• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶುಕ್ರವಾರದ ಕೆಲವು ವೈವಿಧ್ಯಮಯ ಸುದ್ದಿಗಳು

By Vanitha
|

ಬೆಂಗಳೂರು, ಸೆಪ್ಟೆಂಬರ್,11 : ರಾಷ್ಟ್ರಾದ್ಯಾಂತ ಹಲವಾರು ವಿಭಿನ್ನ, ವಿಶೇಷ ಸಂದರ್ಭಗಳು ಮೇಳೈಸಿದ್ದವು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ನಟಿ ತಮನಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇವರೆಲ್ಲಾ ಪಾಲ್ಗೊಂಡಿದ್ದ ಹಲವಾರು ಸಂದರ್ಭಗಳ ಗುಚ್ಛವೇ ಈ ಶುಕ್ರವಾರದ ಸುದ್ದಿ ವಿಶೇಷ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೊಸ ಯೋಜನೆಯಾದ ನವ ಗೃಹ ಯೋಜನೆಗೆ ಚಾಲನೆ. ರಾಷ್ರಪತಿ ಭವನದಲ್ಲಿ ಸ್ವಚ್ಛ ಭಾರತ ಅಭಿಯಾನದಿಂದ ಚಹಾ ಕೂಟ ಏರ್ಪಟು. ಮುಂಬೈಯಲ್ಲಿ ಮಾಂಸ ನಿಷೇಧ ಕುರಿತಾಗಿ ಭುಗಿಲೆದ್ದ ಆಕ್ರೋಶ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೈಗೊಂಡ ರೈತ ಯಾತ್ರೆ. ಎಫ್ ಟಿಐಐ ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಉಪವಾಸ. [ಚಿತ್ರಗಳಲ್ಲಿ: ದಿಗ್ಗಜ ಕ್ರಿಕೆಟ್ ಪಾಠ, ಸೆರೆನಾ ಅದ್ಭುತ ಆಟ]

ಈ ಎಲ್ಲಾ ಘಟನೆಗಳು ಶುಕ್ರವಾರ ರಾಷ್ಟ್ರದಾದ್ಯಂತ ಜರುಗಿದವು. ಒಟ್ಟಿನಲ್ಲಿ ಈ ಸುದ್ದಿಗಳು ಗಣ್ಯರ ಹಲವಾರು ಚಟುವಟಿಕೆಗಳ ಮೇಲೆ ಬೆಳಕು ಬೀರಲಿದೆ. ಅವರು ಭಾಗವಹಿಸಿದ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡಲಿದೆ. ಹಾಗಾದರೆ ಶುಕ್ರವಾರದ ಸುದ್ದಿ ವಿಶೇಷತೆಗಳೇನು?

ಚಲನಚಿತ್ರ ಮತ್ತು ಸಾಕ್ಷ್ಯಚಿತ್ರ ಒಂದೆಡೆ

ಚಲನಚಿತ್ರ ಮತ್ತು ಸಾಕ್ಷ್ಯಚಿತ್ರ ಒಂದೆಡೆ

ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯನ್ ನ ನಿರ್ದೇಶಕ ಗಜೇಂದ್ರ ಚೌಹಾಣ್ ವಿಷಯದಲ್ಲಿ ಎದ್ದ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಸಲುವಾಗಿ ಚಲನಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್, ಸಾಕ್ಷ್ಯ ಚಿತ್ರ ನಿರ್ದೇಶಕ ಆನಂದ್ ಪಟವರ್ಧನ್ ಮುಂಬೈನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಕಂಡದ್ದು ಹೀಗೆ.

ಕೆಲವರು ನಿಂತರು, ಹಲವರು ಕೂತರು

ಕೆಲವರು ನಿಂತರು, ಹಲವರು ಕೂತರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನ ಮಿಷನ್ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಚಹಾ ಕೂಟದಲ್ಲಿ ಹಲವಾರು ಗಣ್ಯರ ಸಮಾಗಮವಾಯಿತು. ಇದರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕೇಂದ್ರ ಸಂಸದೀಯ ಸಚಿವ ಎಂ. ವೆಂಕಯ್ಯನಾಯ್ಡು, ಕೈಗಾರೀಕೋದ್ಯಮ ಅನಿಲ್ ಅಂಬಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ನಟ ಮತ್ತು ನಿರ್ದೇಶಕ ಕಮಲ್ ಹಾಸನ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೀಗೆ ನಾನಾ ಗಣ್ಯರು ಪಾಲಲ್ಗೊಂಡಿದ್ದರು.

