ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Benglauru Traffic Violation: ಐದೇ ವರ್ಷದಲ್ಲಿ ಪಬ್ಲಿಕ್ ಐ ಆಪ್‌ನಡಿ 8.3 ಲಕ್ಷ ಕೇಸ್ ದಾಖಲು, ಹೇಗೆ ತಿಳಿಯಿರಿ

|
Google Oneindia Kannada News

ಬೆಂಗಳೂರು, ಜನವರಿ 20: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ ವರ್ಷಗಳಲ್ಲಿ (2017-22) ನಗರ ಸಂಚಾರಿ ಪೊಲೀಸ್‌ ಅಧೀಕೃತ ಮೊಬೈಲ್ ಅಪ್ಲಿಕೇಷನ್ ಆಗಿರುವ 'ಪಬ್ಲಿಕ್ ಐ ಆಪ್' ಮೂಲಕ ಒಟ್ಟು ಸಮಾರು 8 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಸಿಕೊಂಡಿದ್ದಾರೆ.

ಅಚ್ಚರಿ ಎನಿಸಿದರೂ ಇದು ಸತ್ಯ. ಸಾರ್ವಜನಿಕರು ತಾವು ಓಡಾಡುವ ರಸ್ತೆಗಳಲ್ಲಿ ನಡೆಯುವ ಸಂಚಾರ ನಿಯಮ ಉಲ್ಲಂಘನೆ ಪೋಟೊ ತೆಗೆದು, ಇಲ್ಲವೇ ವಿಡಿಯೋ ಮಾಡಿದ್ದ, ಬಹುತೇಕ ಮಂದಿ ಈ 'ಪಬ್ಲಿಕ್ ಐ ಆಪ್' ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇವುಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

In Bengaluru 8.3 lakh traffic rules violation cases registered through Public Eye App in last 5 years

ನಗರದಲ್ಲಿ ಮಂಗಳವಾರವಷ್ಟೇ (ಜ.17) 71 ವರ್ಷದ ವ್ಯಕ್ತಿ ಒಬ್ಬರನ್ನು ಬೈಕ್ ಸವಾರನೊಬ್ಬ ಸುಮಾರು 750 ಮೀಟರ್‌ ರಸ್ತೆಯಲ್ಲಿ ಎಳೆದೊಯ್ದ ಘಟನೆ ವೈರಲ್ ಆಗಿತ್ತು. ಆರೋಪಿ ಸವಾರನ ಘಟನೆಯನ್ನು ಬೇರೊಂದು ಬೈಕ್ ಸವಾರರೊಬ್ಬ

ಹಿಂಬಾಲಿಸಿ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಆರೋಪಿ ಪರಾರಿಯಾದ ಬಳಿಕ ಆ ವಿಡಿಯೋವನ್ನು 'ಪಬ್ಲಿಕ್ ಐ ಆಪ್'ನಲ್ಲಿ ಆಪ್ಲೋಡ್ ಮಾಡಿದ್ದರು. ಆತನ ವಿರುದ್ಧ ಪ್ರಕರಣ ದಾಖಲಾಯಿತು.

