Indian Railways: ರೈಲಲ್ಲಿ ತೊಂದರೆಗೀಡಾಗುವ ಪ್ರಯಾಣಿಕರಿಗಾಗಿ 'ಟೋಲ್ ಫ್ರೀ' ಆರಂಭ: ಬಳಕೆ, ದೂರು ಸಲ್ಲಿಕೆ? ವಿಧಾನ ತಿಳಿಯಿರಿ
ನವದೆಹಲಿ, ಫೆಬ್ರವರಿ 07: ಕಡಿಮೆ ಬೆಲೆಯ ಮತ್ತು ಸುರಕ್ಷಿತ ಸಾರಿಗೆ ಸೇವೆಯಾದ ಭಾರತೀಯ ರೈಲಿನಲ್ಲಿ ಪ್ರಯಾಣಿಸುವಾಗ ಕೆಲವೊಮ್ಮೆ ತೊಂದರೆಗಳು ಎದುರಾಗುತ್ತವೆ. ಇತರರ ಜತೆ ಜಗಳವಾಡುವುದು ಸೇರಿದಂತೆ ವಿವಿಧ ಸಮಸ್ಯೆಗಳು ನಮಗೆ ಗೊತ್ತಿಲ್ಲದೇ ಉದ್ಭವವಾಗಿಬಿಡುತ್ತವೆ. ಅಂತಹ ಸಂದರ್ಭದಲ್ಲಿ ಪ್ರಯಾಣಿಕರು ಏನು ಮಾಡಬೇಕು?, ರೈಲ್ವೆ ಅಧಿಕಾರಿಗಳನ್ನು ಹೇಗೆ ಸಂಪರ್ಕಿಸಬೇಕು?. ಇದಕ್ಕೆ ಸಹಾಯವಾಣಿ ಇದೆಯೆ? ಎಂಬೆಲ್ಲ ಪ್ರಶ್ನೆ, ಅನುಮಾನಗಳಿಗೆ ಇಲ್ಲಿ ಉತ್ತರವಿದೆ. ಮುಂದೆ ಓದಿ.
ರೈಲಿನಲ್ಲಿ ಪ್ರಯಾಣಿಸುವಾಗ ಎಂತದ್ದೇ ತೊಂದರೆ ಆದರೂ ನೀವು ಧೈರ್ಯಗೆಡವುದು ಬೇಕಾಗಿಲ್ಲ. ಭಯಪಡದೇ ನೀವು ಸಮಸ್ಯೆ ಕುರಿತು ಭಾರತೀಯ ರೈಲ್ವೇ ದೂರು ದಾಖಲಿಸಲು ಅವಕಾಶ ಇದೆ. ಅದಕ್ಕಾಗಿ ರೈಲ್ವೆ ಇಲಾಖೆಯು ಟೋಲ್ ಫ್ರೀ ಸಂಖ್ಯೆಯನ್ನು ಆರಂಭಿಸಿದೆ.

'ರೈಲ್ ಮದದ್' ಸಹಾಯವಾಣಿ '139'
ಸಮಸ್ಯೆಯಲ್ಲಿ ಸಿಲುಕಿದ ಪ್ರಯಾಣಿಕರಿಗೆಂದೇ ರೈಲ್ವೆ ಇಲಾಖೆಯು ಸ್ಪಂದಿಸಲು 'ರೈಲ್ ಮದದ್' ಸಹಾಯವಾಣಿ ಸಂಖ್ಯೆ '139' ಅನ್ನು ಪ್ರಾರಂಭಿಸಿದೆ ಎಂದು ಭಾರತೀಯ ರೈಲ್ವೇ ಮೂಲಗಳು ತಿಳಿಸಿವೆ.
