Get Updates
Get notified of breaking news, exclusive insights, and must-see stories!

Bengaluru Rail Coach Restaurant: 2 ರೈಲ್ ಕೋಚ್ ರೆಸ್ಟೋರೆಂಟ್ ಶೀಘ್ರ ಮುಕ್ತ, ಎಲ್ಲಿ? ವಿಶೇಷತೆ ಏನು? ಮಾಹಿತಿ

ಬೆಂಗಳೂರು, ಮಾರ್ಚ್ 11: ಬೆಂಗಳೂರಿನಲ್ಲಿ ರೈಲ್ವೆ ಪ್ರಯಾಣಿಕರಿಗೆ ಅತ್ಯುತ್ತಮ ಮತ್ತು ಸ್ಮರಣೀಯ ಊಟದ ಅನುಭವ ನೀಡುವ ಸಲುವಾಗಿ ನೈರುತ್ಯ ರೈಲ್ವೆ ವಲಯವು (SWR) ಎರಡು ರೈಲ್ವೆ ಕೋಚ್ ರೆಸ್ಟೋರೆಂಟ್ (Train Coach Restaurant) ತೆರೆಯಲು ಮುಂದಾಗಿದೆ. ಈಗಾಗಲೇ ಒಂದೆರಡು ಗಡುವು ಮೀರಿದ್ದು, ಶೀಘ್ರವೇ ತೆರೆದುಕೊಳ್ಳಲಿವೆ. ಇದರ ಅಪ್ಡೇಟ್ ಮಾಹಿತಿ ಇಲ್ಲಿದೆ.

ಬೆಂಗಳೂರು ರೈಲ್ವೇ ವಿಭಾಗವು ಎರಡು ರೈಲ್ವೆ ಕೋಚ್ ರೆಸ್ಟೋರೆಂಟ್‌ಗಳು ಆದಷ್ಟು ಶೀಘ್ರವೇ ಆರಂಭಿಸುವ ಚಿಂತನೆಯಲ್ಲಿದೆ. ಈ ಹಿಂದೆ ಇವುಗಳನ್ನು 2023ರ ಅಕ್ಟೋಬರ್‌ನಲ್ಲಿ ತೆರೆಯಲಾಗುವುದು ಎಂದು ಘೋಷಿಸಿತ್ತು. ಆದರೆ ನಿಗದಿತ ದಿನಾಂಕದೊಳಗೆ ತೆರೆಯಲು ಆಗಲಿಲ್ಲ ಎಂದು TNIE ವರದಿ ಮಾಡಿದೆ.

In Bengaluru Two New Rail Coach Restaurants Open Soon Know Place Speciality More Details

ಈ ಎರಡು ನೂತನ ರೈಲ್ವೆ ಕೋಚ್ ರೆಸ್ಟೋರೆಂಟ್‌ಗಳು 'ಕೆಎಸ್‌ಆರ್ ಬೆಂಗಳೂರು ಸಿಟಿ' ಮತ್ತು 'ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ 'ರೈಲು ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ರೈಲು ಹಳಿಗಳ ಮೇಲೆ ಸ್ಥಾಪಿಸಲಾಗಿದೆ. ಹಳೆಯ ರೈಲ್ವೆ ಕೋಚ್‌ಗಳನ್ನು ನವೀಕರಣ ಮಾಡಿ ಅವುಗಳಿಗೆ ರಸ್ಟೋರೆಂಟ್ ರೂಪ ಕೊಡಲಾಗಿದೆ. ಎಲ್ಲ ಕೆಲಸ ಅಂತಿಮ ಹಂತದಲ್ಲಿದ್ದು, ಆದಷ್ಟು ಶೀಘ್ರವೇ ಸಾರ್ವಜನಿಕರಿಗೆ ಮುಕ್ತಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೆಸ್ಟೋರೆಂಟ್ ಶುಲ್ಕರಹಿತ ಉಪಕ್ರಮದ ಭಾಗ

