ʼಇಡೀ ಬೆಂಗ್ಳೂರು ನಡೀತಿರೋದೆ ನಮ್ಮಿಂದ...ʼ ವಿಡಿಯೋದಲ್ಲಿ ಕನ್ನಡಿಗರನ್ನ ಕೆಟ್ಟದಾಗಿ ಬೈದ ಯುವತಿ, ಯಾಕೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಲಸಿಗರು ಹಾಗೂ ಕನ್ನಡಿಗರ ನಡುವಿನ ಜಗಳ ತಾರಕಕ್ಕೇರಿದೆ. ಎಲ್ಲಿಂದಲೋ ಕೆಲಸಕ್ಕೆ ಬಂದವರು ಇಲ್ಲಿಯವರ ಮೇಲೆ ದರ್ಪ ತೋರುವ ಘಟನೆಗಳು ಆಗಾಗ ಮರುಕಳಿಸುತ್ತಲೇ ಇವೆ. ಸಣ್ಣ ಸಣ್ಣ ವಿಚಾರಕ್ಕೂ ಸ್ವಾಭಿಮಾನಿ ಕನ್ನಡಿಗರು ಹಾಗೂ ವಲಸಿಗರ ನಡುವೆ ಬೀದಿಜಗಳಗಳೂ ನಡೆಯುತ್ತಿವೆ. ಇದು ಮಿತಿಮೀರಿ ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವ ಹಂತವೂ ತಲುಪಿದೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ಘಟನೆ ಕೂಡ ಇದೇ ರೀತಿ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಹಿಂದಿ ಭಾಷೆ ಮಾತನಾಡುವ ಯುವತಿಯೊಬ್ಬರು ಟ್ರಿಪ್ ಕ್ಯಾನ್ಸಲ್ ಮಾಡಿದ ವಿಚಾರಕ್ಕೆ ಆಟೋ ಚಾಲಕ ಕೋಪಗೊಂಡು ಬೈದಿದ್ದ. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಬಳಿಕ ಆಟೋ ಚಾಲಕನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದೂ ಆಗಿದೆ. ಇಷ್ಟಕ್ಕೆ ಸುಮ್ಮನಾಗದ ಆ ಯುವತಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಸ್ಟೇಟಸ್ ಹಾಕಿಕೊಂಡಿದ್ದು, ಇದರಲ್ಲಿ ಇಡೀ ಕನ್ನಡಿಗರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ.

ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಯುವತಿ ನೀಡಿರುವ ಹೇಳಿಕೆಗಳು ಕನ್ನಡಿಗರನ್ನು ಕೆರಳಿಸುವಂತಿವೆ. ಅಲ್ಲದೆ, ತಪ್ಪು ಮಾಡಿದ ಆಟೋ ಡ್ರೈವರ್ ಮೇಲೆ ಮಾತ್ರ ಕ್ರಮ ತೆಗೆದುಕೊಂಡಿದ್ದೀರಿ. ಈಗ ಯುವತಿ ಮನಬಂದಂತೆ ಕನ್ನಡಿಗರನ್ನು ನಿಂದಿಸಿದ್ದಾಳೆ. ಆಕೆಯ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ಪೊಲೀಸರು ಹಾಗೂ ಸರ್ಕಾರಕ್ಕೆ ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಆಗಿದ್ದೇನು?: ಯುವತಿಯೊಬ್ಬರು ಆ್ಯಪ್‌ನಲ್ಲಿ ಆಟೋ ಬುಕ್ ಮಾಡಿದ್ದರು. ಅದರಂತೆ ಆಟೋ ಹತ್ತಿರಕ್ಕೆ ಬರುತ್ತಿದ್ದಂತೆ ಟ್ರಿಪ್ ಕ್ಯಾನ್ಸಲ್ ಮಾಡಿ, ಬೇರೆ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆಟೋ ಡ್ರೈವರ್ ಹಿಂಬಾಲಿಸಿಕೊಂಡು ಬಂದು, ಆಕೆಯ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಈ ವಿಡಿಯೋ ನಿನ್ನೆ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡಿತ್ತು.
ಹಿಂದಿಯಲ್ಲೇ ಮಾತನಾಡಿದ್ದ ಯುವತಿ, ನಾನು ಟ್ರಿಪ್ ಕ್ಯಾನ್ಸಲ್ ಮಾಡಿದ್ದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ಡ್ರೈವರ್, ʼಆಟೊ ಗ್ಯಾಸ್‌ನ ದುಡ್ಡು ನಿಮ್ಮ ಅಪ್ಪ ಕೊಡ್ತಾನಾ?ʼ ಎಂದು ವಾಗ್ವಾದ ನಡೆಸಿದ್ದ. ಬಳಿಕ ಈ ವಿಡಿಯೋ ವೈರಲ್ ಆಗಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದರು. ಅದರಂತೆ ಡ್ರೈವರ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಮತ್ತೊಂದೆಡೆ ಆ ಯುವತಿ ಹಾಕಿರುವ ಸ್ಟೇಟಸ್ ಹಾಗೂ ಆಕೆ ಕನ್ನಡಿಗರನ್ನು ನಿಂದಿಸಿರುವ ವಿಡಿಯೋ ಬಿರುಗಾಳಿ ಎಬ್ಬಿಸಿದೆ. ʼಇಲ್ಲಿರುವ ಜನರಿಗೆ ಸಭ್ಯತೆ ಇಲ್ಲವೇ ಇಲ್ಲ. ಬೇರೆ ಜನರನ್ನು ಗೌರವಿಸುವುದೂ ಇಲ್ಲ. ಬೇರೆಯವರ ಮೇಲೆ ದೌರ್ಜನ್ಯ ಎಸಗುವುದಷ್ಟೇ ಅವರಿಗೆ ಗೊತ್ತು. ನಾವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇವೆ ಎನ್ನುವ ಒಂದೇ ಕಾರಣಕ್ಕೆ ನಾವು ಏನೋ ತಪ್ಪು ಮಾಡಿರುವಂತೆ ನಮ್ಮನ್ನು ಬಿಂಬಿಸುತ್ತಾರೆ ಎಂದು ಆರೋಪಿಸಿದ್ದಾರೆ.