ರೈಲ್ವೆ ಪ್ರಯಾಣದ ಸಮಯದಲ್ಲಿ ಕುಂದು ಕೊರತೆಗಳು ನೀಗಿಸಿ ಪ್ರಯಾಣಿಕರಿಗೆ ಸಹಾಯ ಮಾಡಲು ರೈಲ್ವೇ ಸಹಾಯವಾಣಿಗಳನ್ನು ಏಕ ಸಂಖ್ಯೆ 139 (ರೈಲ್ ಮದದ್ ಸಹಾಯವಾಣಿ) ಗೆ ತ್ವರಿತ ದೂರು ಪರಿಹಾರ ಮತ್ತು ಪ್ರಯಾಣದ ಸಮಯದಲ್ಲಿ ವಿಚಾರಣೆಗಾಗಿ ಸಂಯೋಜಿಸಿದೆ. ನೀವು ಅಗತ್ಯವಿದ್ದಲ್ಲಿ ಈ ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಿ ಮಾಹಿತಿ, ಪರಿಹಾರ ಪಡೆದುಕೊಳ್ಳಬಹುದು. ಇಲ್ಲಿ ನೀವು ದೂರ ಸಹ ನೋಂದಾಯಿಸಿಕೊಳ್ಳಬಹುದು.
ವಿವಿಧ ಸಮಸ್ಯೆಗಳಿಗೆ ಪರಿಹಾರ ಒಂದೇ ಕರೆಯಲ್ಲಿ
ಟೋಲ್-ಫ್ರೀ ಸಂಖ್ಯೆಗೆ (139) ಕರೆ ಬಹು ವಿವಿಧ ಸೇವೆಯನ್ನು ಒಂದೇ ವೇದಿಕೆಯಡಿ ಪಡೆಯಬಹುದು. ಜತೆಗೆ ಈ ಸಂಖ್ಯೆಗೆ ನೀವು ಸಂದೇಶ ಸಹ ಕಳುಹಿಸಬಹುದು. ಈ ಸಹಾಯವಾಣಿಗೆ ಕೇವಲ ದೂರು ಕೊಡಲು ಮಾತ್ರವಲ್ಲದೇ ಭದ್ರತೆ, ವೈದ್ಯಕೀಯ ತುರ್ತುಸ್ಥಿತಿಗಳು, ರೈಲು ಅಪಘಾತಗಳು, ಯಾವುದೇ ಇತರ ರೈಲು ಸಂಬಂಧಿತ ದೂರುಗಳು, ಜಾಗರೂಕತೆ ಇನ್ನಿತರ ಮಾಹಿತಿಗೂ ನೀವು ಕರೆ ಮಾಡಬಹುದು.

ಕಳೆದ ವರ್ಷ ಭಾರತೀಯ ರೈಲ್ವೆ ವಿವಿಧ ರೈಲ್ವೆ ಕುಂದುಕೊರತೆಗಳ ಸಹಾಯವಾಣಿ ಸಂಖ್ಯೆ ಸ್ಥಗಿತಗೊಳಿಸಿದೆ. ಟೋಲ್‌ಫ್ರೀ 182 ಅನ್ನು ಸಹ 2021ರ ಏಪ್ರಿಲ್ 1 ರಿಂದ ಸ್ಥಗಿತಗೊಂಡಿದೆ. ಅದು ಸಹ ಈ 139 ಸಂಖ್ಯೆಯಲ್ಲಿ ವಿಲೀನಗೊಂಡಿದೆ. ಅದರ ಸೇವೆಯನ್ನು ನೀವು ಇಲ್ಲಿ ಪಡೆಯಬಹುದಾಗಿದೆ. ಈ ನೂತನ ಸಹಾವಾಣಿ (139) ಒಟ್ಟು 12 ಭಾಷೆಗಳಲ್ಲಿ ಲಭ್ಯವಿದೆ.