ಆಪ್‌ ಆಧರಿಸಿ 8.3 ಲಕ್ಷ ದೂರು ದಾಖಲು

ಆಪ್‌ ಆಧರಿಸಿ 8.3 ಲಕ್ಷ ದೂರು ದಾಖಲು

ಸಾರ್ವಜನಿಕರಿಗೆ ಈ ಪಬ್ಲಿಕ್ ಐ ಆಪ್ ಸಂಚಾರ ನಿಯಮ, ಕಾನೂನು ಪಾಲನೆ ವಿಚಾರದಲ್ಲಿ ಸಹಾಯ ಮಾಡುತ್ತಿದೆ. ಜನರು ಸಂಚಾರ ನಿಯಮ ಉಲ್ಲಂಘಿಸುವವರ ಚಿತ್ರ, ವಿಡಿಯೋಗಳನ್ನು ಈ ಆಪ್‌ ನಲ್ಲಿ ಹಾಕಬಹದು. ಹೀಗೆ ಆಪ್‌ನಲ್ಲಿ ಹಾಕಿದ ವಿವಿಧ ರೀತಿಯ ಸಂಚಾರ ನಿಯಮ ಉಲ್ಲಂಘನೆ ಪೋಟೊ, ವಿಡಿಯೋ ಆಧರಿಸಿದ ನಗರ ಸಂಚಾರ ಪೊಲೀಸರು ಐದು ವರ್ಷದಲ್ಲಿ ಕನಿಷ್ಠ 8.3 ಲಕ್ಷ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಜೆಸಿ ರಸ್ತೆ, ಕೆಆರ್ ಮಾರುಕಟ್ಟೆ ವ್ಯಾಪ್ತಿಯಲ್ಲಿ ಕ್ಯಾಮೆರಾ ಲಭ್ಯ

ಜೆಸಿ ರಸ್ತೆ, ಕೆಆರ್ ಮಾರುಕಟ್ಟೆ ವ್ಯಾಪ್ತಿಯಲ್ಲಿ ಕ್ಯಾಮೆರಾ ಲಭ್ಯ

ಸಂಚಾರ ಪೊಲೀಸ್‌ ಮೂಲಗಳ ಪ್ರಕಾರ, ಕಾರುಗಳ ಡ್ಯಾಶ್‌ಬೋರ್ಡ್‌, ಇಲ್ಲವೇ ಬೈಕರ್ಸ್ ಹೆಲ್ಮೆಟ್‌ಗಳ ಮೇಲೆ ಅಳವಡಿಸಿದ್ದ ಕ್ಯಾಮೆರಾ ಅಪರಾಧಗಳ ಫೋಟೊ, ವಿಡಿಯೋಗಳಲ್ಲಿ ದಾಖಲಾಗಿವೆ. ಈ ಕ್ಯಾಮೆರಾಗಳು ಆನ್‌ಲೈನ್‌ನಲ್ಲಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ. ಆರಂಭಿಕವಾಗಿ 900 ರೂ.ನಿಂದ 10,000 ರೂ.ವರೆಗೆ ಕ್ಯಾಮೆರಾಗಳು ನಗರದ ಎಸ್‌ಪಿ ರಸ್ತೆ, ಸಿಟಿ ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಲಭ್ಯವಿವೆ. ಇವುಗಳ ಬಳಕೆಯಿಂದ ನಿಯಮ ಪಾಲನೆ, ದೂರು ದಾಖಲು ಇನ್ನಷ್ಟು ಪರಿಣಾಮಕಾರಿಯಗಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಪ್‌ನಿಂದ ಕಳ್ಳತನ, ವ್ಹೀಲಿಂಗ್ ಇನ್ನಿತರ ಪ್ರಕರಣ ಬೆಳಕಿಗೆ