ನವಗೃಹ ಯೋಜನೆಯಲ್ಲಿ ನರೇಂದ್ರ ಮೋದಿ

ನವಗೃಹ ಯೋಜನೆಯಲ್ಲಿ ನರೇಂದ್ರ ಮೋದಿ

ಭಾರತದ ಹಲವಾರು ರಾಜ್ಯ ಹಾಗೂ ನಗರಗಳು ಸೇರಿಕೊಂಡು ನವಗೃಹ ಯೋಜನೆಯನ್ನು ಶುಕ್ರವಾರ ಆರಂಭಿಸಿದರು. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿ ನಡೆದ 'ನವಗೃಹ ಯೋಜನಾ' ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮನೆ ಬೀಗದ ಕೀ ಕೊಟ್ಟು, ಶುಭ ಕೋರಿದರು.

ಮಾಂಸ ಮಾರಾಟ ನಿಷೇಧದ ವಿರುದ್ಧ

ಮಾಂಸ ಮಾರಾಟ ನಿಷೇಧದ ವಿರುದ್ಧ

ಜೈನ ಧರ್ಮದ ಪರ್ಯೂಷಣ್ ಉಪವಾಸ ವ್ರತದ ಪ್ರಯುಕ್ತ ಕಾಸ್ಮೋಪಾಲೀಟನ್ ಸಿಟಿ ಮುಂಬೈನಲ್ಲಿ ಸೆಪ್ಟೆಂಬರ್, 10, 13, 17, 18ರಂದು ಮಾಂಸ ಮಾರಾಟ ಹಾಗೂ ಪ್ರಾಣಿವಧೆಯನ್ನು ಮುಂಬೈ ನಗರ ಪಾಲಿಕೆ ನಿಷೇಧಿಸಿದೆ. ಈ ಆದೇಶವನ್ನು ವಿರೋಧಿಸಿ ಶಿವಸೇನಾ ಕಾರ್ಯಕರ್ತರು ಕೋಳಿ, ಮೀನುಗಳನ್ನು ಮುಂದೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.

ಒಡಿಶಾದ ಪಾದಯಾತ್ರೆಯಲ್ಲಿ ರಾಹುಲ್

ಒಡಿಶಾದ ಪಾದಯಾತ್ರೆಯಲ್ಲಿ ರಾಹುಲ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 'ರೈತರನ್ನು ಬದುಕಿಸಿ ಎಂಬ ಪಾದಯಾತ್ರೆ ಕೈಗೊಂಡಿದ್ದು, ಒಡಿಶಾದ ಬರಗಾರ್ ಜಿಲ್ಲೆಯ ದೆಬಹಾಲ್ ಜಿಲ್ಲೆಯಲ್ಲಿನ ಯುವತಿಯರತ್ತ ರಾಹುಲ್ ಕೈ ಕುಲುಕಿದ್ದು ಹೀಗೆ.

ಕ್ರಿಕೆಟರ್ ಸಚಿನ್ ಮತ್ತು ನಟಿ ತಮನ್ನಾ

ಕ್ರಿಕೆಟರ್ ಸಚಿನ್ ಮತ್ತು ನಟಿ ತಮನ್ನಾ

ನವದೆಹಲಿಯ ರಾಷ್ಟಪತಿ ಭವನದಲ್ಲಿ ಸ್ವಚ್ಛಭಾರತ ಅಭಿಯಾನ ಏರ್ಪಡಿಸಿದ್ದ ಸಹಾ ಕೂಟದಲ್ಲಿ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್, ಹಾಗೂ ಸಿನಿಮಾ ನಟಿ ತಮನ್ನಾ ಕಾಣಿಸಿದ್ದು ಹೀಗೆ..

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This photos shows India's fantastic event on Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more