This North indian lady called kannadigas as fuc... ers and dic....ers.@BlrCityPolice@DgpKarnataka
— ಕನ್ನಡ ಡೈನಾಸ್ಟಿ (@appudynasty1) September 6, 2024
Please take action.#Kannada #Autodriverpic.twitter.com/wgQ0ugc86Q
ʼಬೇರೆ ಕಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವವರಿಂದಲೇ ಇಡೀ ನಗರ ಅಭಿವೃದ್ಧಿ ನಡೆಯುತ್ತಿದೆ. ನಾವೆಲ್ಲ ತೆರಿಗೆ ಕಟ್ಟುತ್ತಿದ್ದೇವೆ. ಇಂತಹ **** ಅವರಿಗೆ ನಾವು ಬಾಡಿಗೆಗಳನ್ನು ಕಟ್ಟುತ್ತಿದ್ದೇವೆ. ಇಡೀ ಬೆಂಗಳೂರಿನ ಆರ್ಥಿಕತೆ ನಡೆಯುತ್ತಿರುವುದೇ ನಮ್ಮಿಂದ. ಕರ್ಮ ಇವರನ್ನು ಸುಮ್ಮನೆ ಬಿಡುವುದಿಲ್ಲʼ ಎನ್ನುವ ರೀತಿಯಲ್ಲಿ ಅವಾಚ್ಯ ಶಬ್ಧಗಳನ್ನು ಬಳಸಿ ಕನ್ನಡಿಗರನ್ನು ನಿಂದಿಸಿದ್ದಾರೆ.
ಈ ವಿಡಿಯೋ ಅನ್ನು ಹಲವರು ಹಂಚಿಕೊಂಡಿದ್ದು, ಆಟೋ ಜಗಳವನ್ನು ಇಡೀ ಕನ್ನಡಿಗರ ಮೇಲೆ ಈಕೆ ಏಕೆ ತರುತ್ತಿದ್ದಾಳೆ? ಅಷ್ಟಕ್ಕೂ ಕನ್ನಡಿಗರನ್ನು ಅಷ್ಟು ಕೀಳಾಗಿ, ಅವಾಚ್ಯ ಪದಗಳಿಂದ ನಿಂದಿಸಲು ಈಕೆಗೆ ಎಷ್ಟು ಧೈರ್ಯ? ಪೊಲೀಸರು ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ʼಈಕೆ ಬಂದಿರುವುದು ಕೆಲಸಕ್ಕಾಗಿ ಅಷ್ಟೇ...ಈಕೆಯಿಂದಲೇ ನಮ್ಮ ಬದುಕು ನಡೀತಿಲ್ಲ, ಏನೋ ಇವಳು ಹಾಕಿದ ಭಿಕ್ಷೆಯಿಂದ ನಾವು ಬದುಕು ಕಟ್ಟಿಕೊಂಡಂತೆ ಮಾತನಾಡುತ್ತಿದ್ದಾಳೆ. ನಿಜಕ್ಕೆ ಈಕೆಯೇ ತಿನ್ನಲು ಗತಿಯಿಲ್ಲದೆ ಎಲ್ಲಿಂದಲೋ ಬಂದು ನಮ್ಮೂರಿನಲ್ಲಿದ್ದಾಳೆʼ ಎಂದೆಲ್ಲ ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.
ʼಇಷ್ಟೆಲ್ಲ ನಡೆಯುತ್ತಿದ್ದರೂ ಗೊತ್ತಿದ್ದರೂ ವಲಸಿಗರ ಪರವಾಗಿ ಪೋಲೀಸ್ ಇಲಾಖೆ ನಿಂತಿದೆಯೇ? ಇದೇ ಸಂದರ್ಭದಲ್ಲಿ ಕನ್ನಡಿಗರ ವಿರುದ್ಧ ವಲಸೆಕೋರರು ಪಿತೂರಿ ನಡೆಸಿದಾಗ ವಿನಾ ಕಾರಣ ಕನ್ನಡಿಗರ ಮೇಲೆ ಕ್ರಮ ಕೈಗೊಳ್ಳುವ ಪೊಲೀಸರು, ನಿಜವಾಗಿಯೂ ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ ನಡೆದಾಗ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಕಾನೂನು ಎಲ್ಲರಿಗೂ ಒಂದೇ ಅಂದ ಮೇಲೆ ಕರ್ನಾಟಕ ರಾಜ್ಯ ಪೋಲೀಸರ ದ್ವಂದ್ವ ನೀತಿ ಯಾಕೆ? ಕರ್ನಾಟಕ ರಾಜ್ಯ ಪೊಲೀಸರು ಯಾರ ರಕ್ಷಣೆಗೆ ನಿಂತಿರುವುದು? ಎಂದು ಧ್ವನಿ ಎತ್ತಿದ್ದಾರೆ.












Click it and Unblock the Notifications