ಆಪ್‌ನಿಂದ ಕಳ್ಳತನ, ವ್ಹೀಲಿಂಗ್ ಇನ್ನಿತರ ಪ್ರಕರಣ ಬೆಳಕಿಗೆ

ಆಪ್‌ನಲ್ಲಿನ ಮಾಹಿತಿ ಪಡೆದ ತಪ್ಪತಸ್ಥರಿಗೆ ದಂಡ ಚಲನೆ ರವಾನಿಸಲಾಗುತ್ತದೆ. ಇದನ್ನು ವಿಭಾಗ ತಾಂತ್ರಿಕ ಸಿಬ್ಬಂದಿ ನಿರ್ವಹಿಸುತ್ತಾರೆ. ನಂದಿನಿ ಲೇಔಟ್ ಬಳಿ ಲಗ್ಗೆರೆಯ ಪಾದಚಾರಿ ಮಾರ್ಗ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಫೋಟೊ ಇದೇ ಆಪ್‌ನಲ್ಲಿ ಅಳವಡಿಸಲಾಗಿತ್ತು. ಪರಿಶೀಲಿಸಿದಾದ ನಿಲ್ಲಿಸಲಾಗಿದ್ದ ಬೈಕ್ ಮೂರು ತಿಂಗಳ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಪಾದಾಚಾರಿ ಮಾರ್ಗದಲ್ಲಿ ಪಾರ್ಕಿಂಗ್, ರಸ್ತೆಯಲ್ಲಿ ವ್ಹೀಲಿಂಗ್ ಸೇರಿದಂತೆ ಇನ್ನಿತರ ಹಲವು ನಿಯಮ ಉಲ್ಲಂಘನೆಗಳ ಪತ್ತೆಗೆ ಆಪ್ ನೆರವಾಗುತ್ತದೆ. ಈ ಕುರಿತು ಮಾತನಾಡಿದ ನಗರ ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, ನಿಯಮ ಮೀರಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು ಹೆಚ್ಚಾಗಿದೆ. ಫುಟ್‌ಪಾತ್ ಮೇಲೆ ಬೈಕ್ ಚಾಲನೆ, ಹೆಲ್ಮೆಟ್ ರಹಿತ ಪ್ರಯಾಣ, ಒನ್‌ ವೇ ಪ್ರವೇಶ, ನಿಷೇಧಿತ ರಸ್ತೆಗಳಲ್ಲಿ ಸಂಚಾರ, ವ್ಹೀಲಿಂಗ್ ನಂತರ ಪ್ರಕರಣಗಳು ಹೆಚ್ಚಾಗಿವೆ ಎಂದು ತಿಳಿಸಿದರು.

2021 ರಲ್ಲಿ ಹೆಚ್ಚು ಕೇಸ್, 2022ರಲ್ಲಿ ಇಳಿಕೆ

2021 ರಲ್ಲಿ ಹೆಚ್ಚು ಕೇಸ್, 2022ರಲ್ಲಿ ಇಳಿಕೆ

ಅಂಕಿ ಸಂಖ್ಯೆಗಳನ್ನು ನೋಡುವುದಾದರೆ ಪಬ್ಲಿಕ್ ಐ ಆಪ್ ನಲ್ಲಿ 2017 ರಲ್ಲಿ 31,417 ಪ್ರಕರಣಗಳು, 2018 ರಲ್ಲಿ 26,410 ದಾಖಲಾಗುವ ಮೂಲಕ ಉಲ್ಲಂಘನೆ ಪ್ರಕರಣಗಳು ತುಸು ಇಳಿಕೆ ಆದವು. ಅದೇ 2019 ರಲ್ಲಿ 1,07,037 ಕ್ಕೆ ಹೆಚ್ಚಾಯಿತು. 2020 ರಲ್ಲಿ 1,99,848 ಪ್ರಕರಣಗಳು, 2021ನೇ ವರ್ಷದಲ್ಲಿ 2,54,45,45 ಹೆಚ್ಚಾದರೆ, 2022 ರಲ್ಲಿ 2,20,670 ಕ್ಕೆ ಕುಸಿದಿದೆ.

ಆರಂಭದಲ್ಲಿ ಈ ಆಪ್‌ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಇರಲಿಲ್ಲ. ಆದರೆ 2019 ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2021 ಕ್ಕೆ ಹೋಲಿಸಿದರೆ 2022 ಸಂಚಾರಿ ಪೊಲೀಸರು ದಾಖಲಿಸಿದ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ. ನಾಗರಿಕರು ಈ ಆಪ್ ಬಳಸಿದಲ್ಲಿ ನಿಯಮ ಉಲ್ಲಂಘನೆ ಪ್ರಕರಣಗಳು ಇನ್ನಷ್ಟು ಕಡಿಮೆಯಾಗಬಹುದು ಎಂದು ಸಂಚಾರ ಪೊಲೀಸ್ ವಿಶೇಷ ಆಯುಕ್ತ ಎಂ.ಎ. ಸಲೀಂ ತಿಳಿಸಿದರು.

English summary
In Bengaluru 8.3 lakh traffic rules violation cases have been registered through Public Eye App in the last 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X