ್ನು ಏಷ್ಯಾದ 'ಎಂಆರ್‌ಒ' ರಾಜಧಾನಿಯನ್ನಾಗಿ ಮಾಡಬೇಕೆಂಬ ಮಹತ್ತರ ಕನಸಿಗೆ ನೀರೆರೆದಂತಾಗಿದೆ. ಇದರಿಂದ ರಾಜ್ಯದಲ್ಲಿ ಉನ್ನತ ಗುಣಮಟ್ಟದ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಬೆಂಗಳೂರಿನಲ್ಲಿ ಜಾಗತಿಕ ಸ್ಪರ್ಧಾತ್ಮಕ ವಿಮಾನಯಾನ ಕ್ಷೇತ್ರ ಅಭಿವೃದ್ಧಿಪಡಿಸುವ ಪ್ರಕ್ರಿಯೆಗೆ ಮತ್ತಷ್ಟು ವೇಗ ಸಿಕ್ಕಂತಾಗುತ್ತದೆ ಎಂದು ಅವರು ಅಭಿಪ್ರಾಐ ಹೊರ ಹಾಕಿದರು.

ವಿಮಾನ ಕ್ಷೇತ್ರದಲ್ಲಿ ಬೆಂಗಳೂರಿಗೆ ನಾಯಕತ್ವ ಸ್ಥಾನ

ಭವಿಷ್ಯದಲ್ಲಿ ರಾಜಧಾನಿ 'ಏಷ್ಯಾದ ಎಂಆರ್‌ಒ ಕೇಂದ್ರ'ವಾಗಿ ಗುರುತಿಸಿಕೊಳ್ಳಿದೆ. ರಾಜ್ಯವು ವಿಮಾನಯಾನ ಮೂಲಸೌಲಭ್ಯ ಕ್ಷೇತ್ರದಲ್ಲಿ ಪ್ರಾದೇಶಿಕ ನಾಯಕತ್ವಕ್ಕೆ ಪಾತ್ರವಾಗಲಿದೆ. ಕೈಗಾರಿಕಾ ಬೆಳವಣಿಗೆ ಆಗಲಿದೆ. ವೈಮಾಂತರಿಕ್ಷ ವಲಯದ ಅಭಿವೃದ್ಧಿ ಮತ್ತು ವಿಮಾನಯಾನ ಕ್ಷೇತ್ರದ ತಯಾರಿಕೆಗೆ ಉತ್ತೇಜನ ಸಿಗುತ್ತದೆ. ಇದೆಲ್ಲ ಬೆಳವಣಿಗೆಗೆ ರಾಜ್ಯ ಸರ್ಕಾರ ಸಹಕಾರ ನೀಡಲಿದೆ ಎಂದರು.

ಇಂಡಿಗೋ ಸಂಸ್ಥೆಯ 1,100 ಕೋಟಿ ರೂಪಾಯಿ ಹೂಡಿಕೆಯು ಕೆಐಎ ನಲ್ಲಿರುವ 31 ಎಕರೆ ಪ್ರದೇಶ ಎಂಆರ್‌ಓ ಘಟಕ ನಿರ್ಮಾಣಕ್ಕೆ ಬಳಕೆ ಆಗಲಿದೆ. ಈ ಸೌಲಭ್ಯವು ಮೂಲ ಸೌಲಭ್ಯ, ಯಂತ್ರೋಪಕರಣ, ಘಟಕ ನಿರ್ಮಾಣ ಮತ್ತಿತರ ಉದ್ದೇಶಗಳ ಸಾಕಾರ ಮಾಡುತ್ತದೆ.

ಎಂಆರ್‌ಓ ಘಟಕದಿಂದ ಸಿಗುವ ಪ್ರಯೋಜನಗಳು

* 1 ದೊಡ್ಡ ಮತ್ತು 2 ಚಿಕ್ಕ ವಿಮಾನಗಳಿಗೆ ಅವಕಾಶ ಕಲ್ಪಿಸಲಿರುವ ಒಂದು ಪೇಂಟ್‌ ಹ್ಯಾಂಗರ್ ಇರುತ್ತದೆ.

* 4 ದೊಡ್ಡ ಮತ್ತು 8 ಚಿಕ್ಕ ವಿಮಾನಗಳ ಸರ್ವೀಸ್‌ಗೆ ಬೇಕಾದ 4 ಹ್ಯಾಂಗರ್‌ಗಳು ಲಭ್ಯವಾಗುತ್ತವೆ.

* ಇಂಡಿಗೊದ ಪಾಲುದಾರ ವಿಮಾನಯಾನ ಸಂಸ್ಥೆಗಳ ವಿಮಾನಗಳ ಸರ್ವೀಸ್‌ಗೂ ಅವಕಾಶ ಇಲ್ಲಿ ಸಿಗುತ್ತದೆ.

* ಇಂಡಿಗೊ ಸೇರ್ಪಡೆ ಮಾಡುವ ಬೃಹತ್ ಎ350 ವಿಮಾನಗಳು ಮತ್ತು ಎ320/ಎ321 ಎಕ್ಸ್‌ಎಲ್‌ಆರ್‌ ವಿಮಾನಗಳಿಗೆ ಘಟಕ ಸಹಕಾರಿ.

* ಜಾಗತಿಕ ಹೂಡಿಕೆದಾರರಿಗೆ ಈ ಘಟಕೆ ಆಕರ್ಷಣಿಯವಾಗುತ್ತದೆ.

* ಜಾಗತಿಕ ವಿಮಾನಯಾನ ಕೇಂದ್ರವಾಗಿ ಬೆಂಗಳೂರಿನ ಸ್ಥಾನಮಾನ ಹೆಚ್ಚಾಗುತ್ತದೆ.

* ನಾಗರಿಕ ವಿಮಾನಯಾನ ಕ್ಷೇತ್ರ ಬಲಗೊಳ್ಳಲಿದೆ.

* ಸರಕು ಸಾಗಣೆ, ಉಗ್ರಾಣ ಮತ್ತು ಪೂರಕ ಸೇವಾ ಕ್ಷೇತ್ರಗಳಲ್ಲಿ 750 ನೇರ ಉದ್ಯೋಗ ಸೃಷ್ಟಿ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+