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಈಗಾಗಲೇ ಇಂತಹ ರೆಸ್ಟೋರೆಂಟ್ ತೆರೆಯುವ ಸಾಹಸವು ಯಶಸ್ವಿಯಾಗಿದೆ. ಈ ರೀತಿಯ ರೆಸ್ಟೋರೆಂಟ್ ಸ್ಥಾಪನಯು ರೈಲ್ವೆ ವಲಯದ ಕೈಗೊಂಡಿರುವ ಶುಲ್ಕರಹಿತ ಉಪಕ್ರಮಗಳ ಭಾಗವಾಗಿದೆ ಎಂದು ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ಚೈತನ್ಯ ಮಾಹಿತಿ ನೀಡಿದ್ದಾರೆ.

ರೆಸ್ಟೋರೆಂಟ್ ವಿಶೇಷತೆಗಳು ಏನು?

ರೈಲ್ವೆ ಕೋಚ್ ರೆಸ್ಟೋರೆಂಟ್ ನಲ್ಲಿ ಪ್ರತಿಯೊಂದರಲ್ಲಿ 40 ಜನರು ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಕೋಚ್ ಹೊರಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗುವುದು. ಪ್ರಯಾಣಿಕರು ಇಲ್ಲಿಯೇ ಊಟ ಮಾಡಬಹುದು. ಅಥವಾ ಪಾರ್ಸೆಲ್ ಸಹ ಒಯ್ಯಲು ಅವಕಾಶ ಇರಲಿದೆ.

ಇತ್ತೀಚೆಗೆ ಕೋಚ್‌ ರೆಸ್ಟೋರೆಂಟ್ ಗಳ ಒಳಾಂಗಣ ಸಿದ್ಧಪಡಿಸಲಾಗಿದೆ. ರೆಸ್ಟೋರೆಂಟ್‌ಗಳಲ್ಲಿ ಅಡುಗೆ ಕೋಣೆ ಇರುವುದರಿಂದ ನೈರ್ಮಲ್ಯ ಸೌಲಭ್ಯಗಳು ಸಹ ಸಿದ್ಧವಾಗುತ್ತಿವೆ. ಕೆಲವು ಸಮಸ್ಯೆಗಳು ಎದುರಾದ್ದರಿಂದ ನಿಗದಿತ ಸಮಯಕ್ಕೆ ಇವುಗಳನ್ನು ಲೋಕಾರ್ಪಣೆ ಮಾಡಲು ಆಗಲಿಲ್ಲ ಎಂದರು.

In Bengaluru Two New Rail Coach Restaurants Open Soon Know Place Speciality More Details

ರೆಸ್ಟೋರೆಂಟ್‌ನಲ್ಲಿ 24x7 ಎಸಿ ಸೌಲಭ್ಯ

ಹಳೆಯ ಮತ್ತು ಹಾಗೂ ಬಳಕೆಗೆ ಬಾರದ ಸ್ಕ್ರ್ಯಾಪ್ ರೈಲ್ವೆ ಕೋಚ್‌ಗಳನ್ನು ಬಳಸಿ, ಅವುಗಳ ಒಳಾಂಗಣವನ್ನು ವಿನ್ಯಾಸಗೊಳಿಸಿ ರೆಸ್ಟೋರೆಂಟ್ ನಿರ್ಮಿಸಲಾಗುತ್ತಿದೆ. ಈ ಹೋಟೆಲ್ ಈ 24x7 ರೆಸ್ಟೋರೆಂಟ್‌ಗಳು ಸಂಪೂರ್ಣ ಹವಾ ನಿಯಂತ್ರಿತವಾಗಿರುತ್ತವೆ. ಬೆಂಗಳೂರಿನ ಎರಡು ಕಡೆ ನಿರ್ಮಿಸಲಾಗುತ್ತಿರುವ ಈ ರೈಲು ಬೋಗಿಗಳನ್ನು ಮೈಸೂರಿನ ಅಶೋಕಪುರಂ ಡಿಪೋದಿಂದ ಇಲ್ಲಿಗೆ ತರಿಸಲಾಗಿದೆ.

