ತಾಯಿ ನಾಡಿನ ಋಣವೇ ಎಲ್ಲದಕ್ಕಿಂತ ಮಿಗಿಲು

ಬೆಂಗಳೂರು:ಆ: 16: ವಿಜಯನಗರದ ವಿಶ್ವ ಚೇತನ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ದೇಶ ಭಕ್ತಿ ಸಾರುವ ಭಕ್ತಿಗೀತೆಗಳಿಗೆ ಮಕ್ಕಳು ನೃತ್ಯದ ಮೂಲಕ ಹೊಸ ಮೆರುಗು ನೀಡಿದರು.

ಬೆಳ್ಳಾರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಲಕ್ಷ್ಮೀ.ಜಿ.ಪ್ರಸಾದ ಮಾತನಾಡಿ, ತಾಯಿ ನಾಡಿಗಿಂತ ಮಿಗಿಲಾದದ್ದು ಯಾವುದು ಇಲ್ಲ. ನಮ್ಮ ದೇಶ ಎಲ್ಲದರಲ್ಲೂ ಸಮೃದ್ಧವಾಗಿದೆ. ಸಾವಿರಾರು ಜನ ಮಹಾತ್ಮರ ಬಲಿದಾನದಿಂದ ನಮಗೆಲ್ಲ ಸ್ವಾತಂತ್ರ್ಯ ಸಿಕ್ಕಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ವಿಶ್ವ ಚೇತನ ವಿದ್ಯಾ ಸಂಸ್ಥೆ ಅಧ್ಯಕ್ಷ, ವಕೀಲ ಬಿ.ವೆಂ.ಪುಟ್ಟೇಗೌಡ ಮಾತನಾಡಿ, ದೇಶ ಸಾಕಷ್ಟು ಪ್ರಗತಿ ಸಾಧಿಸಿಲ್ಲ. ಸ್ವಾರ್ಥ ಚಿಂತನೆಗಳಿಂದ ಸಂಪನ್ಮೂಲ ಸದ್ಬಳಕೆಯಾಗುತ್ತಿಲ್ಲ. ಪ್ರತಿಯೊಬ್ಬರಿಗೂ ಶಿಸ್ತು ಸಂಯಮದ ಅಗತ್ಯವಿದೆ. ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದು ಹೇಳಿದರು.

ಡಾ.ಲಕ್ಷ್ಮೀ ಪ್ರಸಾದ ವಿರಚಿತ 'ಸುಬ್ಬಿ ಇಂಗ್ಲಿಷ್ ಕಲ್ತದು' ಹಾಗೂ 'ಹಸಿರು ಕರಗಿದಾಗ' ಎಂಬ ಎರಡು ನಾಟಕಗಳನ್ನು ಬಿಎಡ್ ಪ್ರಶಿಕ್ಷಣಾರ್ಥಿ ರಘು ನಿರ್ದೇಶನದಲ್ಲಿ ಮಕ್ಕಳು ಅಭಿನಯಿಸಿದರು. ಉಪಪ್ರಾಚಾರ್ಯ ಚಂದ್ರೇಗೌಡ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಕರಿಬಸಪ್ಪ, ಮುಖ್ಯಶಿಕ್ಷಕಿ ಪುಷ್ಪಲತಾ ಇದ್ದರು.

ಗಣ್ಯರ ಮಾತು

ಗಣ್ಯರ ಮಾತು

ಬೆಂಗಳೂರು ವಿಜಯನಗರದ ವಿಶ್ವ ಚೇತನ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಗಣ್ಯರು ಮಾತನಾಡಿದರು.

ಅತಿಥಿಗಳಿಗೆ ಸ್ವಾಗತ

ಅತಿಥಿಗಳಿಗೆ ಸ್ವಾಗತ

ಬೆಂಗಳೂರು ವಿಜಯನಗರದ ವಿಶ್ವ ಚೇತನ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು.

ಮಕ್ಕಳಿಂದ ನಾಟಕ ಪ್ರದರ್ಶನ

ಮಕ್ಕಳಿಂದ ನಾಟಕ ಪ್ರದರ್ಶನ

ವಿಶ್ವ ಚೇತನ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಮಕ್ಕಳಿಂದ ಮೂಡಿಬಂದ ನಾಟಕ ಪ್ರದರ್ಶನ.

ಮಕ್ಕಳ ಸಂಭ್ರಮ

ಮಕ್ಕಳ ಸಂಭ್ರಮ

ಬೆಂಗಳೂರು ವಿಜಯನಗರದ ವಿಶ್ವ ಚೇತನ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದ ಮಕ್ಕಳು.

ನೃತ್ಯ ರೂಪಕ

ನೃತ್ಯ ರೂಪಕ

ಬೆಂಗಳೂರು ವಿಜಯನಗರದ ವಿಶ್ವ ಚೇತನ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ದೇಶಭಕ್ತಿ ಗೀತೆಗಳ ನೃತ್ಯ ರೂಪಕ.

ಶಿಸ್ತಿನ ಸಿಪಾಯಿಗಳು

ಶಿಸ್ತಿನ ಸಿಪಾಯಿಗಳು

ಬೆಂಗಳೂರು ವಿಜಯನಗರದ ವಿಶ್ವ ಚೇತನ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಕವಾಯಿತು ಪ್ರದರ್ಶನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+