ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು: ನಮ್ಮ ಮೆಟ್ರೋ ಸಂಚಾರಕ್ಕೆ ಅಂತಿಮ ಹಂತದ ಸಿದ್ಧತೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06: ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಮೆಟ್ರೋ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಸಂಚಾರವನ್ನು ಸೆಪ್ಟೆಂಬರ್ 7ರಿಂದ ಆರಂಭಿಸಲಿದೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸಿಬ್ಬಂದಿಗಳು ಮೆಟ್ರೋ ಸಂಚಾರಕ್ಕೆ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನೇರಳೆ ಮಾರ್ಗದಲ್ಲಿ ಮಾತ್ರ ಸೋಮವಾರದಿಂದ ರೈಲುಗಳು ಸಂಚಾರ ನಡೆಸಲಿವೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್‌ ಕಾರ್ಡ್ ರಿಚಾರ್ಜ್ ಮಾಡುವಂತಿಲ್ಲ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್‌ ಕಾರ್ಡ್ ರಿಚಾರ್ಜ್ ಮಾಡುವಂತಿಲ್ಲ

ಸೆಪ್ಟೆಂಬರ್ 9ರಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಟೋಕನ್ ವ್ಯವಸ್ಥೆ ಇಲ್ಲದ ಕಾರಣ ಸ್ಮಾರ್ಟ್‌ ಕಾರ್ಡ್ ಹೊಂದಿರುವ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಸಂಚಾರ ನಡೆಸಬಹುದಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳದ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ಲಲ್ಲಸಾಮಾಜಿಕ ಅಂತರ ಕಾಯ್ದುಕೊಳ್ಳದ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ಲಲ್ಲ

ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ದೂರವನ್ನು ಕಾಯ್ದುಕೊಳ್ಳಬೇಕು. 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲಲು ಅವಕಾಶವನ್ನು ನೀಡುವುದಿಲ್ಲ.

ಸೆ.7ರಿಂದ ಮೆಟ್ರೋ; 3 ಗಂಟೆ ಮಾತ್ರ ರೈಲು ಸಂಚಾರ ಸೆ.7ರಿಂದ ಮೆಟ್ರೋ; 3 ಗಂಟೆ ಮಾತ್ರ ರೈಲು ಸಂಚಾರ

ಮೆಟ್ರೋ ಸಂಚಾರದ ಮಾಹಿತಿ

ಮೆಟ್ರೋ ಸಂಚಾರದ ಮಾಹಿತಿ

ಸೆಪ್ಟೆಂಬರ್ 7ರಿಂದ 10ರ ತನಕ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲುಗಳು ಬೆಳಗ್ಗೆ 8 ರಿಂದ 11 ಮತ್ತು ಸಂಜೆ 4.30ರಿಂದ ರಾತ್ರಿ 7.30ರ ತನಕ 5 ನಿಮಿಷಗಳ ಅಂತರದಲ್ಲಿ ಸಂಚಾರ ನಡೆಸಲಿವೆ.

ಹಸಿರು ಮಾರ್ಗದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಬೆಳಗ್ಗೆ 8 ರಿಂದ 11 ಮತ್ತು ಸಂಜೆ 4.30ರಿಂದ 7.30ರ ತನಕ 5 ನಿಮಿಷಗಳ ಅಂತರದಲ್ಲಿ ರೈಲುಗಳು ಓಡಲಿವೆ.

ಸೆಪ್ಟೆಂಬರ್ 11ರಿಂದ ವೇಳಾಪಟ್ಟಿ

ಸೆಪ್ಟೆಂಬರ್ 11ರಿಂದ ವೇಳಾಪಟ್ಟಿ

ಸೆಪ್ಟೆಂಬರ್ 11ರಿಂದ ರೈಲುಗಳು ಬೆಳಗ್ಗೆ 7ರಿಂದ ರಾತ್ರಿ 9ರ ತನಕ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಪೀಕ್ ಅವರ್‌ನಲ್ಲಿ 5 ನಿಮಿಷಗಳ ಅಂತರದಲ್ಲಿ ಮತ್ತು ಉಳಿದ ಸಮಯದಲ್ಲಿ 10 ನಿಮಿಷಗಳ ಅಂತರದಲ್ಲಿ ಸಂಚಾರವನ್ನು ನಡೆಸಲಿವೆ.

ನಿಲ್ದಾಣಗಳ ವ್ಯವಸ್ಥೆ

ನಿಲ್ದಾಣಗಳ ವ್ಯವಸ್ಥೆ

ಮೆಟ್ರೋ ರೈಲು ನಿಲ್ದಾಣವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಪ್ರತಿ ನಿಲ್ದಾಣದಲ್ಲಿ ಹ್ಯಾಂಡ್ ಫ್ರೀ ಥರ್ಮಲ್ ಸ್ಕ್ಯಾನಿಂಗ್ ಮೆಷಿನ್ ಅಳವಡಿಕೆ ಮಾಡಲಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಎಷ್ಟು ಜನರು ಸಂಚಾರ ಮಾಡಬಹುದು?

ಎಷ್ಟು ಜನರು ಸಂಚಾರ ಮಾಡಬಹುದು?

ಪ್ರತಿ ಮೆಟ್ರೋ ರೈಲಿನಲ್ಲಿ 400 ಜನರು ಪ್ರಯಾಣ ಮಾಡಲು ಅನುಮತಿ ಇದೆ. ರೈಲಿನಲ್ಲಿ ಗರಿಷ್ಠ ಸಂಖ್ಯೆಯ ಪ್ರಯಾಣಿಕರು ತುಂಬಿದಲ್ಲಿ ಮುಂದಿನ ನಿಲ್ದಾಣದಲ್ಲಿ ನಿಲ್ಲಿಸಲಾಗುವುದಿಲ್ಲ. ರೈಲಿನಲ್ಲಿ ಪರ್ಯಾಯ ಆಸನಗಳನ್ನು ಖಾಲಿ ಬಿಡಬೇಕು. ಗುರುತಿಸಲಾದ ಪ್ರದೇಶದಲ್ಲಿ ಮಾತ್ರ ಕೂರಲು ನಿಲ್ಲಲು ಅವಕಾಶವಿದೆ.

English summary
BMRCL all set for resume Namma Metro service from September 7, 2020. Union govt allowed to run metro service in the unlock 4.0.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X