ಐಎಂಎ ವಂಚನೆ ರುವಾರಿ ಮನ್ಸೂರ್ ಖಾನ್ ಶೀಘ್ರ ಭಾರತಕ್ಕೆ
ಬೆಂಗಳೂರು, ಜೂನ್ 29: ಬಹುಕೋಟಿ ಐಎಂಎ ವಂಚನೆ ಪ್ರಕರಣದ ರುವಾರಿ ಮನ್ಸೂರ್ ಖಾನ್‌ನನ್ನು ಭಾರತಕ್ಕೆ ಕರೆತರಲು ಎಸ್‌ಐಟಿ ಮತ್ತು ಇಡಿ ಸತತ ಪ್ರಶ್ರಮ ಪಡುತ್ತಿದ್ದು, ಕೆಲವೇ ದಿನಗಳಲ್ಲಿ ಮನ್ಸೂರ್ ಖಾನ್ ಭಾರತಕ್ಕೆ ಬರುವ ಸಂಭವ ಇದೆ.
ಜೂನ್ 16 ರಂದು ಭಾರತ ಬಿಟ್ಟು ಪಲಾಯನ ಮಾಡಿದ ಮನ್ಸೂರ್ ಖಾನ್ ದುಬೈ ಬಳಿಯ ಯಾವುದೋ ಸ್ವತಂತ್ರ್ಯ ಪ್ರದೇಶದಲ್ಲಿ ಅಡಗಿದ್ದಾನೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈಗಾಗಲೇ ಮನ್ಸೂರ್ ಮೇಲೆ ರೆಡ್ ಕಾರ್ನರ್ ನೊಟೀಸ್ ಹೊರಡಿಸಲಾಗಿದ್ದು, ಆತನ ಪತ್ತೆಗೆ ಇಂಟರ್‌ಪೋಲ್ ನೆರವು ಸಹ ಕೇಳಲಾಗಿದೆ.

ಬೆಂಗಳೂರಿನ ಪೊಲೀಸ್ ಅಧಿಕಾರಿಗಳು ಸಹ ಮನ್ಸೂರ್ ಖಾನ್ ಜಾಡು ಹಿಡಿದು ದುಬೈ ವಿಮಾನ ಹತ್ತಲು ತಯಾರಿ ನಡೆಸಿದ್ದು, ಕೆಲವೇ ದಿನಗಳಲ್ಲಿ ಆತನನ್ನು ಬೆಂಗಳೂರಿಗೆ ಕರೆತರುವ ವಿಶ್ವಾಸದಲ್ಲಿದ್ದಾರೆ.
ಮನ್ಸೂರ್ ಖಾನ್ ಐಎಂಎ ಸಂಸ್ಥೆಯ ಹೆಸರಿನಲ್ಲಿ ಸುಮಾರು 4000 ಕೋಟಿ ರೂಪಾಯಿ ಹಣವನ್ನು ಬಂಡವಾಳ ಹೂಡಿಕೆದಾರರಿಗೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಆತನ 209 ಕೋಟಿ ಆಸ್ತಿಯನ್ನು ಈ ವರೆಗೆ ಜಪ್ತಿ ಮಾಡಲಾಗಿದೆ.












Click it and Unblock the Notifications