ಗುತ್ತಿಗೆಯ ಅವಧಿ ಎಷ್ಟು ವರ್ಷ?

ರೈಲ್ವೆ ವಲಯವು ಕೋಚ್‌ಗಳನ್ನು ಗುತ್ತಿಗೆದಾರರಿಗೆ ಉಚಿತವಾಗಿ ನೀಡಿದೆ. ಎಂಜಿನಿಯರಿಂಗ್ ವಿಭಾಗವು ಎರಡೂ ನಿಲ್ದಾಣಗಳಲ್ಲಿ ಒಂದು ಕೋಚ್ ಇರುವಂತೆ ನೋಡಿಕೊಳ್ಳಲಾಗುವುದು, ಅದಕ್ಕಾಗಿ ರೈಲು ಹಳಿಯನ್ನು ಸಹ ಸಿದ್ಧಪಡಿಸಲಾಗಿದೆ. ಈ ಬೋಗಿಗಳನ್ನು ಆ ರೈಲು ಹಳಿಗಳ ಮೇಲೆ ಟ್ರೇಲರ್‌ನಲ್ಲಿ ತರಿಸಿ ಕ್ರೇನ್‌ಗಳ ಮೂಲಕ ಇಡಲಾಗಿದೆ ಎಂದು ತಿಳಿಸಿದರು.

ಈ ರೆಸ್ಟೋರೆಂಟ್ ನಿರ್ವಹಿಸಲು ಐದು ವರ್ಷಗಳ ಅವಧಿಗಾಗಿ ಕಳೆದ ವರ್ಷ ಜೂನ್ 2023 ರಲ್ಲಿ ನಡೆದ ಇ-ಹರಾಜು ಮಾಡಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್‌ಆರ್‌ ರೆಸ್ಟೋರೆಂಟ್ ವು M/s ಹಲ್ದಿರಾಮ್ಸ್ ಪಡೆದರೆ, ಗೌರವ್ ಎಂಟರ್‌ಪ್ರೈಸಸ್ ಅದನ್ನು ಎಸ್‌ಎಂ ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದ (ಎಸ್‌ಎಂವಿಟಿ) ರೆಸ್ಟೋರೆಂಟ್ ಅನ್ನು ಪಡೆದಿದ್ದಾರೆ. ಈ ನಲ್ಲಿ ನಡೆಸುತ್ತದೆ.

ಬೆಂಗಳೂರಿನ ಕೆಎಸ್‌ಆರ್‌ ರೈಲು ನಿಲ್ದಾಣಕ್ಕೆ ಪ್ರತಿ ನಿತ್ಯ ಸುಮಾರು 2 ಲಕ್ಷದಷ್ಟು ಜನರು ಆಗಮಿಸುತ್ತಾರೆ. ನಿಲ್ದಾಣದಲ್ಲಿ ಪರವಾನಗಿದಾರರಿಂದ ರೈಲ್ವೆ ವಾಷಿರ್ಕವಾಗಿ 87 ಲಕ್ಷ ರೂ.ಗಳನ್ನು ಶುಲ್ಕ ಸಂಗ್ರಹಿಸುತ್ತದೆ. ಇನ್ನು ಎಸ್‌ಎಂವಿಟಿ ಗೆ ಪ್ರತಿನಿತ್ಯ 60,000 ಕ್ಕೂ ಹೆಚ್ಚು ಜನರು ಬರುತ್ತಾರೆ. ಇಲ್ಲಿ ನಿಲ್ದಾಣದ ಪರವಾನಗಿದಾರರಿಂದ ವಾರ್ಷಿಕ 33 ಲಕ್ಷ ರೂ. ಆದಾಯ ಗಳಿಕೆ ಆಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+