ORR ಬಿಎಂಟಿಸಿ ಪಥದಲ್ಲಿ ಈ ವಾಹನಗಳಿಗೆ ಸಂಚರಿಸಲು ಅವಕಾಶ
ಬೆಂಗಳೂರು, ಆಗಸ್ಟ್ 27: ನಗರದ ಬೈಯಪ್ಪನಹಳ್ಳಿಯಿಂದ ಸಿಲ್ಕ್‌ಬೋರ್ಡ್‌ವರೆಗಿನ ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರಕ್ಕಾಗಿ ನಿರ್ಮಿಸಲಾದ ಪ್ರತ್ಯೇಕ ಪಥದಲ್ಲಿ ಟೆಕ್ ಕಂಪನಿಗಳ ಬಸ್ ಹಾಗೂ ಶಾಲಾ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.
ನಮ್ಮ ಮೆಟ್ರೋ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಸ್ ಪಥದಲ್ಲಿ ಹಲವು ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಲು ಚಿಂತನೆ ನಡೆದಿದೆ. ಫ್ಯಾಕ್ಟರಿಗಳು, ಕಂಪನಿಗಳು,ಕೆಎಸ್‌ಆರ್‌ಟಿಸಿ ಹಾಗೂ ಇಂಟರ್‌ಸಿಟಿ ಬಸ್, ಕಾಲೇಜು ಬಸ್‌ಗಳು ಸಂಚರಿಸಬಹುದು.
ಅತಿ ಹೆಚ್ಚು ವಾಹನ ದಟ್ಟಣೆ ಇರುವ 12 ರಸ್ತೆಗಳಲ್ಲಿಸಾರ್ವಜನಿಕ ಬಸ್ ಸಂಚಾರಕ್ಕಾಗಿಯೇ ಪ್ರತ್ಯೇಕ ಪಥವನ್ನು ಕಾಯ್ದಿರಿಸಲು ಭರದ ತಯಾರಿ ನಡೆದಿದೆ. ಈ ಪೈಕಿ ಅತಿ ಹೆಚ್ಚು ವಾಹನಗಳು ಓಡಾಡುವ ಬೈಯಪ್ಪನಹಳ್ಳಿ-ಕೆ.ಆರ್.ಪುರ ನಡುವಿನ 18.5 ಕಿ.ಮೀ ಉದ್ದದ ರಸ್ತೆಯಲ್ಲಿಬಸ್ ಸಂಚಾರಕ್ಕಾಗಿಯೇ ಪ್ರತ್ಯೇಕ ಪಥ ನಿರ್ಮಾಣ ಮಾಡಲಾಗುತ್ತಿದೆ. ಇದರ ಯಶಸ್ಸು ಆಧರಿಸಿ, ಉಳಿದ 11 ರಸ್ತೆಗಳಲ್ಲಿಬಸ್‌ಗಳಿಗೆ ಪ್ರತ್ಯೇಕ ಪಥ ನಿಗದಿಪಡಿಸಲು ಉದ್ದೇಶಿಸಲಾಗಿದೆ.

ಸದ್ಯ ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರ, ಮಾರತ್‌ಹಳ್ಳಿ, ಬೆಳ್ಳಂದೂರು, ಅಗರ ಮಾರ್ಗವಾಗಿ ಸಿಲ್‌್ಕಬೋರ್ಡ್‌ವರೆಗೆ ಪ್ರಾಯೋಗಿಕವಾಗಿ ಬಸ್ ಪಥ ನಿರ್ಮಿಸಲಾಗುತ್ತಿದೆ. ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗದಿಂದ ಹೊರವರ್ತುಲ ರಸ್ತೆಯ ಇಕ್ಕೆಲಗಳಲ್ಲಿಬೊಲ್ಲಾರ್ಡ್‌ಗಳನ್ನು ಅಳವಡಿಸಲಾಗುತ್ತಿದೆ.