ಪ್ರಯಾಣಿಕರು ಈ ಸಹಾಯವಾಣಿಗೆ ಕರೆ ಮಾಡಿ IVRS (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್) ಅನ್ನು ಆಯ್ಕೆ ಮಾಡಬಹುದು. ಇಲ್ಲವೇ ನಕ್ಷತ್ರ ಚಿಹ್ನೆ (*) ಒತ್ತುವ ಮೂಲಕ ನೇರವಾಗಿ ಕರೆ-ಸೆಂಟರ್ ಕಾರ್ಯನಿರ್ವಾಹಕರನ್ನು ಸಂಪರ್ಕಿಸಬಹುದು.
ಇದರ ಬಳಕೆ ಹೇಗೆ? ತಿಳಿಯಿರಿ
* ಭದ್ರತೆ ಮತ್ತು ವೈದ್ಯಕೀಯ ಸಹಾಯಕ್ಕಾಗಿ ಪ್ರಯಾಣಿಕರು ಈ ಸಹಾಯವಾಣಿಗೆ (139) ಕರೆ ಮಾಡಿದ ಬಳಿಕ 1 ಸಂಖ್ಯೆಯನ್ನು ಆಯ್ಕೆ ಮಾಡಬೇಕು. ಇದು ಕಾಲ್ ಸೆಂಟರ್ ಕಾರ್ಯನಿರ್ವಾಹಕರಿಗೆ ತಕ್ಷಣವೇ ಸಂಪರ್ಕಿಸುತ್ತದೆ.
* ವಿಚಾರಣೆಗಾಗಿ, ಪ್ರಯಾಣಿಕರು 2 ಅನ್ನು ಒತ್ತಬೇಕು. ನಂತರ ಉಪ ಮೆನುವಿನಲ್ಲಿ PNR ಸ್ಥಿತಿ, ರೈಲಿನ ಆಗಮನ/ನಿರ್ಗಮನ, ವಸತಿ, ದರದ ವಿಚಾರಣೆ, ಟಿಕೆಟ್ ಬುಕಿಂಗ್, ಸಿಸ್ಟಮ್ ಟಿಕೆಟ್ ರದ್ದತಿ, ಎಚ್ಚರಗೊಳ್ಳುವ ಅಲಾರಾಂ ಸೌಲಭ್ಯ/ಗಮ್ಯಸ್ಥಾನದ ಎಚ್ಚರಿಕೆ, ಗಾಲಿ ಕುರ್ಚಿ ಬುಕಿಂಗ್, ಊಟದ ಬುಕಿಂಗ್ ಬಗ್ಗೆ ಮಾಹಿತಿ ಬುಕಿಂಗ್ ಪಡೆಯಬಹುದು.
* ಇನ್ನೂ ವಿಜಿಲೆನ್ಸ್ ಸಂಬಂಧಿತ ದೂರುಗಳಿಗಾಗಿ 5 ಅನ್ನು ಒತ್ತಬೇಕು.
*ಸಾಮಾನ್ಯ ದೂರುಗಳಿಗಾಗಿ ಪ್ರಯಾಣಿಕರು 4 ಅನ್ನು ಆಯ್ಕೆ ಮಾಡಿಕೊಳ್ಳಬೇಕು.
* IRCTC ಚಾಲಿತ ರೈಲುಗಳ ಪ್ರಶ್ನೆಗಳಿಗೆ ಪ್ರಯಾಣಿಕರು 7 ಅನ್ನು ಆಯ್ಕೆ ಮಾಡಿಕೊಳ್ಳಬೇಕು.
* ಪಾರ್ಸೆಲ್ ಮತ್ತು ಸರಕುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ, ಪ್ರಯಾಣಿಕರು 6 ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು.
* ದೂರುಗಳ ಸ್ಥಿತಿಗಾಗಿ, ಪ್ರಯಾಣಿಕರು 9 ಅನ್ನು ಆಯ್ಕೆ ಮಾಡಿಕೊಳ್ಳುವ ಜೊತೆಗೆ ನಿರ್ವಾಹಕ ಜತೆ ಮಾತನಾಡಲು ನಕ್ಷತ್ರ ಚಿಹ್ನೆ (*) ಆಯ್ಕೆ ಮಾಡಿಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications