• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸಭೆಯ 10 ಮಹತ್ವದ ನಿರ್ಣಯಗಳು

|

ಬೆಂಗಳೂರು: ಸೆಪ್ಟಂಬರ್ 07: ಹಲವು ವರ್ಷಗಳ ಬೇಡಿಕೆಯಂತೆ ಹಲವು ಸರ್ಕಾರಿ ಕಛೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಗುರುವಾರ(ಸೆ.07) ನಡೆದ ಸಚಿವ ಸಂಪುಟದ ಸಭೆಯಲ್ಲಿ ತತ್ವಿಕವಾಗಿ ಒಪ್ಪಿಗೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಕಾನೂನು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದಲ್ಲಿ ಮಾಹಿತಿ ನೀಡಿದ ಅವರು, ಉತ್ತರ ಕರ್ನಾಟಕ ಯಾವ ಜಿಲ್ಲೆಗಳಲ್ಲಿ ಯಾವ ಇಲಾಖೆಗಳನ್ನು ಸ್ಥಳಾಂತರಿಸಬೇಕು ಎಂಬುದರ ಬಗ್ಗೆ ಅಂತಿಮವಾಗಿ ತೀರ್ಮಾನಗಳ ಕೈಗೊಳ್ಳಲು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗುವುದು. ಮೊದಲ ಹಂತದಲ್ಲಿ ಕೆಬಿಜೆಎನ್ ಎಲ್ (ಕೃಷ್ಣ ಭಾಗ್ಯ ಜಲ ನಿಗಮ) ಕರ್ನಾಟಕ ನೀರಾವರಿ ನಿಗಮ, ಕರ್ನಾಟಕ ಕಬ್ಬು ಅಭಿವೃದ್ಧಿ ನಿರ್ದೇಶನಾಲಯ, ಕರ್ನಾಟಕ ವಿದ್ಯುತ್ ಮಗ್ಗ ನಿರ್ದೇಶನಾಲಯ, ಕೆಯುಎಸ್ ಡಬ್ಲ್ಯೂಡಿಬಿ (ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತಿರಲಸು ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.

ಸಾಲದ ಋಣದಿಂದ ಬಿಡುಗಡೆ: ದುರ್ಬಲ ವರ್ಗದವರಿಗೆ ರಾಜ್ಯ ಸರ್ಕಾರದ ಕೊಡುಗೆ

ಇಬ್ಬರು ಮಾಹಿತಿ ಆಯುಕ್ತರಲ್ಲಿ ಒಬ್ಬ ಮಾಹಿತಿ ಆಯುಕ್ತರನ್ನು ಹಾಗೂ ಮಾನವಹಕ್ಕುಗಳ ಒಬ್ಬ ಸದಸ್ಯರನ್ನು ಉತ್ತರ ಕರ್ನಾಟಕ ಜಿಲ್ಲೆಗೆ ಸ್ಥಳಾಂತರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಈ ವಿಷಯ ಸಂಪುಟ ಸಭೆಯ ಪಟ್ಟಿಯಲ್ಲಿ ಇಲ್ಲದಿದ್ದರು, ಮುಖ್ಯ ಕಾರ್ಯದರ್ಶಿಗಳು ಮಂಡಿಸಿದ ನಿರ್ಣಯದ ಮೇಲೆ ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದರು. ಇದರೊಟ್ಟಿಗೆ ನಿನ್ನೆಯ ಸಚಿವ ಸಂಪುಟ ಸಭೆಯ ಮಹತ್ವದ 10 ನಿರ್ಣಯಗಳು ಇಲ್ಲಿವೆ.

ಬೆಂಗಳೂರಿನಲ್ಲಿ ಎಸ್‍ಎಫ್‍ಎಎಲ್ ಸ್ಥಾಪನೆ

ಬೆಂಗಳೂರಿನಲ್ಲಿ ಎಸ್‍ಎಫ್‍ಎಎಲ್ ಸ್ಥಾಪನೆ

1.ಐಇಎಸ್ ಎ (ಇಂಡಿಯಾ ಎಲೆಕ್ಟ್ರಾನಿಕ್ ಮತ್ತು ಸೆಮಿಕಂಡ್ಟಕರ್ ಅಸೋಷಿಯೇಷನ್) ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸೆಮಿಕಂಡ್ಟಕರ್ ಫಾಭ್ಯಲೆಸ್ ಆಕ್ಸಲರೇಟರ್ ಲ್ಯಾಬ್ (ಎಸ್‍ಎಫ್‍ಎಎಲ್) ಸ್ಥಾಪನೆ. ಇದು ದೇಶದಲ್ಲೇ ಪ್ರಥಮವಾಗಿದ್ದು ಒಟ್ಟು 56.31 ಕೋಟಿ ರೂ ವೆಚ್ಚದಲ್ಲಿ ಸ್ಥಾಪನೆಯಾಗುತ್ತದೆ. ಇದರಲ್ಲಿ 21.53 ಕೋಟಿ ರೂ. ಕರ್ನಾಟಕ ಸರ್ಕಾರದ ಪಾಲು.

2.ಬೇಡ್ತಿ ನದಿಗೆ ನಿರ್ಮಾಣ ಮಾಡಲಾಗುತ್ತಿರುವ ಸೇತುವೆಗೆ 14 ಕೋಟಿ ರೂ. ಗಳ ವೆಚ್ಚಕ್ಕೆ ಅನುಮೋದನೆ ನೀಡಲಾಗಿತ್ತು. ಇದನ್ನು 23.06 ಕೋಟಿಗೆ ಒಪ್ಪಿಗೆ ನೀಡಲಾಗಿದೆ.

ರಾಮನಗರ ಪಟ್ಟಣದಲ್ಲಿ ಕಚೇರಿ ಸಂಕೀರ್ಣ

ರಾಮನಗರ ಪಟ್ಟಣದಲ್ಲಿ ಕಚೇರಿ ಸಂಕೀರ್ಣ

3.ರಾಮನಗರ ಪಟ್ಟಣದಲ್ಲಿ ವಿವಿಧ ಇಲಾಖೆಗಳ ಕಚೇರಿ ಸಂಕೀರ್ಣಕ್ಕಾಗಿ 30 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಅದನ್ನು ಪರಿಷ್ಕರಿಸಿ 40.17 ಕೋಟಿ ರೂ.ವೆಚ್ಚದ ಕಾಮಗಾರಿಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

4.ರಾಮನಗರ ಮತ್ತು ಚನ್ನಪಟ್ಟಣ ನಡುವೆ ಬರುವ 16 ಗ್ರಾಮಗಳಿಗೆ ನೆಟ್‍ಕಲ್ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡಲು 450 ಕೋಟಿ ರೂ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದ ಗಿಫ್ಟ್: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾ

ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ರೈತರಿಂದ ಜಮೀನು

ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ರೈತರಿಂದ ಜಮೀನು

5.ಹಲವು ಖಾಸಗಿ ಸಂಸ್ಥೆಗಳಿಗೆ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲು ನೇರವಾಗಿ ರೈತರಿಂದ ಜಮೀನು ಖರೀದಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದರಲ್ಲಿ ವಾಸವದತ್ತ ಸಿಮೆಂಟ್ ಕಂಪನಿಗೆ ಸೇಡಂ ನಲ್ಲಿ 665 ಎಕರೆ, ಆದಾನಿ ಗ್ರೂಪ್ ನ ಮೆ. ಮಾರ್ಧಾ ಸೋಲಾರ್ ಪ್ರೈ. ಲಿ ಇವರಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲ್ಲೂಕಿನಲ್ಲಿ 44 ಎಕರೆ, ವಿಜಯಪುರದಲ್ಲಿ 255 ಎಕರೆ, ಔರಾದ ತಾಲ್ಲೂಕಿನಲ್ಲಿ 282 ಎಕರೆ.

6. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಟಗರಾಪುರ ಮತ್ತು ಇತರೆ 19 ಗ್ರಾಮಗಳಿಗೆ ಹಾಗೂ ಯಳ್ಳಂದೂರು ತಾಲ್ಲೂಕಿನ 44 ಗ್ರಾಮಗಳಿಗೆ "ಬಹುಗ್ರಾಮ ಯೋಜನೆ" ಯಡಿ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಡಿಬಿಓಟಿ ಆಧಾರದನ್ವಯ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆಯನ್ನು ನೀಡಿದೆ. ಈ ಯೋಜನೆಗೆ 113.06 ಕೋಟಿ ವೆಚ್ಚ ಆಗಲಿದೆ.

ರಾಯಚೂರಿನಲ್ಲಿ ಬಹುಗ್ರಾಮ ಯೋಜನೆ

ರಾಯಚೂರಿನಲ್ಲಿ ಬಹುಗ್ರಾಮ ಯೋಜನೆ

7.ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಯಲಗಟ್ಟ ಮತ್ತು ಇತರೆ 10 ಗ್ರಾಮಗಳಿಗೆ "ಬಹುಗ್ರಾಮ ಯೋಜನೆ" ಯಡಿ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಟಾನಗೊಳಿಸಲು 1623.30 ಲಕ್ಷ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಿದೆ.

8."ಚೈನಾ ದೇಶದೊಂದಿಗೆ ಸಕರಾತ್ಮಕ ಸ್ಪರ್ಧೆ" ಎಂಬ ಕಾರ್ಯಕ್ರಮವನ್ನು ಅನುಷ್ಟಾನಗಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆಯಾಯ ಪ್ರದೇಶದ ಸಂಪನ್ಮೂಲ ಮತ್ತು ವೃತ್ತಿಕೌಶಲ್ಯಗಳನ್ನು ಆಧರಿಸಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದು. ರಾಜ್ಯದ ಕಲಬುರಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಒಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಾನಾ ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗುವಂತೆ 9 ಕ್ಲಸ್ಟರ್ ಮಾದರಿಗಳನ್ನು ರಚಿಸಲು ಒಪ್ಪಿಗೆ ನೀಡಲಾಯಿತು. ಇದಕ್ಕೆ ಪೂರಕವಾಗಿ ವಿಷನ್ ಗ್ರೂಪ್ ನ್ನು ರಚಿಸಲಾಗುವುದು. ಇದಕ್ಕಾಗಿ 5000 ಕೋಟಿ ವೆಚ್ಚವಾಗುತ್ತದೆ. ಮುಂದಿನ ನಾಲ್ಕು ವರ್ಷದಲ್ಲಿ ಶೇರು ಬಂಡವಾಳದ ರೂಪದಲ್ಲಿ ಸರ್ಕಾರ 2 ಸಾವಿರ ಕೋಟಿ ನೀಡುತ್ತದೆ ಹಾಗೂ ಖಾಸಗಿ ಸಂಸ್ಥೆಗಳನ್ನು 3 ಸಾವಿರ ಕೋಟಿ ಬಂಡವಾಳ ಹೂಡಬೇಕಾಗುತ್ತದೆ.

ರೈತರಿಗೆ ಖುಷಿ ಕೊಡದ ಕೇಂದ್ರದ ಎಂಎಸ್‌ಪಿ ಕೊಡುಗೆ

ರೈತರಿಗಾಗಿ ಮೊಬೈಲ್ app

ರೈತರಿಗಾಗಿ ಮೊಬೈಲ್ app

9.ಮೊಬೈಲ್ ಆಪ್ ಮೂಲಕ ಬೆಳ ಸಮೀಕ್ಷೆ ಮಾಡಲು ಯೋಜನೆಯೊಂದನ್ನು ರೂಪಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ರೈತರು ಒಳಗೊಂಡಂತೆ ಮೊಬೈಲ್ app ಗಳ ಮೂಲಕ ರೈತರು ಯಾವ ಸಂಗಾಮಿ ಬೆಳೆಗಳನ್ನು ಹಾಕಿದ್ದಾರೆ ಎಂಬುದನ್ನು ಈ ಮೂಲಕ ಮೊಬೈಲ್ ಆಪ್ ಮೂಲಕ ಖಚಿತ ಅಂಕಿ ಅಂಶಗಳನ್ನು ಸಂಗ್ರಹಿಸಬಹುದಾಗಿದೆ. 25 ಕೋಟಿ ವೆಚ್ಚದಲ್ಲಿ ಈ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುವುದು.

10. ಹಾಸನದಲ್ಲಿ ಹೊಳೇನರಸಿಪುರದ ಹರದನಹಳ್ಳಿಯಲ್ಲಿ ವಸತಿಯುಕ್ತ ಸರ್ಕಾರಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಮಾಡಲು 15 ಕೋಟಿ ರೂ.ಗಳ ಯೋಜನೆ ಒಪ್ಪಿಗೆ ನೀಡಲಾಗಿದೆ.

ಇನ್ನಷ್ಟು ಬೆಂಗಳೂರು ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government has taken many initatives and took 10 important decisions for allround development of the state in a cabinet meeting which took place on Sep 6th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more