ಸದ್ಯ ಇರುವ ರಸ್ತೆಯಲ್ಲಿಯೇ 3.5 ಮೀಟರ್ ಅಗಲದ ಪಥವನ್ನು ಬಸ್‌ಗಳ ಸಂಚಾರಕ್ಕಾಗಿ ಕಾಯ್ದಿರಿಸಲಾಗುತ್ತಿದೆ. ಈ ರಸ್ತೆಯಲ್ಲಿನ ಉಳಿದ ಇನ್ನೆರಡು ಪಥಗಳಲ್ಲಿಇತರೆ ವಾಹನಗಳು ಸಂಚರಿಸಬಹುದು. ಕಾಯ್ದಿರಿಸಿದ ಪಥದಲ್ಲಿಬಸ್ ಮತ್ತು ಆ್ಯಂಬುಲೆನ್ಸ್ ಹೊರತಾಗಿ ಅನ್ಯ ವಾಹನಗಳಿಗೆ ಪ್ರವೇಶಿಸುವಂತಿಲ್ಲ. ಪ್ರತ್ಯೇಕ ಪಥದಲ್ಲಿಬಿಎಂಸಿಯು ಪರೀಕ್ಷಾರ್ಥವಾಗಿ ಅ.20ರಿಂದ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿದೆ.
ಫೇಸ್ 2ಎ ಅಡಿ ಬರುವ ಸಿಲ್ಕ್‌ಬೋರ್ಡ್‌ನಿಂದ ಕೆಆರ್ ಪುರಂವರೆಗಿನ 18.3 ಕಿ.ಮೀ ಕಾಮಗಾರಿಗಳನ್ನು ಎರಡು ಪ್ಯಾಕೇಜ್‌ಗಳಾಗಿ ವಿಭಾಗಿಸಲಾಗಿದ್ದು, ಮೊದಲ ಪ್ಯಾಕೇಜ್‌ನ್ನುಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಎರಡನೇ ಪ್ಯಾಕೇಜ್‌ನ್ನು ಶಂಕರ ನಾರಾಯಣ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ ಪಡೆದುಕೊಂಡಿದೆ.
ಮೆಟ್ರೋ ಕಾಮಗಾರಿಗೆ 5,227 ಕೋಟಿ ರೂ. ವೆಚ್ಚ ತಗುಲಲಿದೆ. ಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಾಮಗಾರಿ ನಡೆಸಲಿದೆ.
ಕೆಆರ್ ಪುರಂ, ಮಹದೇವಪುರ, ಡಿಆರ್‌ಡಿಒ, ಕ್ರೀಡಾ ಸಂಕೀರ್ಣ, ದೊಡ್ಡನೆಕ್ಕುಂದಿ, ಇಸ್ರೋ, ಮಾರತ್‌ಹಳ್ಳಿ, ಕಾಡು ಬೀಸನಹಳ್ಳಿ-ಬೆಳ್ಳಂದೂರು, ಇಬ್ಬಲೂರು, ಆಗರ ಕೆರೆ, ಎಚ್‌ಎಸ್‌ಆರ್ ಬಡಾವಣೆ, ಸಿಲ್ಕ್‌ಬೋರ್ಡ್ ನಿಲ್ದಾಣಗಳು ಇರಲಿವೆ.
ಮೊದಲ ಪ್ಯಾಕೇಜ್‌ನಲ್ಲಿ ಸಿಲ್ಕ್‌ಬೋರ್ಡ್‌ನಿಂದ 9.85 ಕಿ,ಮೀ ಎಲಿವೇಟೆಡ್ ಕಾಮಗಾರಿ ನಡೆಯಲಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣ, ಎಚ್‌ಎಸ್‌ಆರ್ ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ಮತ್ತು ಸಿಲ್ಕ್‌ಬೋರ್ಡ್ 2.84 ಕಿ.ಮೀ ಫ್ಲೈಓವರ್ ನಿರ್ಮಾಣವಾಗಲಿದೆ. ಗುರುವಾರ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಭೂಮಿ ಪೂಜೆ ನಡೆದಿದ್ದು, ಪಿಲ್ಲಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ಮೊದಲ ಪ್ಯಾಕೇಜ್‌ನ ಕಾಮಗಾರಿ ಕೂಡ ಪ್ರಾರಂಭವಾದಂತಾಗಿದೆ.
Recommended Video
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications